ರಬಕವಿ-ಬನಹಟ್ಟಿ: ಇಂದಿನ ಆಧುನಿಕತೆಯ ದಿನಗಳಲ್ಲಿ ಮಠಗಳಲ್ಲಿ ನಡೆಯುವ ಪ್ರವಚನ, ಆಧ್ಯಾತ್ಮಿಕ ಚಿಂತನೆಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಬದುಕಿಗೆ ನೆಮ್ಮದಿಯನ್ನು ನೀಡುತ್ತವೆ. ಆದ್ದರಿಂದ ಪ್ರತಿಯೊಬ್ಬರಲ್ಲಿ ಧರ್ಮದ ಅರಿವು ಮುಖ್ಯವಾಗಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರು, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಬನಹಟ್ಟಿಯ ಶ್ರೀ ಹಿರೇಮಠದಲ್ಲಿ ಶಾಂತವೀರ ಶಿವಾಚಾರ್ಯರ 31ನೇ ಚಿರಲಿಂಗಾಂಗ ಸಾಮರಸ್ಯ ಕಾರ್ಯಕ್ರಮದ ನಿಮಿತ್ತವಾಗಿ ಹಮ್ಮಿಕೊಂಡ ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ನಡೆ ನುಡಿಗಳು ಒಂದಾಗಿರಬೇಕು. ಸಮಾಜಮುಖಿಯಾಗಿ ಬದುಕುವುದೇ ಧರ್ಮವಾಗಿದೆ. ಯಾವಾಗಲೂ ಭಗವಂತನಲ್ಲಿ ವಿಶ್ವಾಸವಿಡಬೇಕು. ಧರ್ಮದ ಸೇವೆಯೂ ಕೂಡಾ ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇದನ್ನೂ ಓದಿ : ಕೊಂಚೂರು ರಥೋತ್ಸವದಲ್ಲಿ ಜನವೋ ಜನ, ಭಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ
ಈ ಸಂದರ್ಭದಲ್ಲಿ ಬೆಂಗಳೂರಿನ ಹಿರೇಮಠದ ಅನ್ನದಾನಿ ಸ್ವಾಮೀಜಿ ಪ್ರವಚನ ನೀಡಿದರು. ವೇದಿಕೆಯ ಮೇಲೆ ಹಿರೇಮಠದ ಶರಣಬಸವ ಶಿವಾಚಾರ್ಯರು, ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ಪೌರಾಯುಕ್ತ ಶ್ರೀನಿವಾಸ ಜಾಧವ ಇದ್ದರು. ಶಿವಯ್ಯ ಹಿರೇಮಠ ಸ್ವಾಗತಿಸಿದರು. ಮಹಾದೇವ ಗುಟ್ಲಿ ನಿರೂಪಿಸಿದರು. ವಿನಿತ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ಶಿವಾನಂದ ಬಾಗಲಕೋಟಮಠ, ದಾನಪ್ಪ ಹುಲಜತ್ತಿ, ಶಶಿಕಾಂತ ಹುನ್ನೂರ, ಮಹಾದೇವಿ ಕಾಡದೇವರ, ಪೂರ್ಣಿಮಾ ಮುಳೆಗಾವಿ, ರಾಜು ಪಿಟಗಿ, ಕಿರಣ ಆಳಗಿ ಸೇರಿದಂತೆ ಅನೇಕರು ಇದ್ದರು.