Advertisement

ತಂಬಾಕು ಮಂಡಳಿ ನೀಡಿದ್ದು ರಸಗೊಬ್ಬರ, ಚೀಲದಲ್ಲಿ ಸಿಕ್ಕಿದ್ದು ರಂಗೂಲಿಪುಡಿ: ಆತಂಕದಲ್ಲಿ ರೈತರು

08:34 PM May 25, 2022 | Team Udayavani |

ಹುಣಸೂರು : ತಂಬಾಕು ಮಂಡಳಿವತಿಯಿಂದ ಹೊಗೆಸೊಪ್ಪು ಬೆಳೆಗಾರರಿಗೆ ವಿತರಿಸಿರುವ ಎಸ್,ಓ,ಪಿ(ಪೊಟಾಷ್)ಗೊಬ್ಬರವು (ರಂಗೋಲಿಪುಡಿ)ನಕಲಿಯಾಗಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಪ್ರಸಕ್ತ ಸಾಲಿನ ಆರಂಭದಲ್ಲಿ ಉತ್ತಮ ಮಳೆಯಾಗಿದ್ದು, ತಂಬಾಕು ಬೆಳೆಗಾರರು ತಮ್ಮ ಜಮೀನಿಗೆ ತಂಬಾಕು ಸಸಿ ನಾಟಿ ಮಾಡಿದ್ದಾರೆ. ತಂಬಾಕು ಮಂಡಳಿ ವತಿಯಿಂದ ಸರಕಾರದಿಂದಲೇ ರಸಗೊಬ್ಬರ ವಿತರಣೆಗೆ ಕ್ರಮಕೈಗೊಂಡು ಪ್ರತಿ ಹೊಗೆಸೊಪ್ಪು ಬೆಳೆಗಾರನಿಗೆ ಎರಡು ಚೀಲ ಡಿಎಪಿ, ಎ.ಎಸ್.6 ಚೀಲ ಹಾಗೂ ಎರಡು ಚೀಲ ಎಸ್‌ಓಪಿ ರಸಗೊಬ್ಬರ ವಿತರಿಸಿದೆ.

ಆದರೆ ಮಂಡಳಿವತಿಯಿಂದ ವಿತರಿಸಿರುವ ಎರಡು ಚೀಲದಲ್ಲಿ ಒಂದು ಚೀಲ ಗುಣಮಟ್ಟದಿಂದ ಕೂಡಿದ್ದರೆ ಮತ್ತೊಂದು ಚೀಲ ರಂಗೋಲಿ ಪುಡಿಯಂತಿದೆ.

ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಲು ಸಜ್ಜಾಗುತ್ತಿದ್ದಂತೆ ಚೀಲ ಸುರಿದು ಪರಿಶೀಲಿಸಿದಾಗಲಷ್ಟೆ ರಂಗೋಲಿ ಪುಡಿ ಇರುವುದು ಪತ್ತೆಯಾಗಿದೆ.

2019ರಿಂದೀಚೆಗೆ ಬರಗಾಲ, ಅತೀವೃಷ್ಟಿಯ ಸುಳಿಗೆ ಸುಲುಕಿರುವ ತಂಬಾಕು ಬೆಳೆಗಾರರು, ಈ ಬಾರಿಯ ಮಳೆಗೆ ಸಸಿ ಉಳಿಸಿಕೊಳ್ಳಲು ಹೆಣಗಾಡಿ, ಅಳಿದುಳಿದ ಸಸಿಗಳೊಂದಿಗೆ ಸಾಲಸೋಲ ಮಾಡಿ ಮತ್ತೆ ನಾಟಿ ಮಾಡಿದ್ದು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಆದರೆ ಕೆಲ ಅನಧಿಕೃತ ಏಜೆನ್ಸಿಯವರು ಮಂಡಳಿಯ ಅಧಿಕಾರಿಗಳೊಂದಿಗೆ ಶಮೀಲಾಗಿ ನಕಲಿ ಗೊಬ್ಬರ ವಿತರಿಸಿ ರೈತರ ಬದುಕನ್ನೇ ಮೂರಾಬಟ್ಟೆ ಮಾಡಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ : ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು

ತಂಬಾಕು ಮಂಡಳಿ ವಿತರಣೆ ಮಾಡಿರುವ ಗೊಬ್ಬರ ಚೀಲದಲ್ಲಿ ಇಂತಿಷ್ಟು ಪ್ರಮಾಣದ ಸಾರಜನಕ,ರಂಜಕ,ಪೊಟಾಷಿಯಂ ಇರಬೇಕೆಂಬ ಮಾನದಂಡ ನಮೂದಿಸಿದ್ದಾರೆ. ಆದರೆ ಚೀಲದೊಳಗೆ ಮಾತ್ರ ರಂಗೋಲಿ ಪುಡಿಯ ನಕಲಿ ಗೊಬ್ಬರವಿದೆ. ಇದ್ಯಾವುದನ್ನೂ ಗಮನಿಸದ ರೈತರು ತಂಬಾಕು ಸಸಿಗಳಿಗೆ ಗೊಬ್ಬರ ಹಾಕಿದ್ದು, ರಂಗೋಲಿ ಎಂಬುದನ್ನ ಕಂಡಿದ್ದು, ಅಲ್ಷಾಂತರ ರೂ ಸಾಲ ಮಾಡಿ ಹಾಕಿದ್ದ ಹಣ ಸಿಗುವುದೋ ಇಲ್ಲವೋ ಎಂಬ ಭೀತಿಯಲ್ಲಿ ರೈತರು ಆತಂಕಕ್ಕೊಳಗಾಗಿದ್ದಾರೆ.

