Advertisement

Kerala: ಶ್ರೀಗಂಧದ ಒಂದು ಮರಕ್ಕೆ 1.25 ಕೋಟಿ ರೂ.!

09:34 PM Sep 15, 2023 | Team Udayavani |

ತಿರುವನಂತಪುರ: ಕೇರಳದ ಮರಯೂರ್‌ ಶ್ರೀಗಂಧದ ಮರವು ತನ್ನ ಸಾಟಿಯಿಲ್ಲದ ಪರಿಮಳಕ್ಕಾಗಿ ಪ್ರಖ್ಯಾತವಾಗಿದೆ. ಈ ತಿಂಗಳು ನಡೆದ ಈ ಮರಗಳ ಹರಾಜಿನಲ್ಲಿ ಕೇರಳ ಅರಣ್ಯ ಇಲಾಖೆಗೆ ದಾಖಲೆಯ ಆದಾಯ ಹರಿದುಬಂದಿದೆ.

Advertisement

ಈ ತಿಂಗಳ ಹರಾಜಿನಲ್ಲಿ ಒಟ್ಟು 37.22 ಕೋಟಿ ರೂ. ಆದಾಯ ಬಂದಿದೆ. ಕರ್ನಾಟಕ ಸೋಪ್ಸ್‌, ಔಷಧಿ, ಜೈಪುರ್‌ ಸಿಎಂಟಿ ಆ್ಯಂಡ್‌ ಇಂಡಿಯಾ ಲಿಮಿಟೆಡ್‌, ಕೆಎಫ್ಡಿಸಿ ಮತ್ತು ದೇವಸ್ವಮ್‌ ಬೋರ್ಡ್‌ ಹರಾಜಿನಲ್ಲಿ ಭಾಗವಹಿಸಿತ್ತು. ಪ್ರಮುಖವಾಗಿ ಕರ್ನಾಟಕ ಸೋಪ್ಸ್‌ 27 ಕೋಟಿ ರೂ.ಗಳಿಗೆ ಒಟ್ಟು 25.99 ಟನ್‌ಗಳ ಮರಯೂರ್‌ ಶ್ರೀಗಂಧದ ಮರಗಳನ್ನು ಖರೀದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಕೇವಲ ಒಂದೇ ಒಂದು ಮರಯೂರ್‌ ಶ್ರೀಗಂಧದ ಮರ ದಾಖಲೆಯ 1.25 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಈ ಪೈಕಿ ಇದರ ಬೇರುಗಳೇ 27.34 ಲಕ್ಷ ರೂ.ಗಳಿಗೆ ಮಾರಾಟವಾಗಿದೆ ಎಂದು ಕೇರಳ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next