Advertisement
ಈ ವಿದ್ಯಾರ್ಥಿಗಳು “ಸುಕನ್ಯಾ ವಿದ್ಯಾ ವರ್ಧಕ’ ಎಂಬ ಹೆಸರಿನ ಯೋಜನೆ ಯೊಂದನ್ನು ರೂಪಿಸಿಕೊಂಡು ಅರ್ಹತೆಪಡೆಯುವ ಪ್ರತಿ ಬಾಲಕಿ ಖಾತೆಗೆ ತಿಂಗಳಿಗೆ 250 ರೂ. ಜಮಾ ಮಾಡಿ ಅವರ ಶೈಕ್ಷಣಿಕ, ವೈವಾಹಿಕ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಲು ಮುಂದಾಗಿದ್ದಾರೆ.
ಅದರ ನಿರ್ವಹಣೆಯನ್ನು ಕರಸೇವಾ ಸದಸ್ಯರೇ ಮಾಡಲಿದ್ದಾರೆ. 15 ವರ್ಷಗಳಿಗೆ ಮೊದಲು ಯಾರೂ ಖಾತೆ ಯಿಂದ ಹಣ ವಿಥ್ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. 15 ವರ್ಷ ಕಳೆಯುವಾಗ ಪ್ರತಿಯೊಬ್ಬರ ಖಾತೆಯಲ್ಲಿ ಬಡ್ಡಿ ದರ ಸೇರಿದಂತೆ ಜಮೆಯಾಗುವ ಒಟ್ಟು ಮೊತ್ತ ಹಾಗೂ ಆ ನಂತರದ ಆರು ವರ್ಷಗಳ ಮೆಚ್ಯುರಿಟಿ ಅವಧಿಯ ಬಡ್ಡಿ ಸೇರಿದಂತೆ ಒಟ್ಟಾರೆ ಒಂದು ಲಕ್ಷ ರೂ.ಗೂ ಅಧಿಕ ಹಣ ಲಭ್ಯವಾಗಲಿದೆ. ಇದರಿಂದ ಆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಅಥವಾ ವಿವಾಹಕ್ಕೆ ನೆರವಾಗುತ್ತದೆ ಎನ್ನುವುದು ಈ ವೈದ್ಯ ವಿದ್ಯಾರ್ಥಿಗಳ ಯೋಚನೆ-ಯೋಜನೆಯಾಗಿದೆ.
Related Articles
ಸುಕನ್ಯಾ ವಿದ್ಯಾವರ್ಧಕ ಯೋಜನೆಯಡಿ 10 ವರ್ಷದ ಕೆಳಗಿನ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
https://docs.google.com/forms/d/e/1FAIpQLSf29gRdMItugmJx4VPbrbBYgeku3mR8ZaQvaXfKHuL9PukP-A/viewform?usp=sf_link ಈ ಲಿಂಕ್‌ಗೆ ಲಾಗ್ ಇನ್ ಆಗಿ ಪೋಷಕರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Advertisement
ಬದುಕಿಗೆ ನೆರವಾಗುವ ಉದ್ದೇಶಬಡ ಹೆಣ್ಣು ಮಕ್ಕಳ ಬದುಕಿಗೆ ನೆರವಾಗುವ ಉದ್ದೇಶದಿಂದ ಸುಕನ್ಯಾ ವಿದ್ಯಾವರ್ಧಕ ಯೋಜನೆಯನ್ನು ಯೋಜಿಸಿ ದ್ದೇವೆ. 15 ವರ್ಷ ಕಾಲ ಪ್ರತಿ ತಿಂಗಳು 250 ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿದರೆ ಅವರ ಉನ್ನತ ಶಿಕ್ಷಣ, ಮದುವೆಯಂತಹ ಸಂದರ್ಭದಲ್ಲಿ ಈ ಹಣ ನೆರವಿಗೆ ಬರಬಹುದು ಎಂಬ ಉದ್ದೇಶ ನಮ್ಮದು.
-ಅನ್ಮೋಲ್ ಬಾಳೇರಿ, ಟೀಂ ಕರಸೇವಾ