Advertisement
2015ರ ನ. 7ರಂದು ಬೃಂದಾವನದ ಮೊದಲ ಕನ್ನಡ ಶಾಲೆ ನ್ಯೂ ಜೆರ್ಸಿಯ ಸೌತ್ ಬ್ರನ್ಸ್‌ವಿಕ್ ನಗರದಲ್ಲಿ ಆರಂಭಗೊಂಡಿತು. ಅನಂತರ ಸ್ವಲ್ಪ ಸಮಯದಲ್ಲೇ ಎಡಿಸನ್ ಮತ್ತು ಈಸ್ಟ್ ವಿಂಡ್ಸರ್ ನಗರಗಳಲ್ಲೂ ಕನ್ನಡ ಶಾಲೆಗಳು ಆರಂಭಗೊಂಡವು. ಹಲವು ಸಹೃದಯಿ ಸ್ವಯಂ ಸೇವಕರ ಸಹಕಾರದಿಂದ ಕನ್ನಡ ಶಾಲೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.
Related Articles
Advertisement
2019ರ ಸೆಪ್ಟಂಬರ್ 21ರಂಗು ಹಿಲ್ಸ್ ಬರೋ ಶಾಲೆಯ ಉದ್ಘಾಟನೆಗೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣೀ ಚಿದಾನಂದ್ ಮತ್ತು ಅಳಿಯ ಪ್ರೊ| ಚಿದಾನಂದ್ ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇವರೊಂದಿಗೆ ಹಿಲ್ಸ್ ಬರೋ ನಗರದ ಹಲವು ಗಣ್ಯವ್ಯಕ್ತಿಗಳು, ಸರಕಾರಿ ಅಧಿಕಾರಿಗಳೂ ಕೂಡ ಪಾಲ್ಗೊಂಡಿದ್ದರು. ಇವರೆಲ್ಲರು ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಕಲಿಯುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.
ಫ್ರೀ ಹೊರ್ಲ್ಡೇ ಸೊಮರ್ಸೆಟ್ ಕೌಂಟಿಯ ಸಾರಾ ಸೂಯ್ ಅವರು, ನ್ಯೂ ಜರ್ಸಿ ಕನ್ನಡ ಶಾಲೆಯ ಕೊಡುಗೆಯನ್ನು ಗೌರವಿಸಿ, ಬೃಂದಾವನ ಕನ್ನಡ ಶಾಲೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಮಂತ್ರಿ, ಸಿ.ಟಿ. ರವಿ ಅವರು ಬೃಂದಾವನ ಕನ್ನಡ ಶಾಲೆಗೆ ಶುಭ ಕೋರಿ ವೀಡಿಯೋ ಸಂದೇಶವನ್ನೂ ಕಳುಹಿಸಿದರು.
ಇದನ್ನೂ ಓದಿ:ಆಂಗ್ಲ ನಾಡಿನಲ್ಲಿ “ಕನ್ನಡ ಕಲಿ’ ಆನ್‌ಲೈನ್ ತರಬೇತಿ ಉದ್ಘಾಟನೆ
ಮಾರ್ಲ್ಬಾರೋ ನಗರದಲ್ಲಿ 2020ರ ಜ. 11ರಂದು ಬೃಂದಾವನದ ಐದನೇ ಕನ್ನಡ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಭಾರತ ರತ್ನ ವಿಶ್ವೇಶ್ವರಯ್ಯನವರ ಕುಟುಂಬದವರಾದ ಮೋಕ್ಷಗುಂಡಂ ಶೇಷಾದ್ರಿ ಮತ್ತು ಗೌತಮ್ ಜೋಯಿಷ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹಾರ್ವರ್ಡ್‌ನಿಂದ ಕಾನೂನು ಪದವಿ ಪಡೆದ ಕನ್ನಡದ ಯುವಕ ಗೌತಮ್ ಜೋಯಿಷ್ ಅಮೆರಿಕ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಇಲ್ಲಿನ ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಉತ್ತೇಜಿಸಿದರು. ನಾಯಕತ್ವದ ಪಾತ್ರ ಮತ್ತು ಜವಾಬ್ದಾರಿಯನ್ನು ಮುಂದಿನ ಪೀಳಿಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಆರನೇ ಕನ್ನಡ ಶಾಲೆಯ ಉದ್ಘಾಟನೆ ಕಾರ್ಯಕ್ರಮವು ಕೋವಿಡ್ ನಡುವೆ ಜಾನ್ಸನ್ ಪಾರ್ಕ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಮುಖ್ಯ ಅತಿಥಿ ಡಾ| ಬಸವರಾಜ್ ಹೀರೇಮs… ಅವರು ಚಾಲನೆ ನೀಡಿದರು.
– ಸಂಧ್ಯಾ ಮಲ್ಲಿಕ್,
ಕಾರ್ಯದರ್ಶಿ ಮತ್ತು ನಿರ್ದೇಶಕರು, ಬೃಂದಾವನ ಕನ್ನಡ ಶಾಲೆ