Advertisement

ನವ ಕಲಬುರಗಿ ನಿರ್ಮಾಣಕ್ಕೆ “ಹಸ್ತ’ವೇ ಸೂಕ್ತ: ಈಶ್ವರಖಂಡ್ರೆ

08:19 PM Aug 29, 2021 | Team Udayavani |

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ 20 ಅಂಶಗಳ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

Advertisement

ನಗರದ ಜಿಲ್ಲಾಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಐಸಿಸಿ ಚುನಾವಣೆ ವೀಕ್ಷಕ ರಮಿಂದರ್‌ ಸಿಂಗ್‌ ಆವ್ಲಾ, ಶಾಸಕರಾದ ಪ್ರಿಯಾಂಕ್‌ ಖರ್ಗೆ,ಖನೀಜ್‌ಫಾತೀಮಾ,ಯು.ಟಿ.ಖಾದರ್‌, ರಾಜಶೇಖರ ಪಾಟೀಲ ಹುಮನಾಬಾದ, ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಪಕ್ಷದ ‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಪ್ರಣಾಳಿಕೆ ಬಿಡುಗಡೆಗೊಳಿಸಿ ಪ್ರಮುಖ ಅಂಶಗಳನ್ನು ವಿವರಿಸಿದರು.

ಕಲಬುರಗಿ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಬಾರಿ ಪಾಲಿಕೆ ಚುನವಾಣೆಯಲ್ಲಿ ಪಕ್ಷ ಅಧಿಕಾರದ ಬಂದರೆ “ನವ ಕಲಬುರಗಿ’ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ಈ ಹಿಂದೆಯೂ ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್‌ ಮಾತ್ರ. ಮುಂದೆಯೂ ಕೊಟ್ಟ ಭರವಸೆಗಳನ್ನು ಪಕ್ಷ ಈಡೇರಿಸಲಿದೆ ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.

ನಗರದ ‌ ಜನತೆ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಆಸ್ತಿ ತೆರಿಗೆ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ. ನಗರಾದ್ಯಂತ ಪ್ರತಿ ಮನೆಗಳಿಗೆ 24×7 ಶುದ್ಧ ನೀರು ಪೂರೈಕೆ ಮಾಡಲಾಗುತ್ತದೆ. 100 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಎಲ್ಲೆಡೆ ಎಇಡಿ ಬೀದಿ ದೀಪಗಳ ಅಳವಡಿಕೆ ಮಾಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ಒಂದು ಸಮುದಾಯ ಭವನ ನಿರ್ಮಿಸಲಾಗುತ ¤ದೆ. ನೂತನ
ಕ್ರಿಕೆಟ್‌ ಸ್ಟೇಡಿಯಂ ಮತ್ತು ಒಳಾಂಗಣ ಕ್ರೀಡಾಂಗಣಸ್ಥಾಪನೆ ಮಾಡಲಾಗುತ್ತದೆ. ಮಹಿಳೆಯರ ಸುರಕ್ಷತೆಗಾಗಿ ಎಲ್ಲ ವಾರ್ಡ್‌ಗಳಲ್ಲೂ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ಸೂಪರ್‌ ಮಾರ್ಕೆಟ್‌ ಪ್ರದೇಶದ ಸಮಗ್ರ ಅಭಿವೃದ್ಧಿ ಜತೆಗೆ ಬೈಕ್‌ ಮತ್ತು ಕಾರುಗ ಳು‌ ನಿಲ್ಲುಗಡೆಗೆ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

Advertisement

ಇದನ್ನೂ ಓದಿ:ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ

ಐಎಎಸ್‌ ಮತ್ತು ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ನಗರ ‌ ದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಎರಡು ಲಕ್ಷ ಸಸಿ ನೆಡುವ ಮೂಲಕ ಹಸಿರು ಕಲಬುರಗಿಗೆ ಶ್ರಮಿಸಲಾಗುವುದು. ಜನನ-ಮರಣ ಪ್ರಮಾಣಪತ್ರ ವಿತರಣೆ ಹಾಗೂ ಇತರ ಸೌಲಭ್ಯಗಳಿಗೆ ಇ-ಆಡಳಿತ ಸೌಲಭ್ಯಗಳ ಪರಿಣಾಮಕಾರಿ ಅನುಷ್ಠಾನ ಮಾಡಲಾಗುತ್ತದೆ. ವ್ಯಾಪಾರ ಪರವಾನಿಗೆ ಅವಧಿಯನ್ನು 1ರಿಂದ 3 ವರ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದರು.

ರಾಜಕಾಲುವೆಗಳ ಅಭಿವೃದ್ಧಿ, ಪ್ರವಾಸಿ ತಾಣಗಳ ಸಮಗ್ರ ಪ್ರಗತಿ ಹಾಗೂ ನಗರದ ಪಾರ್ಕ್‌ಗಳಿಗೆ ಆಧುನಿಕತೆಗೆ ಸ್ಪರ್ಶ ನೀಡುವ ಯೋಜನೆ ಇದ್ದು, ವಾಕಿಂಗ್‌ ಟ್ರ್ಯಾಕ್‌, ಓಪನ್‌ ಜಿಮ್‌, ಫಿಟ್‌ನೆಸ್‌ ಸೆಂಟರ್‌, ಮಕ್ಕಳ ಆಟದ ಪ್ರದೇಶದ ಜತೆಗೆ ಹಿರಿಯ ನಾಗರಿ‌ ಕರಿಗಾಗಿ ಪ್ರತ್ಯೇಕ ಸ್ಥಳ ಗಳನ್ನು ಮಾಡಲಾಗುತ್ತದೆ. ಪಾಲಿಕೆಯ ಎಲ್ಲ ಪರವಾನಗಿಗಳು ಸುಲಭವಾಗಿ ದೊರೆಯಲು ಏಕಗವಾಕ್ಷಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದರು.

ನಗರ ವ್ಯಾಪ್ತಿಯ ವಸತಿ ಪ್ರದೇಶಗಳಿಂದ ಹೈ-ಟೆನ್ಷನ್‌ ವಿದ್ಯುತ್‌ ತಂತಿಗಳ ಸ್ಥಳಾಂತರ, ಸ್ಮಶಾನ-ರುದ್ರಭೂಮಿ ಅಭಿವೃದ್ಧಿಗಾಗಿ ನಿರ್ವಹಣಾ ಮಂಡಳಿ ರಚನೆ ಹಾಗೂ‌ ಕಸ ಸಂಗ್ರಹ ಮತ್ತು ವಿಲೇವಾರಿಗೆ ಆದ್ಯತೆ ನೀಡುವ ಮೂಲಕ ಘನ ತ್ಯಾಜ್ಯ ನಿರ್ವಹಣೆ ಸುಧಾರಣೆಗೆ ಕ್ರಮ
ಕೈಗೊಳ್ಳಲಾಗುತ್ತದೆ ಎಂದು ಆಶ್ವಾಸನೆ ನೀಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಶರಣಕುಮಾರ್‌ ಮೋದಿ, ಡಾ| ಕಿರಣ ದೇಶಮುಖ, ಮಹಾಂತಪ್ಪ ಸಂಗಾವಿ ಮತ್ತಿತರರು ಇದ್ದರು.

ಬಿಜೆಪಿಯಿಂದ ಜಿಲ್ಲೆಗೆ ನಷ್ಟವೇ ಅಧಿಕ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೊದಲ ದಿನದಿಂದಲೂ ಜಿಲ್ಲೆಗೆ ಮೋಸ ಮಾಡುತ್ತಲೇ ಬಂದಿದೆ. ಬಿಜೆಪಿಯಿಂದ ಜಿಲ್ಲೆಗೆ ಲಾಭಕ್ಕಿಂತ ನಷ್ಟವೇ ಅಧಿಕವಾಗಿದೆ ಎಂದು ಪ್ರಿಯಾಂಕ್‌ಖರ್ಗೆ ಕಿಡಿಕಾರಿದರು.ಕಾಂಗ್ರೆಸ್‌ ಸರ್ಕಾರ ಮಂಜೂರು ಮಾಡಿದ್ದಕಲಬುರಗಿ ರೈಲ್ವೆ ವಿಭಾಗವನ್ನು ಬಿಜೆಪಿ ಕಿತ್ತುಕೊಂಡಿದೆ. ಏಮ್ಸ್‌ ಸ್ಥಾಪನೆಕೈಬಿಟ್ಟಿದೆ. ಜವಳಿ ಪಾರ್ಕ್‌ ರದ್ದುಗೊಳಿಸಿದೆ. 371(ಜೆ) ಅಡಿನ ಎಲ್ಲ ನೇರ ನೇಮಕಾತಿ ಗಳನ್ನು ತಡೆಹಿಡಿದು ಯುವಕರಿಗೆ ಮೋಸ ಮಾಡಿದೆ.ಕೆಕೆಆರ್‌ಡಿಬಿ ಅನುದಾನಕಡಿತ ಮಾಡಲಾಗಿದೆ. ದೂರದರ್ಶನಕಚೇರಿಗೆ ಬೀಗ
ಜಡಿದಿದೆ. ಕಲಬುರಗಿ ರೈಲ್ವೆ ನಿಲ್ದಾಣವನ್ನುಖಾಸಗಿಯವರೆಗೆ ಬಿಜೆಪಿ ಮಾರಾಟ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿಲುಕಿದ್ದ ಜಿಲ್ಲೆಯ ಕಾರ್ಮಿಕರ ಬಗ್ಗೆ ಬಿಜೆಪಿ ಕಣ್ಣೆತ್ತಿಯೂ ನೋಡಲಿಲ್ಲ. ಜತೆಗೆ ಕೊರೊನಾ ಸಮಯದಲ್ಲಿ ಆಕ್ಸಿಜನ್‌ ಪೂರೈಸದೇ ಬಿಜೆಪಿ ಜನರ ಜೀವಹಿಂಡಿಯುವಕೆಲಸ ಮಾಡಿದೆ ಎಂದು ದೂರಿದರು.

ಏರ್‌ಪೋರ್ಟ್‌ ಅಡವಿಟ್ಟಿದ್ದ ಬಿಎಸ್‌ವೈ
ಕಲಬುರಗಿ ಅಭಿವೃದ್ಧಿ ಕಾಂಗ್ರೆಸ್‌ ಪಕ್ಷದಿಂದಲೇ ಆಗಿದೆ.ಕಲಬುರಗಿಗೆ ಬಿಜೆಪಿಯ ಕೊಡುಗೆ ಶೂನ್ಯ. ವಿಮಾನ ನಿಲ್ದಾಣ ಕಾರ್ಯಗತ ಆಗಿದ್ದು ಕಾಂಗ್ರೆಸ್‌ನಿಂದ. ಆದರೆ, ಏರ್‌ಪೋರ್ಟ್‌ ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅದಕ್ಕೆ ಶಂಕುಸ್ಥಾಪನೆ ಮಾಡಿ,ಖಾಸಗಿ ಕಂಪನಿಗೆ ಅಡವಿಟ್ಟುಹೋಗಿದ್ದರು ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಲೇವಡಿ ಮಾಡಿದರು.ಯಡಿಯೂರಪ್ಪ ಅಡವಿಟ್ಟಿದ್ದ ವಿಮಾನ ನಿಲ್ದಾಣವನ್ನುಖಾಸಗಿ ಕಂಪನಿಯಿಂದ ಬಿಡಿಸಿದ್ದು ಕಾಂಗ್ರೆಸ್‌. ಅದರ ಸಂಪೂರ್ಣ ಅಭಿವೃದ್ಧಿಗೆ ಅನುದಾನ ನೀಡಿ ಶ್ರಮಿಸಿರುವುದು ಕಾಂಗ್ರೆಸ್‌. ಬಿಜೆಪಿಯವರು ಜಿಲ್ಲೆಗೆ ಒಂದೇ ಒಂದು ಯೋಜನೆಯನ್ನು ಕೊಟ್ಟಿಲ್ಲ. ಕೋವಿಡ್‌ ಸಂದರ್ಭದಲ್ಲಿ ಬಿಜೆಪಿಯ ಜನಪ್ರತಿನಿಧಿಯೇ ಔಷಧಿಯನ್ನುಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಜಿಲ್ಲೆಗೆ ಯಾವುದಾದರೂ ಒಂದುಕೊಡುಗೆ ತೋರಿಸಿದರೂ ನಾನು ಬಿಜೆಪಿಯವರಿಗೆ ಶರಣಾಗುತ್ತೇನೆ ಎಂದು ಸವಾಲು ಎಸೆದರು

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ಬಂದ ಎರಡು ವರ್ಷದಲ್ಲಿ 1,136 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದನ್ನು
ಗಮನಿಸಿದರೆ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಬಿಜೆಪಿಯವರು ಕರ್ನಾಟಕವನ್ನು ರೇಪಿಸ್ಟ್‌ಗಳ ರಾಜ್ಯ ಮಾಡಲು ಹೊರಟಿದ್ದಾರೆ. ಮೇಲಾಗಿ ಬಿಜೆಪಿ ಗೃಹ ಸಚಿವರು ಹೆಣ್ಣು ಮಕ್ಕಳು ಸಂಜೆ ನಂತರ ಒಬ್ಬಂಟಿಯಾಗಿ ಹೊರಗೆ ಓಡಾಡಬಾರದು ಎಂದು ಹೇಳಿಕೆ ಕೊಡುತ್ತಿದ್ದಾರೆ. ಇಂತಹ ಅಸಮರ್ಥ ಸಚಿವರನ್ನು ತಕ್ಷಣ ಸಂಪುಟದಿಂದ ಕಿತ್ತೂಗೆಯಬೇಕು.
-ಈಶ್ವರ ಖಂಡ್ರೆ,ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next