ಬಂಟ್ವಾಳ: ಗ್ರಾಮ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಪಣತೊಡಬೇಕು. ಶಾಸಕನ ನೆಲೆಯಲ್ಲಿ ಬಾಳ್ತಿಲ ಗ್ರಾ.ಪಂ. ಅಭಿವೃದ್ಧಿಗೆ 1.35 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಜು. 5ರಂದು ಬಾಳ್ತಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಗ್ರಾಮದ ಕಡೆ ಶಾಸಕರ ನಡೆ ಗ್ರಾಮ ಸ್ಪಂದನ ಕಾರ್ಯ ಕ್ರಮದಲ್ಲಿ ಅವರು ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಸಿ ಮಾತನಾಡಿದರು. ಬಾಕಿಯಾದ ಅಭಿವೃದ್ಧಿ ಕಾರ್ಯಗಳು, ಜನರ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದುಕೊಂಡು ಸರಕಾರದ ಯೋಜನೆಗಳು ಸರಿಯಾಗಿ ಜಾರಿಯಾಗುವಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಹೇಳಿದರು. ಪಂ.ನಲ್ಲಿ ಶ್ಮಶಾನ ಕಡ್ಡಾಯವಾಗಿ ಇರಲೇಬೇಕು. ಸಮಸ್ಯೆ ಇದ್ದರೆ ಕಂದಾಯ ಅಧಿಕಾರಿಗಳು ಪರಿಹರಿಸಿ ಕೊಡಬೇಕು. ಹೌಸಿಂಗ್ ಸೈಟ್ ನಿರ್ಮಾಣ ಕುರಿತು ಯೋಜನೆ ರೂಪಿಸುವಂತೆ ತಿಳಿಸಿದರು. ನರೇಗಾ, ನಿವೇಶನ ಯೋಜನೆ, ತ್ಯಾಜ್ಯ ನಿರ್ವಹಣೆ, ನೀರಿನ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡು ಶೀಘ್ರ ಕೆಲಸಗಳು ಅನುಷ್ಠಾನ ಆಗುವಂತೆ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಇದೇ ಸಂದರ್ಭ 94ಸಿ ಫಲಾನುಭವಿ ಗಳಿಗೆ, ಅಂಗವಿಕಲ, ಕಂಪ್ಯೂಟರ್ ಶಿಕ್ಷಣ ಉತ್ತೇಜನದ ಚೆಕ್ ವಿತರಣೆ ಮಾಡಿದರು. ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲಾ ಚಾರ್ಯ, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಟ್ಟಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಪಿ.ಎಸ್. ಮೋಹನ್, ಆನಂದ ಶೆಟ್ಟಿ, ವಿಶ್ವನಾಥ ನಾಯ್ಕ, ವಸಂತ ಸಾಲ್ಯಾನ್, ಗುಲಾಬಿ, ಪುಷ್ಪಾ ಬಿ. ಶೆಟ್ಟಿ, ಜಯಶ್ರೀ ಗಣೇಶ್, ಶಿವರಾಜ್, ಸುಂದರ ಸಾಲ್ಯಾನ್, ವೀಣಾ, ರೇಣುಕಾ, ವೆಂಕಟರಾಯ ಪ್ರಭು, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಾಲಭವನ ಮಾಜಿ ರಾಜ್ಯಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್,
ಪ್ರಮುಖರಾದ ಚೆನ್ನಪ್ಪ ಆರ್. ಕೋಟ್ಯಾನ್, ದಿನೇಶ್ ಅಮೂrರು, ಬಿ. ದೇವದಾಸ ಶೆಟ್ಟಿ, ಬಿ.ಕೆ.ಅಣ್ಣಿ ಪೂಜಾರಿ, ಗಣೇಶ್ ರೈ ಮಾಣಿ, ಅಭಿಷೇಕ್ ರೈ ವಿಟ್ಲ, ರಾಧಾಕೃಷ್ಣ ಅಡ್ಯಂತ್ಯಾಯ, ಆನಂದ ಎ. ಶಂಭೂರು, ಲೋಕಾನಂದ ಏಳ್ತಿಮಾರ್, ಸುರೇಶ್ ಶೆಟ್ಟಿ ಕಾಂಜಿಲ, ಶರತ್ ನೀರಪಾದೆ, ರಮೇಶ್ ಕುದ್ರೆಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಅಶೋಕ್, ಚಂದ್ರಶೇಖರ್ ಚೆಂಡೆ, ಲೋಹಿತಾಕ್ಷ ಬೆರ್ಕಳ, ಗಣೇಶ್ ಶೆಟ್ಟಿ ಸುಧೆಕಾರ್, ಪಂಚಾಯತ್ ರಾಜ್ ಎಂಜಿನಿಯರ್ ಪದ್ಮರಾಜ್, ಪಿ.ಡಿ.ಒ. ಸಂಧ್ಯಾ, ಕಂದಾಯ ನಿರೀಕ್ಷಕ ರಾಮ, ಗ್ರಾಮಕರಣಿಕ ನಾಗರಾಜ್, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಬಾಳ್ತಿಲ ವಲಯ ಮೇಲ್ವಿಚಾರಕಿ ಶಾಲಿನಿ, ವೈದ್ಯಾಧಿಕಾರಿ ವಿಶ್ವೇಶ್ವರ ವಿ.ಕೆ., ಮೆಸ್ಕಾಂ ಜೆ.ಇ. ಸದಾಶಿವ ಜೆ. ಉಪಸ್ಥಿತರಿದ್ದರು.
ರಸ್ತೆ ಉದ್ಘಾಟನೆ, ಸವಲತ್ತು ವಿತರಣೆ
5 ಲಕ್ಷ ರೂ. ವೆಚ್ಚದ ಕಲ್ಲಡ್ಕ- ಪ್ರತಾಪನಗರ ರಸ್ತೆ, 6 ಲಕ್ಷ ರೂ. ವೆಚ್ಚದ ಪಳನೀರು ಗುಡ್ಡ ರಸ್ತೆ, 10 ಲಕ್ಷ ರೂ. ವೆಚ್ಚದ ದಾಸಕೋಡಿ-ಪನಾರಮಜಲು ರಸ್ತೆ ಉದ್ಘಾಟನೆಗೊಂಡಿತು.
7 ಮಂದಿಗೆ 94ಸಿ ಹಕ್ಕುಪತ್ರ, ತಲಾ ರೂ. 5 ಸಾವಿರದಂತೆ 3 ಮಂದಿಗೆ ಕಂಪ್ಯೂಟರ್ ಖರೀದಿ ಚೆಕ್ ವಿತರಣೆ, ತಲಾ ರೂ. 5 ಸಾವಿರದಂತೆ 5 ಮಂದಿ ಅಂಗವಿಕಲ ರಿಗೆ ಚೆಕ್ ವಿತರಣೆ ನಡೆಯಿತು. ರಸ್ತೆ ತಡೆಗೋಡೆ, ಮನೆ ನಿವೇಶನ, ಚರಂಡಿ ನಿರ್ಮಾಣ, ತ್ಯಾಜ್ಯ ವಿಲೇವಾರಿ, ಶ್ಮಶಾನ ನಿರ್ಮಾಣ, ವಿದ್ಯುತ್ ತಂತಿ ಬದಲಾವಣೆ ಬಗ್ಗೆ ಒಟ್ಟು 80 ಅರ್ಜಿಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು.