Advertisement

1.14 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ; ಸಂಪುಟ ಉಪ ಸಮಿತಿ ತೀರ್ಮಾನ

01:01 AM Apr 19, 2022 | Shreeram Nayak |

ಬೆಂಗಳೂರು: ಬೆಂಬಲ ಬೆಲೆಯಡಿ 1.14 ಲಕ್ಷ ಮೆ. ಟನ್‌ ರಾಗಿಯನ್ನು ಹೆಚ್ಚುವರಿಯಾಗಿ ಖರೀದಿಸಲು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ , 1.14 ಲಕ್ಷ ಮೆ. ಟನ್‌ ರಾಗಿಯನ್ನು ಹೆಚ್ಚುವರಿಯಾಗಿ ಖರೀದಿ ಮಾಡಲು ತೀರ್ಮಾನಿಸಿದ್ದು, ಇದಕ್ಕೆ 487 ಕೋ. ರೂ. ವೆಚ್ಚವಾಗಲಿದೆ ಎಂದರು.

ಇದನ್ನೂ ಓದಿ:ಛತ್ತೀಸ್‌ಗಢ: ನಕ್ಸಲರ ದಾಳಿಯಲ್ಲಿ ನಾಲ್ವರು ಪೊಲೀಸ್‌ ಸಿಬ್ಬಂದಿಗೆ ಗಾಯ

ಈಗಾಗಲೇ 2.10 ಲಕ್ಷ ಮೆ. ಟನ್‌ ರಾಗಿ ಖರೀದಿಸಲಾಗಿತ್ತು. ಮತ್ತಷ್ಟು ರಾಗಿ ಖರೀದಿಸಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

Advertisement

ಹಾಸನ, ಚಿಕ್ಕಮಗಳೂರು, ಕೋಲಾರ, ಚಿಕ್ಕ ಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿ ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿಗೆ ಆಗ್ರಹವಿತ್ತು. ವಿಧಾನಮಂಡಲ ಅಧಿವೇಶನದಲ್ಲೂ ಈ ಕುರಿತು ಪ್ರಸ್ತಾವವಾಗಿ ಸರಕಾರದ ಪರವಾಗಿ ಸಿಎಂ ರಾಗಿ ಖರೀದಿ ಭರವಸೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next