Advertisement

ತುಳುನಾಡ ಸೇವಾ ಸಮಾಜ ಮೀರಾ-ಭಾಯಂದರ್‌ ಜಾನಪದ ನೃತ್ಯ ಸ್ಪರ್ಧೆ-ಸಮ್ಮಾನ

05:57 PM Mar 28, 2019 | Vishnu Das |

ಮುಂಬಯಿ: ಜಾತಿ, ಮತ, ಪಂಗಡಗಳನ್ನು ಮೀರಿ ನಿಂತ ತುಳು ಭಾಷೆಗೆ ಜನರನ್ನು ಸಂಘಟಿಸುವ ವಿಶೇಷ ಶಕ್ತಿ ಇದೆ. ಭಾರತೀಯ ಸಂಸ್ಕೃತಿಯೊಂದಿಗೆ ಸಮ್ಮಿಲಿತಗೊಂಡಿರುವ ಮನುಷ್ಯನ ವಿಕಾಸಕ್ಕೆ ಸಹಾಯವಾಗುವಂತಹ ಗುಣವನ್ನು ತುಳು ಸಂಸ್ಕೃತಿ ಹೊಂದಿದೆ.. ತುಳುವರು ಪ್ರಕೃತಿ ಮತ್ತು ಇತರ ಜೀವಿಗಳ ಸಂಬಂಧಗಳನ್ನು ನಂಬಿಕೆ, ನಡವಳಿಕೆ, ಆಚರಣೆಗಳ ಮೂಲಕ ಇಂದಿನ ಬದಲಾವಣೆಯ ಸಮಯದಲ್ಲೂ ಉಳಿಸಿಕೊಂಡಿ¨ªಾರೆ ಎಂದು ಜನಪ್ರಿಯ ಸಂಘಟಕ, ಬಂಟ್ಸ್‌ ಫೋರಂನ ಮೀರಾ ಭಾಯಂದರ್‌ ಇದರ ಸ್ಥಾಪಕ ಅಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ ತಿಳಿಸಿದರು.

Advertisement

ಮಾ. 23ರಂದು ಸಂಜೆ ಮೀರಾರೋಡು ಪೂರ್ವದ ಜಹಗೀಡ್‌ ವೃತ್ತದ ಸಮೀಪದ ನಾರಾಯಣ ಗುರು ಸಭಾಗೃಹದಲ್ಲಿ ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್‌ ಇದರ ಸಂಸ್ಥಾಪಕ ದಿನಾಚರಣೆ, ವಿಶ್ವ

ಮಹಿಳಾ ದಿನಾಚರಣೆ, ಅರಸಿನ ಕುಂಕುಮ, ಸಮ್ಮಾನ ಮತ್ತು ಜಾನಪದ ನೃತ್ಯ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆರಾಧನೆಗಳ ಬೀಡಾಗಿರುವ ತುಳುನಾಡು ಮಾನವೀಯ ಸಂಬಂಧಗಳ ಕೊಂಡಿಯಾಗಿದೆ. ಶ್ರೀಮಂತ ಬದುಕಿನ ತುಳು ಸಂಸ್ಕೃತಿಯನ್ನು ಶಾಶ್ವತಗೊಳಿಸುವ ತುಳುನಾಡ ಸೇವಾ

