ಬಿಹಾರ : ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ 13 ಕೋಟಿ ರೂಪಾಯಿ ಮೌಲ್ಯದಲ್ಲಿ ನಿರ್ಮಿಸಲಾದ ಸುಮಾರು 206 ಮೀಟರ್ ಉದ್ದದ ಸೇತುವೆಯೊಂದು ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಡಿಸೆಂಬರ್ 18(ಭಾನುವಾರ) ರಂದು ಬೆಳಗ್ಗೆ ಬಿಹಾರದ ಬೇಗುಸರಾಯ್‍ನಲ್ಲಿ ಗಂಡಕ್ ನದಿಗೆ ನಿರ್ಮಿಸಲಾದ ಸೇತುವೆಯ ಮಧ್ಯ ಭಾಗ ಕುಸಿದು ಬಿದ್ದಿದೆ, ಅದೃಷ್ಟವಶಾತ್ ಇನ್ನೂ ಉದ್ಘಾಟನೆಗೊಳ್ಳದ ಕಾರಣ ಈ ಸೇತುವೆಯನ್ನು ಸಾರ್ವಜನಿಕರ ಸಂಚಾರ ನಿರ್ಬಂಧಿಸಿತ್ತು ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
206 ಮೀಟರ್ ಉದ್ದದ ಸೇತುವೆ ಕಳೆದ ಕೆಲವು ದಿನಗಳಿಂದ ಬಿರುಕು ಬಿಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಭಾನುವಾರ ಮುಂಜಾನೆ ಸೇತುವೆಯ ಮುಂಭಾಗ ಕುಸಿದು ಬಿದ್ದಿದೆ.
2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು ಆದರೆ ಜನರ ಅದೃಷ್ಟವೋ ಏನೋ ಸೇತುವೆ ಮಾತ್ರ ಉದ್ಘಾಟನೆಗೊಂಡಿರಲಿಲ್ಲ.
ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಸೇತುವೆ ಉದ್ಘಾಟನೆಗೂ ಮುನ್ನವೇ ನೀರುಪಾಲಾಗಿರುವುದು ವಿಪರ್ಯಾಸ. ಈ ಘಟನೆಯಿಂದ ಸೇತುವೆಯ ಕಾಮಗಾರಿ ಯಾವ ಮಟ್ಟದಲ್ಲಿ ಮಾಡಲಾಗಿದೆ ಎಂಬುದು ಪ್ರಶ್ನೆಯಾಗಿದೆ.
ಇದನ್ನೂ ಓದಿ: ಎರಡೂವರೆ ತಿಂಗಳ ಮಗುವನ್ನು ಮಡಿಲಲ್ಲಿಟ್ಟುಕೊಂಡು ಅಧಿವೇಶನಕ್ಕೆ ಆಗಮಿಸಿದ ಶಾಸಕಿ