Advertisement
ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಮಹಾನಗರ ವ್ಯಾಪ್ತಿಯ ರಸ್ತೆಗಳ ದುಸ್ಥಿತಿ ಹೇಳತೀರದು. ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿ ದ್ವಿಚಕ್ರ ವಾಹನಗಳು ಓಡಾಡದ ಶೋಚನೀಯ ಪರಿಸ್ಥಿತಿಗೆ ಉಳಿದ ರಸ್ತೆಗಳು ತಲುಪಿವೆ. ಅಡಿ ಆಳದ ಗುಂಡಿಗಳುಬಿದ್ದು, ಜನರು ಪರಿತಪಿಸುವಂತಾಗಿದೆ. ಮಳೆಗಾಲದಲ್ಲಿ ದುರಸ್ತಿ ಸಾಧ್ಯವಿಲ್ಲದ ಕಾರಣ ಗುಂಡಿಗಳನ್ನು ಮುಚ್ಚಲು ವೆಟ್‌ಮಿಕ್ಸ್ ಬಳಸಲಾಗುತ್ತದೆ. ಆದರೆ ಬಹುತೇಕ ರಸ್ತೆಗಳಿಗೆ ವೆಟ್‌ಮಿಕ್ಸ್ ಬಳಸದೆ ಕಟ್ಟಡ ತ್ಯಾಜ್ಯ ಸುರಿಯಾಗುತ್ತಿದೆ. ಮಳೆಯಿಂದ ವಾಹನಗಳು ಓಡಾಡಿ ಇಡೀ ತ್ಯಾಜ್ಯ ರಸ್ತೆ ತುಂಬ ಹರಡಿ ಓಡಾಡದಂಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಇದೀಗ ಪ್ರಮುಖ ರಸ್ತೆ
ಕಿತ್ತೂರು ಚನ್ನಮ್ಮ ವೃತ್ತ ಸೇರಿದಂತೆ ಕೆಲವಡೆ ಕೆಂಪು ಮಣ್ಣನ್ನು ಗುಂಡಿಗೆ ಸುರಿಯಾಗುತ್ತಿದೆ.
Related Articles
ಹುಡುಕಾಡುವಷ್ಟು ಇಡೀ ರಸ್ತೆ ಗುಂಡಿಮಯವಾಗಿವೆ. ಯಾರೇ ಕೇಳಿದರೂ ಶೀಘ್ರದಲ್ಲಿ ಈ ರಸ್ತೆಗಳು ಕಾಂಕ್ರೀಟಿಕರಣಗೊಳ್ಳಲಿವೆ ಎನ್ನುವ ಸಬೂಬು ನೀಡಲಾಗುತ್ತಿದೆ.
Advertisement
ವಿದ್ಯುತ್, ನೀರು ಇತ್ಯಾದಿ ಸಂಪರ್ಕಕ್ಕೆ, ಇನ್ನಿತರೆ ಕಾರಣಗಳಿಗೆ ರಸ್ತೆ ಅಗೆಯಬೇಕಾದರೆ, ಪಾಲಿಕೆಯಿಂದ ಪರವಾನಗಿ, ಅಗತ್ಯ ಶುಲ್ಕ ಪಾವತಿಸಬೇಕು. ಸಾರ್ವಜನಿಕರು ಅನೇಕರು ಶುಲ್ಕ ಪಾವತಿಸಿ ಪರವಾನಗಿ ಪಡೆಯುತ್ತಾರೆ. ಇನ್ನು ಕೆಲವರು ಹೇಳದೆ-ಕೇಳದೆ ಅಗೆಯುತ್ತಾರೆ. ರಸ್ತೆ ಅಗೆತದಿಂದ ಬಂದ ಶುಲ್ಕವನ್ನು ಅದೇ ಅಗೆದ ಸ್ಥಳದಲ್ಲಿ ದುರಸ್ತಿಗೆ ಬಳಸಬೇಕೆಂಬ ನಿಯಮ ಇದ್ದರೂ, ಅದರ ಬಳಕೆ ಮಾತ್ರ ಶೂನ್ಯ ಎಂಬುದಕ್ಕೆ ಅವಳಿನಗರದ ರಸ್ತೆಗಳು ಸಾಕ್ಷಿ ಹೇಳುತ್ತಿವೆ.
ಇದನ್ನೂ ಓದಿ:ಝೂಮ್‌ನಲ್ಲಿ ಹಳ್ಳಿ ಹೈದರ ಝಗಮಗ : ಉಪರಾಷ್ಟ್ರಪತಿ ಜತೆ ಆನ್‌ಲೈನ್ ಸಂವಾದ
ನಗರದಲ್ಲಿ ಕೆಲ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು, ಪ್ರಾಧಿಕಾರ ತನ್ನ ಹೊಣೆಗಾರಿಕೆ ಮರೆತಂತೆ ಕಾಣುತ್ತಿದೆ. ಪ್ರತಿವರ್ಷವೂ ಕಿತ್ತೂರು ಚನ್ನಮ್ಮ ವೃತ್ತ ಭಾಗದಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗುತ್ತಿದ್ದು, ಶಾಶ್ವತಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕಾಗಿ ಪಾಲಿಕೆಯಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಮಣ್ಣು ಸುರಿದು ಗುಂಡಿ ಮುಚ್ಚುತ್ತಿರುವ ಅಧಿಕಾರಿಗಳ ಬುದ್ಧಿಮತ್ತೆ ಮೆಚ್ಚಲೇಬೇಕು. ತೆರಿಗೆ
ಕಟ್ಟಿಸಿಕೊಳ್ಳುವ ಪಾಲಿಕೆ ಗುಂಡಿಗಳನ್ನು ಮುಚ್ಚುತ್ತಿಲ್ಲ ಎನ್ನುವ ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಯಾಗಿ ಇದು ಜನರ ಕಣ್ಣೊರೆಸುವ ತಂತ್ರಗಾರಿಕೆಯಾಗಿದೆ ಎನ್ನುವುದು ಸ್ಪಷ್ಟ.
– ವಿಶಾಲ ಕುಂದಗೋಳ, ಸಾರ್ವಜನಿಕ – ಹೇಮರಡ್ಡಿ ಸೈದಾಪುರ