ತುಮಕೂರು: ರಾಜ್ಯದಲ್ಲಿ ಕುಟುಂಬ ರಾಜಕಾರಣ ತೀವ್ರವಾಗಿದೆ. ಒಂದೆಡೆ ದೇವೇಗೌಡ ಅವರ ಕುಟುಂಬ ರಾಜಕೀಯ ಸೇರಿದಂತೆ ಜಿಲ್ಲೆ ಸಂಪೂರ್ಣ ಕುಟುಂಬ ರಾಜಕೀಯಕ್ಕೆ ಪೋಷಣೆ ನೀಡುತ್ತಿದೆ. ಜಿ.ಎಸ್.ಬಸವರಾಜು ಅವರು ತಮ್ಮ ಮಗನನ್ನು, ಜಯಚಂದ್ರ, ಕೆ.ಎನ್.ರಾಜಣ್ಣ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತಂದಿ¨ªಾರೆ. ಆ ಮೂಲಕ ಜೆಡಿಎಸ್,ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕುಟುಂಬ ರಾಜಕೀಯದಲ್ಲಿ ಕುಟುಂಬ ಪೋಷಿಸುತ್ತಿ¨ªಾರೆ ಎಂದು ಕೆಆರ್‌ಎಸ್ ಪಕ್ಷ ಬೆಂಬಲಿತ ತುಮಕೂರುಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಆರೋಪಿಸಿದರು.
ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕುಟುಂಬ ರಾಜಕಾರಣ ಮಾಡುವ ಇವರನ್ನು ಈ ಚುನಾವಣೆಯಲ್ಲಿ ಮತದಾರರು ದೂರಿಡಬೇಕು ಎಂದು ಹೇಳಿದರು
ಜಿಲ್ಲೆಗೆ ಕೊಡುಗೆ ಏನು: ಜಿಲ್ಲೆಯ ಜನರು ಕೃಷಿ ಅವಲಂಬಿತವಾಗಿದ್ದಾರೆ. ಆದರೆ, ಸಾಂಪ್ರದಾಯಿಕ ಕೃಷಿ ನಾಶ ಮಾಡುವ ರಾಜಕೀಯ ಪ್ರಾರಂಭವಾಗಿದೆ. ರೈತರಿಗೆ ಕೇವಲ ಅಂಗೈಯಲ್ಲಿ ಆಕಾಶ ತೋರಿಸಿ ಯಾಮಾರಿಸುತ್ತಿ¨ªಾರೆ. ಚುನಾವಣೆ ಪ್ರಚಾರದಲ್ಲಿ ತಾ ಮುಂದು, ನಾ ಮುಂದು ಎಂಬಂತೆ ಜಿಲ್ಲೆಗೆ ನಾನು ನೀರು ತರುತ್ತೇನೆ ಎಂದು ಭರವಸೆ ನೀಡುತ್ತಾ, ನೀರಿನ ರಾಜಕಾರಣ ಮಾಡುತ್ತಿ¨ªಾರೆ. ಇಲ್ಲಿವರೆಗೆ ರೈತರಿಗೆ ಏನು ಕೊಡುಗೆ ನೀಡಿರೆ ಎಂದು ಪ್ರಶ್ನಿಸಿದರು.
ನೀರಿನ ರಾಜಕಾರಣ: ಲೋಕಸಭೆ ಚುನಾವಣೆಯಲ್ಲಿ ಕಾವು ದಿನೇ ದಿನೆ ಹೆಚ್ಚಾಗುತ್ತಿದ್ದು, ಚುನಾವಣೆ ಗಿಮಿಕ್ ಗೋಸ್ಕರ ಅಭ್ಯರ್ಥಿಗಳು ನೀರಿನ ರಾಜಕಾರಣ ಮಾಡುತ್ತಿ¨ªಾರೆ ಎಂದು ನುಡಿದರು. ಶಾಶ್ವತ ಪರಿಹಾರ ಹುಡುಕಿಲ್ಲ: ದೇಶದಲ್ಲಿ ನಡೆದ ಹಸಿರು ಕ್ರಾಂತಿಯ ಉಪ ಉತ್ಪನ್ನವಾಗಿ ಮಾಜಿ
ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರೈತ ರಾಜಕಾರಣ ಮಾಡುತ್ತಾ ಬಂದಿ¨ªಾರೆ. ಆದರೆ, ಇದರಿಂದ ರೈತರಿಗಾಗಲಿ, ಕೃಷಿ ಆಧಾರಿತ ಜೀವನ
