ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಜನಪ್ರಿಯತೆ ಸಹಿಸಿಕೊಳ್ಳಲಾಗದೆ ಬಿಜೆಪಿ ಅವರ ವಿರುದ್ಧಷಡ್ಯಂತ್ರ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ. ದೇವರಾಜ ಅರಸು ನಂತರಅಹಿಂದ ವರ್ಗಕ್ಕೆ ಹೆಚ್ಚು ಉಪಕಾರ ಮಾಡಿದ ಮುಖ್ಯಮಂತ್ರಿಎಂಬ ಹೆಗ್ಗಳಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ಇದರಿಂದಭೀತಿಗೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.ದಲಿತರಷ್ಟೇ ಅಲ್ಲ ಅಲ್ಪಸಂಖ್ಯಾತ, ಹಿಂದುಳಿದವರ್ಗದವರು ಸ್ವಹಿತಾಸಕ್ತಿಗಾಗಿ ಬಿಜೆಪಿಯ ಜನ ವಿರೋಧಿನಡೆ ಕಂಡೂ ಕೂಡ ಆ ಪಕ್ಷದಲ್ಲಿ ಮೌನವಾಗಿ ಅಧಿಕಾರಕ್ಕಾಗಿಇದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ರಾಜ್ಯ, ದೇಶದಲ್ಲಿ ಜಾತಿ-ಜಾತಿ, ಧರ್ಮ-ಧರ್ಮ ಮಧ್ಯೆ ಕಂದಕ, ದ್ವೇಷಭಾವನೆಯನ್ನು ಬಿಜೆಪಿ ಬಿತ್ತುತ್ತಿದೆ.
ದಲಿತ ವಿರೋಧಿನೀತಿ ಅನುಸರಿಸುತ್ತಿದೆ. ಆದರೂ ಬಿಜೆಪಿಯಲ್ಲಿರುವಅಹಿಂದ ವರ್ಗದ ಜನ ಬಾಯಿ ಬಿಡುತ್ತಿಲ್ಲ. ಒಂದುಕಡೆ ಅನಂತಕುಮಾರ್ ಹೆಗಡೆ, ಸಂವಿಧಾನ ಬದಲಿಸಲುನಾವು ಅ ಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಮತ್ತೂಂದುಕಡೆ ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇಕಾರಣಕ್ಕೂ ಬಿಡುವುದಿಲ್ಲ ಎಂದು ಸಚಿವ ಪ್ರಭು ಚೌಹಾಣ್‌ಹೇಳುತ್ತಿದ್ದಾರೆ. ಈ ಮಧ್ಯೆ ಎಸ್‌ಸಿ-ಎಸ್‌ಟಿಗೆ ನೀಡುತ್ತಿದ್ದಐದು ಲಕ್ಷ ರೂ. ಸಬ್ಸಿಡಿಯನ್ನು ಒಂದು ಲಕ್ಷ ರೂ.ಗೆಇಳಿಸಲಾಗಿದೆ.
ವಿದ್ಯಾರ್ಥಿ ವೇತನ, ಹಾಸ್ಟೇಲ್ ಸೌಲಭ್ಯಕ್ಕೆಸದ್ದಿಲ್ಲದೆ ನಿಧಾನಗತಿಯಲ್ಲಿ ಕಡಿತ ಮಾಡಲಾಗುತ್ತಿದೆ ಎಂದುಆಕ್ಷೇಪ ವ್ಯಕ್ತಪಡಿಸಿದ್ದಾರೆ.ದಲಿತರ ಮೇಲೆ ದೌರ್ಜನ್ಯ, ಮಹಿಳೆ-ಮಕ್ಕಳಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ದಲಿತ ವರ್ಗಕ್ಕೆ ಸಾಲಸೌಲಭ್ಯಕ್ಕೆ ಕಡಿವಾಣ ಹಾಕಿದ್ದರ ಜತೆಗೆ ಸಣ್ಣ ಸಾಲ ನೀಡಲು ಸತಾಯಿಸಲಾಗುತ್ತಿದೆ.
ಶ್ರೀರಾಮುಲುಗೆ ಉಪಮುಖ್ಯಮಂತ್ರಿಸ್ಥಾನ ನೀಡುತ್ತೇಬೆ, ಎಸ್‌ಟಿ ಮೀಸಲಾತಿ ಶೇ. 7.5ಕ್ಕೆಹೆಚ್ಚಳ ಮಾಡುತ್ತೇವೆ ಎಂದು ನಂಬಿಸಿ ಅ ಧಿಕಾರಕ್ಕೆ ಬಂದನಾಯಕ ಸಮುದಾಯಕ್ಕೆ ಬಿಜೆಪಿ ವಂಚನೆ ಮಾಡಿದೆ.ದಲಿತ ವರ್ಗದ ಗೋವಿಂದ ಜಾರಜೋಳ ಅವರಿಗೆ ನೀಡಿದ್ದ ಉಪಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಳ್ಳಲಾಗಿದೆ.
ಇಷ್ಟೆಲ್ಲ ದಲಿತ ವರ್ಗದ ವಿರೋಧಿ ನೀತಿ ಅನುಸರಿಸುತ್ತಿದ್ದರೂಬಿಜೆಪಿಯಲ್ಲಿರುವ ದಲಿತ ವರ್ಗ ಮೌನವಾಗಿರುವುದನ್ನುಕಂಡು ನೋವು ಹಾಗೂ ದಲಿತಪರ ಕಾಳಜಿಯಿಂದಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಆಂಜನೇಯಸಮರ್ಥಿಸಿಕೊಂಡಿದ್ದಾರೆ.