ಸಮಾಜದ ದುಡಿಮೆಗೆ ನಾವೆಲ್ಲ ಕೈ

ಜೋಡಿಸೋಣ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಜರಗಿದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾ ಭಾಯಂದರ್‌ ಶಾಖೆ ಪ್ರಥಮ ಸ್ಥಾನ ಪಡೆದುಕೊಂಡಿತು. ಬಿಲ್ಲವರ ಅಸೋಸಿಯೋಶನ್‌ ಮಂಬಯಿ ಇದರ ಮೀರಾರೋಡ್‌ ಸ್ಥಳೀಯ ಸಮಿತಿಯು ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು. ಬಂಟ್ಸ್‌ ಪೋರಂ ಮೀರಾ ಭಾಯಂದರ್‌ ಮೂರನೇ ಸ್ಥಾನವನ್ನು ತನ್ನದಾಗಿಸಿಕೋಡಿತು. ಚಿಣ್ಣರ ಬಿಂಬ ಮಕ್ಕಳ ಪಾಲಕರ ಭಾಯಂದರ್‌ ಶಿಬಿರ, ವಿಶ್ವ ಡಾನ್ಸ್‌ ಆಕಾಡೆಮಿ ಭಾಯಂದರ್‌ ಮತ್ತು ಕರ್ನಾಟಕ ಮಹಾಮಂಡಳ ಮೀರಾ ಭಾಯಂದರ್‌ ತಂಡಕ್ಕೆ ಸಮಾಧಾನಕರ ಬಹುಮಾನದೊಂದಿಗೆ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಮಾನವ ಹಕ್ಕುಗಳ ಅಧ್ಯಕ್ಷ, ಸಮಾಜ ರತ್ನ, ಲಯನ್‌ ಡಾ| ಶಂಕರ್‌ ಕೆ. ಟಿ. ವಹಿಸಿದ್ದರು, ಮುಖ್ಯ ಅತಿಥಿಯಾಗಿ ಕರ್ನಾಟದ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ವಸಾಯಿ ಇದರ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ, ಗೌರವ ಅತಿಥಿಯಾಗಿ ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಮಾಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್‌, ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಮಾಹಿಳಾ ವಿಭಾಗದ ಮಾಜಿ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಸಾಲ್ಯಾನ್‌, ಉದ್ಯಮಿ ಶಂಕರ ಪೂಜಾರಿ, ಸಮ್ಮಾನಿತರಾದ ರಂಗ ಭೂಮಿ ಕಲಾವಿದೆಯರಾದ ಪ್ರತಿಮಾ ಬಂಗೇರ ಮತ್ತು ಸುನೀತಾ ಎ. ಸುವರ್ಣ, ಸಮಾಜ ಸೇವಕಿ ವಾಣಿ ಡಿ. ಶೆಟ್ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನ ತರಬೇತಿ ನೀಡಿದ ಭಾರತಿ ಉಡುಪ ಅವರನ್ನು ಗುರು ಕಾಣಿಕೆಯೊಂದಿಗೆ ಸತ್ಕರಿಸಲಾಯಿತು.

ಸಮ್ಮಾನ ಪತ್ರವನ್ನು ಕುಶಲಾ ಎಸ್‌ ಶೆಟ್ಟಿ, ರೋಹಿಣಿ ರೈ, ಶಾಲಿನಿ ಶೆಟ್ಟಿ ವಾಚಿಸಿದರು. ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ|ರವಿರಾಜ ಸುವರ್ಣ ಸ್ವಾಗತಿಸಿ ಪರಿಚಯಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಎಸ್‌. ಶೆಟ್ಟಿ ಅವರು ಸಿದ್ದಿ ಸಾಧನೆಗಳ ಬಗ್ಗೆ ವಿವರಿಸಿದರು. ಗೌರವಾಧ್ಯಕ್ಷ ಶಂಭು ಕೆ. ಶೆಟ್ಟಿ, ಕಾರ್ಯದರ್ಶಿ ಶೋಭಾ ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಪದಾಧಿಕಾರಿಗಳಾದ ಲೀಲಾ ಡಿ. ಪೂಜಾರಿ, ರವಿ ಶೆಟ್ಟಿ ಶೃಂಗೇರಿ, ಬಿ. ಕೆ. ಶೆಟ್ಟಿ, ದಾûಾಯಿಣಿ , ರಾಮಚಂದ್ರ ಉಚ್ಚಿಲ್‌, ಶೈಲೇಶ್‌ ಉದ್ಯಾವರ ಅವರು ಅತಿಥಿಗಳನ್ನು ಗೌರವಿಸಿದರು.

ಸತ್ಯಪಾಲ್‌ ರೈ ಕಾರ್ಯಕ್ರಮ ನಿರ್ವಹಿಸಿ ದರು. ತೀರ್ಪುಗಾರರಾಗಿ ವಿನಯಾ ಭಟ್‌ ಮತ್ತು ಅನಿಲ್‌ ಸಸಿಹಿತ್ಲು ಸಹಕರಿಸಿದರು. ಪದಾಧಿಕಾರಿಗಳಾದ ವಸಂತ ಶೆಟ್ಟಿ, ನಾರಾಯಾಣ ಮೂಡಬಿದಿರೆ, ಜಯಪ್ರಕಾಶ್‌ ಪೂಜಾರಿ, ಜಯಾಲಕ್ಷ್ಮೀ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಭಜನೆ, ಅರಸಿನ ಕುಂಕುಮ, ವಿಜಯ ಶೆಟ್ಟಿ ಮೂಡುಬೆಳ್ಳೆ ಅವರಿಂದ ಸುಗಮ ಸಂಗೀತ, ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next