Advertisement
2015ರ ಪ್ಯಾರಿಸ್‌ನಲ್ಲೇ ಆಗಿತ್ತು ತೀರ್ಮಾನಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಬಹು ಹಿಂದೆಯೇ ಕಂಡು ಬಂದಿದೆ. ಇದರಿಂದಾಗಿಯೇ ಜಗತ್ತಿನಲ್ಲಿ ಸೈಕ್ಲೋನ್‌ಗಳ ಹೆಚ್ಚಳ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಸಂಭವಿಸುತ್ತಲೇ ಇವೆ. ಹೀಗಾಗಿ 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಶೃಂಗದಲ್ಲಿ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊಂಡಾಟದಿಂದಾಗಿ ಈ ಪ್ಯಾರಿಸ್ ಶೃಂಗದ ನಿರ್ಧಾರ ಜಾರಿಯಾಗುವಲ್ಲಿ ತಡವಾಗಿತ್ತು. ಈಗಲೂ ಈ ಬಗ್ಗೆ ನಿರ್ಧಾರವಾಗಿಲ್ಲ.
ಜಿ20ರ ಗುಂಪಿನಲ್ಲಿ ಬಹುತೇಕ ಮುಂದುವರಿದ ದೇಶಗಳೇ ಇವೆ. ಅಂದರೆ, ಈ ಗುಂಪಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಭಾರತ, ಇಂಡೋನೇಶಿಯಾ, ಇಟಲಿ, ಮೆಕ್ಸಿಕೋ, ರಷ್ಯಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಐರೋಪ್ಯ ಒಕ್ಕೂಟ, ಸ್ಪೈನ್. ಜಾಗತಿಕ ಮಾಲಿನ್ಯದಲ್ಲಿ ಈ ದೇಶಗಳ ಪಾಲು ಶೇ.80ರಷ್ಟು. ಈ ರಾಷ್ಟ್ರಗಳು ನಿಯಂತ್ರಣಕ್ಕೆ ತಂದು, ಇಂಗಾಲದ ಡೈ ಆಕ್ಸೆ„ಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಿದರೆ, ತಂತಾನೇ ಜಾಗತಿಕ ತಾಪಮಾನವೂ ಇಳಿಯಲಿದೆ. ಹೀಗಾಗಿ, ಈಗ ಗ್ಲ್ಯಾಸ್ಗೋದಲ್ಲಿ ಆರಂಭವಾಗಿರುವ ಶೃಂಗದಲ್ಲಿ ಜಿ20 ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಚರ್ಚಿಸಲಾಗುತ್ತದೆ. ಇದನ್ನೂ ಓದಿ:ರಷ್ಯಾ ಲಸಿಕೆ ಅಭಿಯಾನ ಫ್ಲಾಪ್? ಸ್ಫುಟ್ನಿಕ್ ವಿ ಕೋವಿಡ್ ಲಸಿಕೆ ಬಗ್ಗೆ ಜನರ ನಿರ್ಲಕ್ಷ್ಯ
Related Articles
ಮೂರು ವರ್ಷಗಳ ಹಿಂದೆ ವಿಜ್ಞಾನಿಗಳು 2 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ ಅದು ಸೇಫ್ ಎಂದು ಹೇಳಿದ್ದರು. ಆದರೆ ಈ ಮೂರು ವರ್ಷಗಳಿಂದ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು, 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ ಅದು ಸುರಕ್ಷಿತ ಎಂದು ಹೇಳಿದ್ದಾರೆ. ಆದರೆ, ಇದಕ್ಕಿಂತ ಕಡಿಮೆ ಮಾಡುವುದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತು. ಏಕೆಂದರೆ, ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಕೈಗಾರಿಕೆಗಳು ಇರಲೇಬೇಕು.
Advertisement
2 ಡಿಗ್ರಿ ಸೆ.ನಿಂದ ಇಳಿಸಿದ್ದು ಏಕೆ?ವಿಶೇಷವೆಂದರೆ, 1995ರಲ್ಲಿ ಆರ್ಥಿಕ ತಜ್ಞ ವಿಲಿಯಂ ನಾರ್ಡೂಸ್ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿ, ಪರವಾಗಿಲ್ಲ ಎಂದು ಗುರಿಯನ್ನು ನಿಗದಿ ಮಾಡಿದ್ದರು. ಇದಕ್ಕಿಂತ ಹೆಚ್ಚು ಬಿಸಿಯಾಗಬಾರದು ಎಂದಿದ್ದರು. ಈ ಬಳಿಗ 1990ರಲ್ಲಿ ಐರೋಪ್ಯ ಒಕ್ಕೂಟವೂ 2 ಡಿಗ್ರಿ ಸೆಲ್ಸಿಯಸ್ ಟಾರ್ಗೆಟ್‌ಗೆ ಒಪ್ಪಿಕೊಂಡಿತ್ತು. ಆದರೆ, ಈ 2 ಡಿಗ್ರಿ ಸೆಲ್ಸಿಯಸ್ ಟಾರ್ಗೆಟ್‌ಗೆ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳು ಆಕ್ಷೇಪವೆತ್ತಿದ್ದವು. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮಟ್ಟ ಏರಿಕೆಯಾಗಿ ನಾವು ಮುಳುಗುವ ಸ್ಥಿತಿ ಬರುತ್ತದೆ ಎಂದೇ ವಾದಿಸಿದ್ದವು.