ಚಿತ್ರದುರ್ಗ: ವಾಲ್ಮೀಕಿ, ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮದಿಂದ ಅರ್ಹಫಲಾನುಭವಿಗಳಿಗೆ ನೇರ ಸಾಲ ಸೌಲಭ್ಯದೊರೆತಿದೆ. ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿಮಾಡಿರುವ ಆರೋಪ ಶುದ್ಧ ಸುಳ್ಳು ಎಂದುಸಚಿವ ಬಿ. ಶ್ರೀರಾಮುಲು ಅವರ ಆಪ್ತಸಹಾಯಕ ಹಾಗೂ ಬಿಜೆಪಿ ಮುಖಂಡಪಾಪೇಶ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಫಲಾನುಭವಿಗಳ ಹಣ ದುರ್ಬಳಕೆಮಾಡಿಕೊಂಡಿರುವುದನ್ನು ದಾಖಲೆ ಸಹಿತಸಾಬೀತು ಮಾಡಲಿ ಎಂದು ಸವಾಲುಹಾಕಿದರು.ನಿಗಮದ ವತಿಯಿಂದ ಗುರುತಿಸಿದ 772 ಫಲಾನುಭವಿಗಳಿಗೆ ನೇರ ಸಾಲವಿತರಣೆ ಮಾಡಲಾಗಿದೆ.
ಫಲಾನುಭವಿಗಳಿಗೆಸೌಲಭ್ಯ ತಲುಪಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ಸುಳ್ಳು ಆರೋಪಮಾಡಿರುವ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರ ಮೇಲೆ ಮಾನನಷ್ಟಮೊಕದ್ದಮೆ ದಾಖಲಿಸಲಾಗುವುದು ಎಂದುಎಚ್ಚರಿಕೆ ನೀಡಿದರು.ಫಲಾನುಭವಿಗಳ ಆಯ್ಕೆ, ನೇರ ಸಾಲವಿತರಣೆ ನಿಗಮದ ಜವಾಬ್ದಾರಿ. ಸರ್ಕಾರನಿಗ ದಿ ಮಾಡಿರುವ ನಿಯಮ ಅನುಸರಿಸಿಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಇದರಲ್ಲಿ ಯಾವುದೇ ಅನ್ಯಾಯ, ಅಕ್ರಮ,ವಂಚನೆ ನಡೆದಿಲ್ಲ. ಒಂದು ವೇಳೆ ಇಂತಹಅನುಮಾನಗಳು ಇದ್ದರೆ ತನಿಖೆ ನಡೆಸಲುಅವಕಾಶವಿದೆ. ಸಂಬಂಧಿ ಸಿದ ಅ ಧಿಕಾರಿಗಳವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಳ್ಳಲಿ.ಇದಕ್ಕೆ ವಿನಾಕಾರಣ ಸಚಿವ ಶ್ರೀರಾಮುಲುಹಾಗೂ ನನ್ನನ್ನು ಹೊಣೆ ಮಾಡುವುದುಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಧಾನಸಭಾ ಚುನಾವಣೆಗೆಸ್ಪ ರ್ಧಿಸಿ ಪರಾಭವಗೊಂಡಿದ್ದ ತಿಪ್ಪೇಸ್ವಾಮಿಅವರನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆಸೇರಿಸಿಕೊಂಡಿದ್ದು ಶ್ರೀರಾಮುಲು.ಸಮುದಾಯದ ನಾಯಕರನ್ನುನೋಡಿಕೊಂಡು ಮೊಳಕಕಾಲ್ಮೂರು ಕ್ಷೇತ್ರದಮತದಾರರು ತಿಪ್ಪೇಸ್ವಾಮಿ ಕೈಹಿಡಿದರು.
2013ರಲ್ಲಿ ತಿಪ್ಪೇಸ್ವಾಮಿ ಶಾಸಕರಾಗಿಆಯ್ಕೆಯಾಗಿದ್ದು ಶ್ರೀರಾಮುಲುನೀಡಿದ ಭಿಕ್ಷೆ. ಈಗ ಕಾಂಗ್ರೆಸ್ ಟಿಕೆಟ್‌ಗಿಟ್ಟಿಸಿಕೊಳ್ಳಲು ಹಾಗೂ ಅವರಪಕ್ಷದ ನಾಯಕರನ್ನು ಒಲಿಸಿಕೊಳ್ಳಲುಸಚಿವರನ್ನು ನಿಂದಿಸಲಾಗುತ್ತಿದೆ ಎಂದುಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿಬಿಜೆಪಿ ಮುಖಂಡರಾದ ಜಯಪಾಲಯ್ಯ,ಮಹಾಂತೇಶ್ ನಾಯಕ, ಮಂಜುನಾಥ್‌ಇದ್ದರು.