Advertisement

ಜೋಳಿಗೆ ತುಂಬಾ ಅಭಿವೃದ್ಧಿ ತರುವೆ: ಜಾಧವ

12:03 PM Apr 14, 2019 | Naveen |

ಶಹಾಬಾದ: ನಗರದಲ್ಲಿ ಎರಡು ಕಾರ್ಖಾನೆ ಮುಚ್ಚಲ್ಪಟ್ಟಿವೆ, ಕಲ್ಲು ಗಣಿಗಳು ಬಂದ್‌ ಆಗಿವೆ, ಇದರಿಂದ ಕೂಲಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಿ ಬೇರೆ ಊರಿಗೆ ಗುಳೆ ಹೋಗುತ್ತಿದ್ದಾರೆ. ಈ ಬಗ್ಗೆ ಖರ್ಗೆ ಚಕಾರ ಎತ್ತುವುದಿಲ್ಲ, ಇದೇನಾ ಖರ್ಗೆ ಅವರ ಅಭಿವೃದ್ಧಿ ಎಂದು ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ|ಉಮೇಶ ಜಾಧವ ಪ್ರಶ್ನಿಸಿದರು.

Advertisement

ಭಂಕೂರ ಗ್ರಾಮದಲ್ಲಿ ತಮ್ಮ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಎಂಎಸ್‌ಕೆ ಮಿಲ್‌ ಮಚ್ಚಿದೆ. ಕಲಬುರಗಿ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ಎಂದಾದರೂ ಗಮನಹರಿಸಿದ್ದಾರೆಯೇ ಎಂದು ಕೇಳಿದರು. ಕಾಂಗ್ರೆಸ್‌ ಪಕ್ಷದವರು ನಾನು ಜೋಳಿಗೆ ತೆಗೆದುಕೊಂಡು ದೆಹಲಿಗೆ ಹೋಗಿದ್ದೇ ಎಂದು ಹೇಳುತ್ತಿದ್ದಾರೆ. ನಾನು ಗೆದ್ದರೆ, ದೆಹಲಿಯಿಂದ ಜೋಳಿಗೆ ತುಂಬಾ ಅಭಿವೃದ್ಧಿಯನ್ನೇ ತರುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ದೇಶ ಮೋದಿ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗಿದೆ. ಕಾಂಗ್ರೆಸ್‌, ಯುಪಿಎ 60 ವರ್ಷದ ಅವಧಿಯಲ್ಲಿ ದೇಶ ವಿಶ್ವದ ಅಭಿವೃದ್ಧಿಯಲ್ಲಿ 11ನೇ ಸ್ಥಾನದಲ್ಲಿತ್ತು. ಮೋದಿ
ಅವ ಧಿಯಲ್ಲಿ 6ನೇ ಸ್ಥಾನ ಪಡೆದಿದೆ. ದೇಶವನ್ನು ರಕ್ಷಿಸುವ ಸೈನಿಕರಿಗೆ ಅತ್ಯಾಧುನಿಕ ಯುದ್ಧ ಸಾಮಗ್ರಿ, ಬುಲೆಟ್‌ ಫ್ರೂಫ್‌ ಜಾಕೆಟ್‌ ನೀಡಿದೆ ಎಂದರು.

ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಕೇವಲ ಎರಡು ವರ್ಷದಲ್ಲಿಯೆ ರೈತರಿಗೆ ಅನುಕೂಲವಾಗಲು ಹಲವಾರು ಬ್ರಿಡ್ಜ್ ಕಂ.ಬ್ಯಾರೇಜ ನಿರ್ಮಿಸಿದ್ದೇನೆ. ಖರ್ಗೆ ಅವರು 10 ವರ್ಷದ ಅವಧಿಯಲ್ಲಿ ಕಲಬುರಗಿಯನ್ನು ಸಿಂಗಾಪುರ ಮಾಡಬಹುದಿತ್ತು ಎಂದು ಹೇಳಿದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಬಿಜೆಪಿ ಮುಖಂಡ ಶರಣಪ್ಪ ಹದನೂರ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಶಶಿಕಾಂತ ಪಾಟೀಲ, ಶರಣಪ್ಪ ತಳವಾರ, ಬಸವರಾಜ ಇಂಗಿನ್‌, ಸೋಮಶೇಖರ ಬೆಳಗುಂಪಿ, ಸಜ್ಜಾದ ಜಬ್ಬರ, ಶಶಿಕಲಾ ಟೆಂಗಳಿ, ನೀಲಕಂಠ ಪಾಟೀಲ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next