Advertisement

ರಾಮ ಮಂದಿರ ನಿಧಿಗೆ 1.20ಲಕ್ಷ  ಸಂಗ್ರಹ

03:44 PM Feb 01, 2021 | Team Udayavani |

ಚಿಂಚೋಳಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ನಿ ಧಿಗೆ ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಒಟ್ಟು 1.20 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಕಿರಣರೆಡ್ಡಿ ಪಾಟೀಲ ತಿಳಿಸಿದ್ದಾರೆ.

Advertisement

ಮಿರಿಯಾಣದ ಗ್ರಾಮಸ್ಥರು, ಕಾರ್ಮಿಕರು, ಮಹಿಳೆಯರು, ಸರಕಾರಿ ಶಿಕ್ಷಕರು, ಉದ್ಯಮಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದ್ದಾರೆ. ಮಿರಿಯಾಣ, ಕಿಷ್ಟಾಪುರ, ಬೈರಂಪಳ್ಳಿ ಗ್ರಾಮಗಳಲ್ಲಿ ಕಲ್ಲುಗಣಿಗಳು ಬಂದ್‌ ಆಗಿರುವುದರಿಂದ ಕಡಿಮೆ ನಿಧಿ ಸಂಗ್ರಹಣೆ ಆಗಿದೆ ಎಂದರು.

ಇದನ್ನೂ ಓದಿ:ಮಡಿವಾಳ ಸಮಾಜಕ್ಕೆ ಅನ್ಯಾಯ

ಬಿಜೆಪಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಜಗಜೀವನರೆಡ್ಡಿ ಪಾಟೀಲ, ಕಾರ್ತಿಕರೆಡ್ಡಿ ನರಸಿಂಹಲು ಪೂಜಾರಿ, ಬಸವರಾಜ ಕಲ್ಲೂರ, ವಿಶ್ವನಾಥ, ಕಿಷ್ಟಪ್ಪಾ ಪೂಜಾರಿ, ಸಿ.ಸುಧಾಕರ, ಸಿದ್ದಯ್ಯ ಬಿರಿನೆಲ್ಲಿ, ಬಿ.ರಾಜಕುಮಾರ, ನರೇಂದ್ರಗೌಡ, ರತ್ನಾಕರ, ಸಂದೀಪ, ರಾಣೋಜಿ, ನರೇಂದ್ರ, ವಿನಯ, ಶ್ರೀಕಾಂತ, ನರಸಿಂಗರಾವ್‌, ಕಿಷ್ಟಸಾಯಿ, ಬಾಲುಗೌಡ ಇನ್ನಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next