ನನಗೆ ಎರಡು ಚೀಲ ಡಿಎಪಿ, ಆರು ಚೀಲ ಎಎಸ್, ಎರಡು ಚೀಲ ಪೊಟಾಷ್ ವಿತರಿಸಿದ್ದಾರೆ. ಒಂದರಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರವಿದೆ, ಮತ್ತೊಂದು ಚೀಲ ಬಿಚ್ಚಿ ನೋಡಿದ ವೇಳೆ ರಂಗೋಲಿಪುಡಿ ಇದ್ದು. ಯಮಗುಂಬ ಗ್ರಾಮದ 16 ಮಂದಿ ರೈತರಿಗೆ ವಿತರಣೆ ಮಾಡಿರುವ ಗೊಬ್ಬರದ ಸ್ಥಿತಿಯೂ ಇದೇ ಆಗಿದೆ.
ಮಹದೇವಪ್ಪ. ಯಮಗುಂಬ ರೈತ . ಹನಗೋಡು ಹೋಬಳಿ.

ಮಂಡಳಿವತಿಯಿಂದ ವಿತರಿಸಿರುವ ಗೊಬ್ಬರವನ್ನು ತಂಬಾಕು ಹರಾಜು ಮಾರುಕಟ್ಟೆ ರೈತಸಮಿತಿಯವರೇ ಶಿಪ್ಪಾರಸ್ಸು ಮಾಡಟಿರುವ ಟ್ರಾನ್ಸ್ ವಲ್ಡ್ ಹಾಗೂ ಐಪಿಎಲ್ ಕಂಪನಿಯ ಪೊಟಾಷ್‌ಅನ್ನು ವಿತರಣೆ ಮಾಡಲಾಗಿದೆ. ಟ್ರಾನ್ಸ್ ವಲ್ಡ್ ಕಂಪನಿ ಸರಬರಾಜು ಮಾಡಿರುವ ಪೊಟಾಷ್ ಕಲ್ಲರ್ ಸ್ಪಲ್ಪ ವ್ಯತ್ಯಾಸ ಕಂಡುಬಂದಿದ್ದು, ಆದರೆ ಅದರಲ್ಲಿರುವ ಖನಿಜಾಂಶ ಸಮ ಪ್ರಮಾಣದಲ್ಲಿದೆ. ಕೆಲವರು ರಂಗೋಲಿಪುಡಿ ಬಗ್ಗೆ ದೂರು ನೀಡಿದ್ದಾರೆ. ಮಂಡಳಿವತಿಯಿಂದ ಈಗಾಗಲೆ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಖಲಿಗೊಬ್ಬರವಾಗಿದ್ದರೆ ಈಗಾಗಲೇ ಪ್ರಯೋಗಾಲಯದಿಂದ ತಕ್ಷಣವೇ ಮಾಹಿತಿ ನೀಡುತ್ತಿದ್ದರು, ಆದರೂ ವರದಿಗಾಗಿ ಕಾಯುತ್ತಿದ್ದೇವೆ.

ಡಾ. ಬ್ರಿಜ್ ಭೂಷಣ್ ,ಹರಾಜು ಮಾರುಕಟ್ಟೆ ಅಧೀಕ್ಷಕರು, 62 ಚಿಲ್ಕುಂದ ತಂಬಾಕುಹರಾಜು ಮಾರುಕಟ್ಟೆ. ಈಗಾಗಲೆ ಕಟ್ಟೆಮಳಲವಾಡಿಯ ಮೂರು ಹರಾಜು ಮಾರುಕಟ್ಟೆ ಹಾಗೂ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಎಸ್.ಓ.ಪಿ. ಮಾದರಿಯನ್ನು ಸಂಗ್ರಹಿಸಿದ್ದು, ಮೇಲ್ನೋಟಕ್ಜೆ ಗುಣಮಟ್ಟ ಇದೆ. ಆದರೂ ಮಂಡ್ಯದ ಕೃಷಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.
– ವೆಂಕಟೇಶ್,ಹಿರಿಯ ಸಹಾಯಕ ಕೃಷಿನಿರ್ದೇಶಕ, ಹುಣಸೂರು.

Advertisement

Udayavani is now on Telegram. Click here to join our channel and stay updated with the latest news.

Next