Advertisement

ಜನ ಮೆಚ್ಚಿದ ಖನನ

08:21 PM May 23, 2019 | mahesh |

“ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ…’
– ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ “ಖನನ’ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಬಗ್ಗೆ. ಹೌದು, ಹೊಸಬರೇ ಸೇರಿ ಮಾಡಿದ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ನೋಡಿದ ಪ್ರೇಕ್ಷಕರು, ಹೊಸಬರ ಪ್ರಯತ್ನದ ಬಗ್ಗೆ ಮಾತನಾಡುತ್ತಿದ್ದಾರೆ. ದಿನ ಕಳೆದಂತೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚುತ್ತಿದೆ. ಆ ಕುರಿತು ಹೇಳಿಕೊಳ್ಳಲೆಂದೇ, ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ಮೊದಲು ಮಾತಿಗಿಳಿದ ನಿರ್ಮಾಪಕ ಶ್ರೀನಿವಾಸ್‌, “ಈ ಚಿತ್ರ ನೋಡಿದವರೆಲ್ಲರಿಗೂ ಇಷ್ಟವಾಗಿದೆ. ನನ್ನ ಪುತ್ರ ಆರ್ಯವರ್ಧನ್‌ ನಟನೆಯಲ್ಲಿ ಸಾಬೀತುಪಡಿಸಿದ್ದಾರೆ. ನಮಗೆ ಪ್ರೇಕ್ಷಕರೇ ದೊಡ್ಡ ಸ್ಟಾರ್. ಚಿತ್ರ ನೋಡಿ ಅವರು ಕೊಟ್ಟ ಸ್ಟಾರ್‌ನಿಂದ ಚಿತ್ರಕ್ಕೆ ಇನ್ನಷ್ಟು ಬಲ ಸಿಕ್ಕಂತಾಗಿದೆ. “ಖನನ’ 50 ಪ್ಲಸ್‌ ದಿನದ ಸಂಭ್ರಮದಲ್ಲೂ ಭೇಟಿಯಾಗ್ತಿàವಿ. ಇದೇ ಪ್ರೋತ್ಸಾಹ ಸಿಕ್ಕರೆ ಶತದಿನದ ಸಂಭ್ರಮ ಆಚರಿಸಲಿದೆ’ ಎಂದರು ಶ್ರೀನಿವಾಸ್‌.

Advertisement

ನಾಯಕ ಆರ್ಯವರ್ಧನ್‌ ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ. ಆ ಖುಷಿಗೆ ಕಾರಣ, “ಖನನ’ ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹ. ಜನರು ಆಶೀರ್ವದಿಸಿದ್ದಾರೆ. ಹೀಗಾಗಿ ನನಗೂ ಅನ್ನ ತಿನ್ನುವ ಭಾಗ್ಯ ದೊರೆತಿದೆ. ಎಲ್ಲರ ಶ್ರಮಕ್ಕೆ ಸಿಕ್ಕಂತಹ ಫ‌ಲವಿದೆ. ತೆರೆಯ ಹಿಂದೆ, ಮುಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಈ ಯಶಸ್ಸು ಸಿಗಬೇಕು. ಮುಂದಿನ ದಿನಗಳಲ್ಲೂ ನನ್ನ ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇರಲಿದೆ. ಈ ಚಿತ್ರದಲ್ಲಿ ಮನುಷ್ಯನ ಬದುಕಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದೇವೆ. ಆ ವಿಷಯವೇ ಜನರನ್ನು ಆಕರ್ಷಿಸಿದೆ. ಆರ್ಯವರ್ಧನ್‌ನನ್ನು ಈಗ ಗುರುತಿಸಿದ್ದೀರಿ. ಮುಂದೆ ಬೆಳೆಸಿ, ಹರಸಬೇಕು’ ಎಂದರು ಅವರು.

ನಿರ್ದೇಶಕ ರಾಧ ಅವರಿಗೆ ಮೊದಲ ದಿನ ತುಂಬಾನೇ ಭಯ ಇತ್ತಂತೆ. ಎರಡೂವರೆ ವರ್ಷ ಪಟ್ಟ ಕಷ್ಟಕ್ಕೆ ಈಗ ಫ‌ಲ ಸಿಕ್ಕಿದೆ. “ಖನನ’ ಚಿತ್ರ ನೋಡಿದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆಗ ಪಟ್ಟ ಕಷ್ಟಗಳು ಈಗ ಮಾಯವಾಗಿವೆ. ಹೊಸಬರ ಚಿತ್ರಕ್ಕೆ ಮೊದಲು ಬೆಂಬಲ, ಪ್ರೋತ್ಸಾಹ ಬೇಕು. ಸಿನಿಮಾ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದರೆ, ಅದೇ ಅವರಿಗೆ ಆನೆಬಲ ಇದ್ದಂತೆ. ಮಾಧ್ಯಮ ಕೊಟ್ಟ ಬೆಂಬಲ, ಜನರು ತೋರಿದ ಪ್ರೊತ್ಸಾಹದಿಂದ ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಆರಂಭದಲ್ಲಿ ನಿರ್ಮಾಪಕರು ಸಿನಿಮಾ ಚೆನ್ನಾಗಿ ಮಾಡಿ, ಗೆಲ್ಲಿಸಿಕೊಡಬೇಕು ಎಂದಿದ್ದರು. ಅವರು ನಂಬಿಕೆ ಇಟ್ಟು ಕೊಟ್ಟ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಅವರ ಮಾತು ಉಳಿಸಿಕೊಂಡ ಖುಷಿ ನನಗಿದೆ. ಮುಂದೆ ಯಶಸ್ಸಿನ ಸಂಭ್ರಮದಲ್ಲೂ ಭೇಟಿಯಾಗಿ ಇನ್ನಷ್ಟು ಖುಷಿಯ ವಿಷಯ ಹಂಚಿಕೊಳ್ಳುತ್ತೇನೆ’ ಎಂದರು ರಾಧ.

ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರ ಮಾಡಿದ್ದ ನಟ ಯುವ ಕಿಶೋರ್‌ ಅವರಿಗೆ, “ಖನನ’ ಗುರುತಿಸಿಕೊಳ್ಳುವಂತೆ ಮಾಡಿದೆಯಂತೆ. ಎಲ್ಲೇ ಹೋದರು ಜನರು ಮಾತನಾಡಿಸುತ್ತಿದ್ದಾರೆ. ಹೊಸಬನನ್ನು ನಂಬಿ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ನಿರ್ಮಾಪಕರು ಪ್ರೋತ್ಸಾಹ ಕೊಟ್ಟಿದ್ದಾರೆ. ಅವರನ್ನು ಎಂದಿಗೂ ಮರೆಯುವುದಿಲ್ಲ. ಒಳ್ಳೆಯ ಸಿನಿಮಾ ಬಂದರೆ, ಜನರು ಖಂಡಿತ ಕೈ ಬಿಡುವುದಿಲ್ಲ ಎಂಬುದಕ್ಕೆ “ಖನನ’ ಸಾಕ್ಷಿ’ ಎಂದರು ಯುವ ಕಿಶೋರ್‌.

Advertisement

Udayavani is now on Telegram. Click here to join our channel and stay updated with the latest news.

Next