Advertisement

2020ರಲ್ಲಿ ರಸ್ತೆ ಅಪಘಾತಕ್ಕೆ 1.20 ಲಕ್ಷ ಮಂದಿ ಬಲಿ! 

12:07 AM Sep 20, 2021 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ವಾಹನ ಸಂಚಾರ ಬಹುತೇಕ ಕಡಿಮೆಯಾಗಿತ್ತಾದರೂ ಆ ಸಮಯದಲ್ಲಿ ರಸ್ತೆಯಲ್ಲಿ ಪ್ರಯಾಣಿಕರ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಅಪಘಾತಕ್ಕೆ 1.20 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

Advertisement

ಹೀಗೆಂದು ರಾಷ್ಟ್ರೀಯ ಅಪರಾದ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ. 2020ರಲ್ಲಿ ನಿರ್ಲಕ್ಷ್ಯದ ಚಾಲನೆಗೆ 1.20 ಲಕ್ಷ ಮಂದಿ ಬಲಿಯಾಗಿದ್ದು, ಪ್ರತೀ ದಿನ ಸರಾಸರಿ 328 ಮಂದಿ ಪ್ರಾಣ ಬಿಟ್ಟಿದ್ದಾರೆ. 2019ರಲ್ಲಿ 1.36 ಲಕ್ಷ ಮಂದಿ, 2018ರಲ್ಲಿ 1.35 ಲಕ್ಷ ಮಂದಿ ಅಪಘಾತದಿಂದ ಮೃತರಾಗಿದ್ದರು. 2020ರಲ್ಲಿ 41,196 ಹಿಟ್‌ ಆ್ಯಂಡ್‌ ರನ್‌ ಪ್ರಕರಣ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next