ಕೊಟ್ಟಿಗೆಹಾರ: ಪಟ್ಟಣದಕೆ.ಪಿ. ಪೂರ್ಣಚಂದ್ರ ತೇಜಸ್ವಿಪ್ರತಿಷ್ಠಾನದ ವತಿಯಿಂದ 66ನೇಕನ್ನಡ ರಾಜ್ಯೋತ್ಸವದ ಪ್ರಯುಕ್ತಕನ್ನಡ ಕೈಬರಹ ಸ್ಪರ್ಧೆಆಯೋಜಿಸಿಲಾಗಿದೆ.
12 ವರ್ಷದೊಳಗಿನವಿಭಾಗ, 12ರಿಂದಮೇಲ್ಪಟ್ಟು 18 ವರ್ಷದೊಳಗಿನ ವಿಭಾಗ, ಹಾಗೂ18 ವರ್ಷ ಮೇಲ್ಪಟ್ಟ ವಿಭಾಗದಲ್ಲಿಸ್ಪರ್ಧೆ ನಡೆಯಲಿದೆ. ಎಲ್ಲಾ 3ವಿಭಾಗಗಳಲ್ಲೂ ಪ್ರಥಮ, ದ್ವಿತೀಯ ,ತೃತೀಯ ಹಾಗೂ 2 ಸಮಾಧಾನಕರಬಹುಮಾನ ನೀಡಲಾಗುತ್ತದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಯಾವುದೇ ಕೃತಿಯಿಂದ ಸ್ಪ ರ್ಧಿಗಳ ಆಯ್ಕೆಯ ಯಾವುದಾದರೊಂದು ಭಾಗವೊಂದನ್ನು 100 ಪದಮೀರದಂತೆ ಕೈಬರಹದಲ್ಲಿ ಎ- 4ಹಾಳೆಯಲ್ಲಿ ಬರೆಯಬೇಕು.ಎ- 4 ಹಾಳೆಯಲ್ಲಿ ಬರೆದಕೈಬರಹದ 3 ಪ್ರತಿಗಳನ್ನುಅಂಚೆಯ ಮೂಲಕ ಕಳಿಸಬೇಕು.ಮೂರು ಪ್ರತಿಗಳು ಕೈ ಬರಹದ್ದೇ ಆಗಿರಬೇಕು. ಜೆರಾಕ್ಸ್ ಪ್ರತಿಗಳನ್ನು ಕಳಿಸುವಂತಿಲ್ಲ.
ವಯಸ್ಸಿನದೃಢೀಕರಣದ ಯಾವುದಾದರೊಂದುದಾಖಲೆಯೊಂದರ ಜೆರಾಕ್ಸ್‌ಪ್ರತಿಯನ್ನು ಲಗತ್ತಿಸಬೇಕು. ಸ್ಪರ್ಧಿಗಳುತಮ್ಮ ಕಿರು ಪರಿಚಯದೊಂದಿಗೆಭಾವಚಿತ್ರ (ಪಾಸ್‌ಪೋರ್ಟ್‌ಸೈಜ್) , ವಿಳಾಸ, ವಯಸ್ಸು,ಮೊಬಬೈಲ್ ಸಂಖ್ಯೆ ಒಳಗೊಂಡಮಾಹಿತಿಯನ್ನು ಪ್ರತ್ಯೇಕಹಾಳೆಯಲ್ಲಿ ಲಗತ್ತಿಸಬೇಕು.ಕೈಬರಹ ಸ್ವಂತದ್ದಾಗಿರಬೇಕು.ಬೇರೆಯವರು ಬರೆದ ಕೈಬರಹ ವನ್ನುಕಳಿಸುವಂತಿಲ್ಲ. ತಮ್ಮದೇ ಕೈರಹದಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನುಲಗತ್ತಿಸಬೇಕು.
ಕೈಬರಹವನ್ನುಅಂಚೆ ಮೂಲಕ ಅಥವಾ ಖುದ್ದಾಗಿದಿನಾಂಕ:- 20-11-2021ರೊಳಗೆಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ,ಕೊಟ್ಟಿಗೆಹಾರ ಅಂಚೆ, ಮೂಡಿಗೆರೆತಾಲೂಕು, ಚಿಕ್ಕಮಗಳೂರುಜಿಲ್ಲೆ-577113, ಈ ವಿಳಾಸಕ್ಕೆಕಳಿಸಿಕೊಡಬೇಕು. ಪ್ರತಿಷ್ಠಾನವುನೇಮಿಸುವ ತೀರ್ಪುಗಾರರತೀರ್ಮಾನವೇ ಅಂತಿಮವಾಗಿರುತ್ತದೆ.ಹೆಚ್ಚಿನ ಮಾಹಿತಿಗೆಮೊ: 9663098873, 8971920839ಸಂರ್ಪಕಿಸಬಹುದಾಗಿದೆ ಎಂದುಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.