Advertisement

ದೇಶಿಯ ವಿಮಾನಯಾನದಲ್ಲಿ 1.18 ಶೇ. ಹೆಚ್ಚಳ

10:02 AM Oct 18, 2019 | Team Udayavani |

ಹೊಸದಿಲ್ಲಿ: ಅಟೋ ಮೊಬೈಲ್‌ ಕ್ಷೇತ್ರದಂತೆ ವಿಮಾನಯಾನ ಸಂಸ್ಥೆಗಳೂ ಕುಸಿತದತ್ತ ದಾಪುಗಾಲು ಇಡುವ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿತ್ತು.

Advertisement

ಆದರೆ ಈ ಎಲ್ಲಾ ಊಹಾ ಪೋಹಗಳನ್ನು ಬದಿಗೊತ್ತಿ ದೇಶಿಯ ವಿಮಾನಯಾನದಲ್ಲಿ ಚೇತರಿಕೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ದೇಶಿಯ ವಿಮಾನಯಾನ ಸೇವೆಯಲ್ಲಿ ಶೇ. 1.18 ಹೆಚ್ಚಳ ಕಂಡು ಬಂದಿದೆ.

2018ರ ಅಗಸ್ಟ್‌ ಮತ್ತು 2019 ಅಗಸ್ಟ್‌ನಲ್ಲಿ ವಿಮಾನ ಸೇವೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮತ್ತು ಹಿಂದಿನ ವರ್ಷ ಶೇ. 3.87 ಹೆಚ್ಚಳ ಕಂಡು ಬಂದಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ 1.18 ಶೇ. ವೃದ್ಧಿಯಾಗಿದೆ. ಅಂದರೆ ಕಳೆದ ವರ್ಷ 11.35 ಮಿಲಿಯನ್‌ ಪ್ರಯಾಣಿಕರು ಕಂಡು ಬಂದಿದ್ದರೆ ಈ ವರ್ಷ 11.79 ಪ್ರಯಾಣಿಕರು ದೇಶಿಯ ವಿಮಾನ ಸೇವೆ ಬಳಸಿದ್ದಾರೆ.

ಇಂದಿಗೂ ಪ್ರಸ್ತುತ ದೇಶಿಯ ವಿಮಾನಯಾನದ ಶೇ. 48.2 ಪಾಲನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ ನ ಪಾಲು ಇಳಿಕೆಯಾಗಿದೆ. ಅಗಸ್ಟ್‌ನಲ್ಲಿ 15.5 ಇದ್ದರೆ ಸೆಪ್ಟಂಬರ್‌ ಸುಮಾರಿಗೆ 14.7ಕ್ಕೆ ಇಳಿದಿದೆ. ಇನ್ನು ಏರ್‌ಇಂಡಿಯಾ ಶೇ. 13, ಗೋ ಏರ್‌ ಶೇ. 11.5, ಏರ್‌ಏಷ್ಯಾ ಶೇ. 6.3 ಮತ್ತು ವಿಸ್ತಾರ ದ ಪಾಲು ಶೇ. 5.8 ಇದೆ. ಸೆಪ್ಟಂಬರ್‌ ತಿಂಗಳ 11.79 ಮಿಲಿಯನ್‌ ಪ್ರಯಾಣಿಕರಿಂದ ಒಟ್ಟು 701 ದೂರುಗಳು ಮಾತ್ರ ಡಿಜಿಸಿಎಗೆ ಬಂದಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next