Advertisement
ಅಬ್ಬಿಗೇರಿ-ಡ.ಸ ಹಡಗಲಿ 10 ಕಿ.ಮೀ, ಜಕ್ಕಲಿ- ಬೂದಿಹಾಳ 1 ಕಿ.ಮೀ, ಬೂದಿಹಾಳ-ಮಾರನಬಸರಿ 1.5 ಕಿ.ಮೀ, ನರೇಗಲ್ಲ-ಗಜೇಂದ್ರಗಡ 16 ಕಿ.ಮೀ, ಕೋಟಮಚಗಿ-ರೋಣ 43 ಕಿ.ಮೀ, ಮಾರನಬಸರಿ-ಹಾಲಕೆರೆ 22 ಕಿ.ಮೀ, ಅಬ್ಬಿಗೇರಿ-ಯರೇಬೇಲೇರಿ 8 ಕಿ.ಮೀ ಹಾಗೂ ಮಧ್ಯದಲ್ಲಿರುವ ಸೇತುವೆ, ಅಬ್ಬಿಗೇರಿ- ಜಕ್ಕಲಿ 5 ಕಿ.ಮೀ, ನರೇಗಲ್ಲ-ಜಕ್ಕಲಿ 16 ಕಿ.ಮೀ, ನಿಡಗುಂದಿ-ಕಳಕಾಪುರ 6 ಕಿ.ಮೀ, ನರೇಗಲ್ಲ- ದ್ಯಾಂಪುರ 8 ಕಿ.ಮೀ, ಅಬ್ಬಿಗೇರಿ- ನಾಗರಾಳ 6 ಕಿ.ಮೀ, ಹಾಲಕೆರೆ ಕ್ರಾಸ್‌ದಿಂದ- ಹಾಲಕೆರೆ ವರೆಗೂ ಸುಮಾರು 8 ಕಿ.ಮೀ ರಸ್ತೆಗಳಲ್ಲಿ ಗುಂಡಿಗಳ ದರ್ಬಾರು ಹೆಚ್ಚಾಗಿದೆ.
Related Articles
ಮಳೆಯಿಂದ ಹದಗೆಟ್ಟಿರುವ ಎಲ್ಲ ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಾರ್ವಜನಿಕರು, ರೈತರು ಹಲವು ಬಾರಿ ಮನವಿ, ಪ್ರತಿಭಟನೆ ಕೈಗೊಂಡರೂ ಅಧಿಕಾರಿಗಳು ಮಾತ್ರ
ಮೌನ ವಹಿಸುತ್ತಿದ್ದಾರೆ.
Advertisement
ರಸ್ತೆ ಅಭಿವೃದ್ಧಿಗೆ ಕೊರೊನಾ ನೆಪ: ಹದಗೆಟ್ಟ ರಸ್ತೆ ಸುಧಾರಣೆ ಮಾಡಿ ಎಂದು ಸಾರ್ವಜನಿಕರು ಜನಪ್ರತಿನಿಧಿಗಳು- ಅಧಿಕಾರಿಗಳ ಹತ್ತಿರ ಹೇಳಿದರೆ ಕೊರೊನಾ ವೈರಸ್‌ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ. ರಸ್ತೆ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುತ್ತ ಅಧಿಕಾರಿಗಳು ಜಜಾರಿಕೊಳ್ಳುತ್ತಿದ್ದಾರೆ.
ಪ್ರತಿ ವರ್ಷ ರಸ್ತೆ ಅಭಿವೃದ್ಧಿ ನೆಪದಲ್ಲಿ ಕೋಟಿ- ಕೋಟಿ ಹಣ ಬಿಡುಗಡೆಯಾಗಿ ರಸ್ತೆಗಳು ಸಿಸಿ ಮತ್ತು ಡಾಂಬರ್ ಕಂಡರೂ ರಸ್ತೆಯಗುಣಮಟ್ಟದಲ್ಲಿ ಇನ್ನೂ ಸುಧಾರಣೆ ಕಂಡಿಲ್ಲ. ರಸ್ತೆ ಅಭಿವೃದ್ಧಿ ಕೆಲಸ ಗುತ್ತಿಗೆ ಪಡೆದ ಗುತ್ತಿಗೆದಾರರು ಲಾಭಕ್ಕಾಗಿ ಬೇಕಾಬಿಟ್ಟಿಯಾಗಿ ರಸ್ತೆ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಂದು ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ಬಿದ್ದಿವೆ. ರಸ್ತೆಗಳ
ಮಧ್ಯ ಭಾಗ ಸಂಪೂರ್ಣ ಹಾಳಾಗಿದ್ದು, ಗುಂಡಿ ಬಿದ್ದಿದೆ. ಕಿತ್ತುಹೋದ ಸೇತುವೆಗಳು ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕೆಲ ರಸ್ತೆ ಎರಡು ಬದಿಯಲ್ಲೂ ಜಾಲಿಗಿಡಗಳು ಬೆಳೆದು ನಿಂತಿವೆ. ಸಂಬಂಧಿಸಿದ ಜನಪ್ರತಿನಿಧಿಗಳು- ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಇದನ್ನೂ ಓದಿ:ಬೆಂಗಳೂರು: ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ರಸ್ತೆ ದುರಸ್ತಿಗೆ ಒತ್ತಾಯ
ರೋಣ- ಗಜೇಂದ್ರಗಡ ತಾಲೂಕಿನಿಂದ ನರೇಗಲ್ಲ ಹೋಬಳಿ ಸುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಹಿಂಗಾರು ಹಂಗಾಮಿನ ಕೃಷಿ ಚುಟುವಟಿಕೆಗಳು ಭರದಿಂದ ಸಾಗಿದ್ದು, ರಸ್ತೆಯಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಕೂಡಲೇ
ಸಂಬಂಧಪಟ್ಟ ಅ ಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಬ್ಬಿಗೇರಿ ಗ್ರಾಮದ ರೈತ ಮಲ್ಲಪ್ಪ ಬಿಲ್ಲ, ಮಲ್ಲಪ್ಪ ಹೊಂಬಳಿ, ಅಶೋಕ ಬಸವರಡ್ಡೇರ ಒತ್ತಾಯಿಸಿದ್ದಾರೆ. – ಸಿಕಂದರ ಎಂ. ಆರಿ