ಬಂಗಾರಪೇಟೆ: ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುತ್ತಿದ್ದ ವೇಳೆ ರೈತರಿಗೆ ಸರ್ಕಾರವು ಬೆನ್ನಲುಬಾಗಿ ನಿಂತು ಸಾಲ, ಬಡ್ಡಿ ಮನ್ನಾ ಮಾಡಿ ರೈತರ ಹಿತ ಕಾಪಾಡಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಪ್ರಾಂಗಣದಲ್ಲಿ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1.46 ಕೋಟಿ ವಿವಿಧ ಸಾಲಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಪಿಕಾರ್ಡ್ ಬ್ಯಾಂಕ್ ನಿಂದ ಕಡಿಮೆ ದರದ ಬಡ್ಡಿಯಲ್ಲಿ ಸಾಲ ನೀಡ ಲಾಗುತ್ತಿದೆ. ಕ್ಲಿಷ್ಕಕರ ಪರಿಸ್ಥಿತಿಯಲ್ಲಿಯೂ ಸಹ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ.ನಾರಾ ಯಣಸ್ವಾಮಿ ನೇತೃತ್ವದಲ್ಲಿ 30 ರೈತರಿಗೆ ಟ್ರ್ಯಾಕ್ಟರ್, 24 ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ ಮಾಡಲು ಹಾಗೂ 11 ರೈತರಿಗೆ ಕುರಿ ಸಾಕಾಣಿಕೆ ಮಾಡಲು ಸಾಲ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ. ನಾರಾಯಣ ಸ್ವಾಮಿ ಅವರನ್ನು ಎರಡು ಬಾರಿ ಅಧ್ಯಕ್ಷರನ್ನಾಗಿ ಮಾಡಲು ಇವರ ಕಾರ್ಯವೈಖರಿ ಹಾಗೂ ರೈತ ಪರ ಇರುವ ಕಾಳಜಿಯನ್ನು ಮೆಚ್ಚಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಿಕಾರ್ಡ್ ಬ್ಯಾಂಕ್‌ನಲ್ಲಿ ಈ ಹಿಂದೆ ನೀಡಿದ್ದ ಸಾಲ ವಸೂಲಿ ಮಾಡುವುದಕ್ಕೆ ಆಗುತ್ತಿರಲಿಲ್ಲ ಎಂದರು.
ಅಭಿನಂದನೆ: ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ, ಸಿಬ್ಬಂದಿ ವರ್ಗವು ರೈತರನ್ನು ಮನವೊಲಿಸಿ ನಿಯಮಾನುಸಾರವಾಗಿ ಅವಧಿಗೂ ಮುನ್ನವೇ ಸಾಲ ಮರು ಪಾವತಿ ಮಾಡಿಸುತ್ತಿರುವುದರಿಂದ ಹೆಚ್ಚಾಗಿ ಸಾಲ ನೀಡುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ. ನಾರಾ ಯಣ ಸ್ವಾಮಿ, ತಾಪಂ ಅಧ್ಯಕ್ಷ ಟಿ.ಮಹದೇವ್, ಎಪಿಎಂಸಿ ಮಾಜಿ ಅಧ್ಯಕ ಕಾಮಾಂಡಹಳ್ಳಿ ಎಸ್.ನಾರಾಯಣಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ವೆಂಕಟಪ್ಪ, ವೆಂಕಟಾಚಲಪತಿ, ಸದಾನಂದ, ಕುಪ್ಪಣ್ಣ, ವೆಂಕಟಪ್ಪ, ಬಿ.ಎನ್. ಶಶಿಕಾಂತ್, ಪ್ರಭಾಕರ್, ಅಶ್ವತ್ಥ ನಾರಾಯಣ ಗೌಡ, ರಾಜೇಶ್ವರಿ, ಬ್ಯಾಂಕ್ ವ್ಯವಸ್ಥಾಪಕ ಜಿ.ಪುರುಷೋತ್ತಮ್ ಹಾಜರಿದ್ದರು.