ಚಳ್ಳಕೆರೆ: ರಾಷ್ಟ್ರ ಹಾಗೂ ರಾಜ್ಯದಲ್ಲಿ ಬೆಲೆಏರಿಕೆಯಿಂದ ಭಾರತೀಯ ಜನತಾ ಪಕ್ಷದಜನಪ್ರಿಯತೆ ಕುಗ್ಗುತ್ತಿದೆ. ಹಾಗಾಗಿ ಮತದಾರರುಜನರ ಕಲ್ಯಾಣಕ್ಕಾಗಿ ಶ್ರಮಿಸುತಿರುವ ಕಾಂಗ್ರೆಸ್‌ಪಕ್ಷವನ್ನು ಅ ಧಿಕಾರಕ್ಕೆ ತರಲಿದ್ದಾರೆ ಎಂದುಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯ, ಮಾಜಿಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಶಾಸಕರ ಭವನಕ್ಕೆ ಭಾನುವಾರಆಗಮಿಸಿದ್ದ ಅವರು ಸನ್ಮಾನ ಸ್ವೀಕರಿಸಿ ಅವರುಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮತ್ತು ರಾಜ್ಯವನ್ನಾಳುವ ಆಡಳಿತ ಪಕ್ಷದವರಿಗೆಜನಸಾಮಾನ್ಯರ ಸಂಕಷ್ಟದ ಬಗ್ಗೆ ಅರಿವೇ ಇಲ್ಲ.ಕೇವಲ ಶ್ರೀಮಂತರ ಪರವಾಗಿ ಆಡಳಿತ ನಡೆಸುತ್ತಿದೆಎಂಬ ಭಾವನೆ ಜನರಲ್ಲಿ ಉಂಟಾಗಿದೆ.
ಈ ಹಿಂದೆ ಇಂದಿರಾ ಗಾಂ ಧಿಯವರು ದೇಶದ ಬಡವರಹಿತಕ್ಕಾಗಿ “ಗರೀಬಿ ಹಠಾವೋ’ ಘೋಷಣೆಮೂಲಕ ನೆರವಾಗಿದ್ದರು. ಆದರೆ ಕೇಂದ್ರ ಸರ್ಕಾರಜನರ ನಿತ್ಯ ಬಳಕೆ ವಸ್ತುಗಳ ಮೇಲೆಯೇ ಹೆಚ್ಚಿನದರ ವಿಧಿ ಸುವ ಮೂಲಕ ಬಡವರ ಬದುಕನ್ನುಅತಂತ್ರಗೊಳಿಸಿದೆ. ಇದು ಮುಂಬರುವ ದಿನಗಳಲ್ಲಿಕಾಂಗ್ರೆಸ್ ಪಕ್ಷಕ್ಕೆ ವರವಾಗಲಿದೆ ಎಂದರು.ಸರ್ಕಾರಿ ತಾಂತ್ರಿಕ ವಿದ್ಯಾಲಯ ಮತ್ತು ಜಿಟಿಟಿಸಿಕೇಂದ್ರಗಳಿಗೂ ಭೇಟಿ ನೀಡಿ ಶಾಸಕರ ಅಭಿವೃದ್ಧಿಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಘುಮೂರ್ತಿಯವರು ಹಿಂದುಳಿದಪ್ರದೇಶವಾದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನುರಾಜ್ಯದ ಪ್ರಗತಿಪರ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ.ಅವರ ಅಭಿವೃದ್ಧಿ ಕಾರ್ಯಕ್ರಮಗಳುಮಾದರಿ.ನಾನು ರಾಜ್ಯದ ಹಲವಾರು ವಿಧಾನಸಭಾಕ್ಷೇತ್ರಗಳಿಗೆ ಭೇಟಿ ನೀಡಿದ್ದು ಈ ರೀತಿಯಅಭಿವೃದ್ಧಿಯನ್ನು ಎಲ್ಲೂ ಕಂಡಿಲ್ಲ ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕೇಂದ್ರಹಾಗೂ ರಾಜ್ಯದಲ್ಲಿ ವಿವಿಧ ಖಾತೆಗಳ ಸಚಿವರಾಗಿಎಂ. ವೀರಪ್ಪ ಮೊಯ್ಲಿಯವರು ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಲವಾರುದಶಕಗಳಿಂದ ಕಾಂಗ್ರೆಸ್ ಪಕ್ಷ ಬಲಪಡಿಸಲುಶ್ರಮಿಸಿದ್ದಾರೆ. ಈ ಹಿಂದೆ 2013ರಲ್ಲಿ ಈ ಕ್ಷೇತ್ರದಶಾಸಕನಾಗಲು ನನಗೆ ಅವಕಾಶ ಮಾಡಿಕೊಟ್ಟಹಿರಿಯರಲ್ಲಿ ವೀರಪ್ಪ ಮೊಯ್ಲಿಯವರೂಒಬ್ಬರು.
ಇಂದಿಗೂ ನನಗೆ ಮಾರ್ಗದರ್ಶನನೀಡುತ್ತಿದ್ದಾರೆಂದು ತಿಳಿಸಿದರು.ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡಟಿ. ಪ್ರಭುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಟಿ.ತಿಪ್ಪೇಸ್ವಾಮಿ, ಮುಖಂಡರಾದ ಡಿ.ಕೆ. ಕಾಟಯ್ಯ,ಡಾ| ಬಿ. ಯೋಗೇಶ್‌ಬಾಬು, ಅಂಜಿನಪ್ಪ,ಭರಮಣ್ಣ, ಬೋರಯ್ಯ, ಬಡಗಿ ಪಾಪಣ್ಣ, ಫರೀದ್‌ಖಾನ್, ಚೌಳೂರು ಪ್ರಕಾಶ್, ಅನ್ವರ್ ಮಾಸ್ಟರ್,ಆರ್. ಪ್ರಸನ್ನಕುಮಾರ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್ ಗೌಡ, ನಗರಸಭೆಉಪಾಧ್ಯಕ್ಷೆ ಜೈತುಂಬಿ, ಸದಸ್ಯರಾದ ವಿರೂಪಾಕ್ಷಪ್ಪ,ಚಳ್ಳಕೆರೆಯಪ್ಪ, ಸಾವಿತ್ರಮ್ಮ, ಮಂಜಣ್ಣ, ಸೈಯದ್,ಮೂಡಲಗಿರಿಯಪ್ಪ, ಸೈಫುಲ್ಲಾ ಉಪಸ್ಥಿತರಿದ್ದರು