ಶ್ರೀರಂಗಪಟ್ಟಣ : ಭೂ ಮಾಪನ ಇಲಾಖೆ ಕಚೇರಿಯಲ್ಲಿ ಸರ್ವೇ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಲಂಚ ವೆಖರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಶ್ರೀರಂಗಪಟ್ಟಣ ಮಿನಿ ವಿಧಾನ ಸೌಧದ ಕಚೇರಿಯಲ್ಲಿರುವ ಭೂ ಮಾಪನ ಇಲಾಖೆಯಲ್ಲಿ ಸರ್ವೇ ಸೂಪರ್ ವೈಸರ್ ಆಗಿರುವ ಲೋಕೇಶ್ ಎಂಬಾತನೇ ಲಂಚ ಪಡೆದ ವ್ಯಕ್ತಿ.
ವ್ಯಕ್ತಿಯೊಬ್ಬರಿಂದ ಕಚೇರಿ ಕೆಲಸಕ್ಕಾಗಿ ಹದಿನೈದು ಸಾವಿರ ಲಂಚ ಕೇಳಿದ್ದು ಈ ಮೊದಲು ಮೂರು ಸಾವಿರ ಮುಂಗಡವಾಗಿ ಪಡೆದಿದ್ದ ಲೋಕೇಶ್ ಇಂದು ಉಳಿದ ಹತ್ತು ಸಾವಿರ ತರಲು ಹೇಳಿದ್ದ ಅದರಂತೆ ಆ ವ್ಯಕ್ತಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು ಕಚೇರಿಯಲ್ಲಿ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಲೋಕೇಶ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಪುರುಷೋತ್ತಮ, ವಿನೋದ್ ರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು. ಸಿಬ್ಬಂದಿಗಳಾದ ಮಹದೇವು, ಕುಮಾರ್, ಪಾಪಣ್ಣ, ವೆಂಕಟೇಶ್, ಮಹೇಶ್ ಭಾಗಿ.
ಇದನ್ನೂ ಓದಿ : ಯುಪಿ:ಮೌರ್ಯಗೆ ಬಿಜೆಪಿ ಶಾಕ್; ಕೈ ತೊರೆದ ಮಾಜಿ ಕೇಂದ್ರ ಸಚಿವ ಆರ್ಪಿಎನ್ ಸಿಂಗ್