ನಡೆಸುವ ಜನ ಸಮುದಾಯಕ್ಕಾಗಲಿ ಯಾವುದೇ ಪ್ರಯೋಜನವಾಗಿಲ್ಲ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆಯೇ ಹೊರತು ಶಾಶ್ವತ ಪರಿಹಾರ ಹುಡು
ಕುವಲ್ಲಿ ಮಣ್ಣಿನ ಮಗ ದೇವೇಗೌಡರು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಭೀಕರ ಬರದ ಅಲೆಯಿದೆ: ಜಿಲ್ಲೆಯಲ್ಲಿ ಮೋದಿ ಅಲೆ ನೆಪದಲ್ಲಿ ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ.ಜಿಲ್ಲೆಯಲ್ಲಿ ಮೋದಿ ಅಲೆಯಿಲ್ಲ ಭೀಕರ ಬರದ ಅಲೆಯಿದೆ. ಎÇÉಾ ಜನಪ್ರತಿನಿಧಿಗಳು ಈಗಾಗಲೇ ಅಧಿಕಾರ ಅನುಭವಿಸಿದ್ದು, ಯುವಕರಿಗೆಆದ್ಯತೆ ನೀಡಬೇಕು. ಎಲ್ಲ ಹಿರಿಯರು ಚುನಾವಣೆಯಿಂದ ಹೊರನಡೆಯಬೇಕು. ರಾಜಕೀಯನ ವೃತ್ತಿ ಹೊಂದಬೇಕು ಎಂದು ಆಗ್ರಹಿಸಿದರು.ಜಾತಿ, ಧರ್ಮ, ಟೀಕೆ ಟಿಪ್ಪಣಿ: ಸಾಮಾಜಿಕಕಾರ್ಯಕರ್ತ ಡಮರುಗ ಉಮೇಶ್ ಮಾತನಾಡಿ,
ಪ್ರಸ್ತುತ ಜಿಲ್ಲೆ ಬರಕ್ಕೆ ತುತ್ತಾಗಿದೆ. ಚುನಾವಣೆ ವಸ್ತು ನೀರು, ಹಸಿರು, ರೈತರ ಆತ್ಮಹತ್ಯೆ ನಿಲ್ಲಿಸುವುದಾಗಬೇಕಿತ್ತು. ಆದರೆ ಜಾತಿ, ಧರ್ಮ, ಟೀಕೆ ಟಿಪ್ಪಣಿ ಗಳು, ಹಣ ಇತ್ಯಾದಿ ಚುನಾವಣಾ ವಸ್ತುವಾಗಿದೆ. ಇದರಿಂದ ಜಿಜಿಲ್ಲೆ, ರಾಜ್ಯ, ರಾಷ್ಟ್ರದ ಅಭಿವೃದ್ಧಿ ಅಸಾಧ್ಯ. ಈ ಬಗ್ಗೆ ಯುವಜನತೆ ಎಚ್ಚರಿಕೆ ವಹಿಸಬೇಕು. ಯುವಕರ ಧ್ವನಿಯಾಗಿ ಸ್ಪರ್ಧೆ ಮಾಡಿರುವ ಮಲ್ಲಿಕಾರ್ಜುನಯ್ಯ ಅವರಿಗೆ ಸೇವೆ
ಸಲ್ಲಿಸಲು ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆಮಿಷಗಳಿಗೆ ಒಳಾಗಾಗಬೇಡಿ: ಸಾಮಾಜಿಕ ಕಾರ್ಯಕರ್ತ ಅಂದ್ರಾಳ್ ನಾಗರಾಜು ಮಾತನಾಡಿ, ಮೋದಿ ಮಾಡಿದ ಸಾಧನೆ ಹಿಡಿದು ಮತ ಕೇಳುವು
ದಾದರೆ ಜಿಲ್ಲೆಗೆ ನಿಮ್ಮ ಸಾಧನೆ ಏನು, ಯುವಜನತೆಗೆ ನಿಮ್ಮ ಕೊಡುಗೆ ಏನು, ಚುನಾವಣೆಯಲ್ಲಿ ಮದ್ಯ,ಹಣ, ಆಮಿಷಗಳಿಗೆ ಒಳಪಡದೆ ಪ್ರಾಮಾಣಿಕ ಸೇವೆಗೆ ಹೊರಟಿರುವ ಮಲ್ಲಿಕಾರ್ಜುನಯ್ಯ ಅವರಿಗೆಯುವಜನತೆಗೆ ಮತ ನೀಡಬೇಕು ಎಂದುಯುವಕರಿಗೆ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ತಿಮ್ಮಯ್ಯ, ನಾಗಭೂಷಣ್ ಮತ್ತಿತರರು ಇದ್ದರು.