Advertisement

ಶಾಲಾ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

08:12 PM Jan 13, 2021 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನ ವಲ್ಲಭಾಪುರ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಬೆಳಗುಂದಿ ಉಚಿತವಾಗಿ 400ಕ್ಕೂ ಹೆಚ್ಚು ಮಾಸ್ಕ್ಗಳನ್ನು ವಿತರಣೆ ಮಾಡಿ ಗಮನಸೆಳೆದರು.

Advertisement

ಶಾಲೆಯ ಇಂಗ್ಲೀಷ್‌ ಶಿಕ್ಷಕ ಕುಮಾರನಾಯ್ಕ ಈ ಕುರಿತು ಮಾತನಾಡಿ, ಕೊರೊನಾ ವೈರಸ್‌ ಮಕ್ಕಳಿಗೆ ಹರಡದಿರಲಿ ಎಂಬುವ ಉದ್ದೇಶದಿಂದ ದೊಡ್ಡಬಸಪ್ಪ ಮಾಸ್ಕ್ಗಳನ್ನು ವಿತರಣೆ ಮಾಡಿರುವುದು ಶ್ಲಾಘನೀಯ. ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಇದನ್ನೂ ಓದಿ:ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ವ್ಯಕ್ತಿವ್ಯಕ್ತಿಗಳ ನಡುವೆ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಕೊರೊನಾ ವಾರಿಯರ್ಸ್‌ ಗಳಂತೆ ದೊಡ್ಡಬಸಪ್ಪ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಗುರು ಶಶಿರೇಖಾ ಮಾತನಾಡಿದರು. ಶಾಹಿದ್‌ಬಾಷ, ಕೊಟ್ರೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next