Advertisement

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

01:40 PM Jan 04, 2025 | Team Udayavani |

ಕಲಬುರಗಿ: ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ (ಹೊರ ಹೋಗುವ ಮುಖ್ಯಮಂತ್ರಿ) ಆಗಿದ್ದಾರೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ‌ಅಶೋಕ ಹೇಳಿದರು.

Advertisement

ಸಚಿನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‌

ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎನ್ನುವ ಧಾಟಿಯಲ್ಲೇ ಡಿಸಿಎಂ ಶಿವಕುಮಾರ ಹೇಳಿದ್ದಾರೆ.‌ ಅದಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರಿಗೆ ನೊಟೀಸ್ ಬರಲಿದೆ. ಒಟ್ಟಾರೆ ಸಣ್ಣ ಸಾಸಿವೆ ಕಾಳು ಕದ್ದರೂ ಬಿಜೆಪಿ ಬಿಡುವುದಿಲ್ಲ ಎಂದು ಗುಡುಗಿದರು.

ರಾಜ್ಯ ಸರ್ಕಾರ ದಿವಾಳಿಯಾಗಿದೆ. ಇದೇ ಕಾರಣಕ್ಕೆ ಹಾಲು, ಆಲ್ಕೋಹಾಲ್, ಸ್ಯ್ಟಾಂಪ್ ಡ್ಯೂಟಿ, ತೈಲ ಸೆಸ್ ಹೆಚ್ಚಳ, ಸಾರಿಗೆ ಸೇರಿ ಒಟ್ಟಾರೆ ಎಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಕರ್ನಾಟಕ ಈ ಹಿಂದಿನ ಬಿಹಾರಕ್ಕಿಂತ ಅಧೋಗತಿಗೆ ಹೋಗುತ್ತಿದೆ ಎಂದು ಆರ್.‌ಅಶೋಕ ವಾಗ್ದಾಳಿ ನಡೆಸಿದರು.

ಬಿಜೆಪಿ ಹೋರಾಟಗಾರರಿಗೆ ಟೀ, ಕಾಫಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿರುವುದು ಸಚಿನ್ ಕುಟುಂಬಕ್ಕೆ ಅದರಲ್ಲೂ ಸಣ್ಣ ಸಮುದಾಯವಾಗಿರುವ ವಿಶ್ವಕರ್ಮಕ್ಕೆ ಮಾಡಿರುವ ಅವಮಾನ ಎಂದು ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಂವಿಧಾನದ ಮೇಲೆ ಅವರಿಗೆ ನಂಬಿಕೆ ಇದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ.‌ ಬಿಜೆಪಿ ನಾಯಕರ ಹತ್ಯೆಗೆ ಮಹಾರಾಷ್ಟ್ರ ಮೂಲದವರಿಗೆ ಸುಪಾರಿ ಕೊಡಲಾಗಿದೆ. ಹೀಗಾಗಿ ಪ್ರಕರಣ ಸಿಬಿಐಗೆ ಕೊಡಬೇಕೆಂದರು.

ಪ್ರತಿಭಟನೆಗೆ ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ತಂಪು ಪಾನೀಯ ವ್ಯವಸ್ಥೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇನು ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಹೆಣ್ಣು ಕೇಳಿ ಸಂಬಂಧ ಬೆಳೆಸಲು ಹೋಗುತ್ತಿಲ್ಲ.  ಓರ್ವ ಬಡ ಗುತ್ತಿಗೆದಾರನ ಸಾವಿಗೆ ನ್ಯಾಯ ಕೇಳಲು ಹೋಗುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next