Advertisement
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ಮಾಹಿತಿ ತಿಳಿಯಲು ಕಾಂಗ್ರೆಸ್‌ನಿಂದ ನೇಮಕವಾಗಿದ್ದ ಸತ್ಯಶೋಧನ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಕರಣ ಗಂಭೀರತೆ ಅರಿತುಕೊಳ್ಳದೇ ಪೊಲೀಸ್ ಅಕಾಡೆಮಿಯಲ್ಲಿ ಫೈರಿಂಗ್, ಸಂವಾದದಲ್ಲಿ ಪಾಲ್ಗೊಂಡು ಕಾಲಾಹರಣ ಮಾಡುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಜೊತೆಗೆ ಆಕೆ ಅಷ್ಟು ಹೊತ್ತಿನಲ್ಲಿ ಅಲ್ಲಿಗೇಕೆ ಹೋದಳು ಎಂದು ನೀಡಿರುವ ಹೇಳಿಕೆ ಅಂತದ್ದೇ ಕೃತ್ಯಗಳು ನಡೆಯಲು ಪುಷ್ಟಿ ನೀಡಿದಂತಾಗಿದೆ. ಈ ಪ್ರಕರಣ ಸಂಬಂಧ ಅವರು ನೀಡಿರುವ ಹೇಳಿಕೆ ತಲೆತಗ್ಗಿಸುವಂತಾದ್ದಾಗಿದೆ. ಈ ನಿಟ್ಟಿನಲ್ಲಿ ಗೃಹ ಸಚಿವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:ಭ್ರಷ್ಟಾಚಾರ ಆರೋಪದ ತನಿಖೆಗೆ ಸಿದ್ಧ : ಸಚಿವ ಬಿ.ಸಿ.ಪಾಟೀಲ್
Related Articles
Advertisement
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಗೋಚರಿಸುತ್ತಿದ್ದು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಘಟನೆ ನಡೆದ ಸ್ಥಳ 545 ಎಕರೆ ಪ್ರದೇಶವಿದ್ದು ಅದು ಯಾರ ಸುಪರ್ದಿಯಲ್ಲಿದೆ ಎಂಬ ಮಾಹಿತಿ ಫೊಲೀಸರಲ್ಲಿ ಇಲ್ಲ.ಸಂತ್ರಸ್ತೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದೆ,ಆಕೆಯಿಂದ ಹೇಳಿಕೆ ಪಡೆಯದೆ ಸಂತ್ರಸ್ತೆಯನ್ನು ಏರ್‌ಲಿಫ್ಟ್ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ ¾ಣ್ ಮಾತನಾಡಿ, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಸಂತ್ರಸ್ತೆಯ ಜೊತೆಗಿದ್ದ ಯುವಕನ ತಂದೆ ಬಿಜೆಪಿಯ ಬೆಂಬಲಿಗರು. ಇದು ಕಾಂಗ್ರೆಸ್ ನೇರವಾಗಿ ಮಾಡುತ್ತಿರುವ ಆರೋಪ. ಬಿಜೆಪಿ ಮುಖಂಡರು ಇದರಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಾಸು, ಎಂ.ಕೆ. ಸೋಮಶೇಖರ್,ಕಾಂಗ್ರೆಸ್‌ಜಿಲ್ಲಾಧ್ಯಕ್ಷಬಿ.ಜೆ.ವಿಜಯ್ ಕುಮಾರ್, ಮುಖಂಡ ಎಂ. ಶಿವಣ್ಣ ಇತರರಿದ್ದರು.
ತುಟಿಬಿಚ್ಚದಬಿಜೆಪಿ ನಾಯಕರು
ಕೆಪಿಸಿಸಿಮಹಿಳಾಘಟಕದಮಾಜಿಅಧ್ಯಕ್ಷೆಮಂಜುಳಾಮಾನಸಮಾತನಾಡಿ,ಬಿಜೆಪಿಯಲ್ಲಿಕ್ರಿಯಾಶೀಲರಾಗಿರುವ ತಾರಾ ಅನುರಾಧ, ಶ್ರುತಿ, ಶಿಲ್ಪಾ ಗಣೇಶ್, ಮಾಳವಿಕಾ ಇವರ್ಯಾರೂ ಈ ಕೃತ್ಯದ ಬಗ್ಗೆ ಮಾತೇ ಆಡಿಲ್ಲ. ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಹೋರಾಟ ಎಂದು ಕೂಗಾಡುತ್ತಿದ್ದಕೇಂದ್ರ ಸಚಿವೆ ಶೋಭಾಕರಂದ್ಲಾಜೆ ತುಟ್ಟಿ ಬಿಚ್ಚಿಲ್ಲ. ಹಿಂದಿನ ಸರ್ಕಾರಗಳು ಇದ್ದ ವೇಳೆಯಲ್ಲಿ ಪದೇ-ಪದೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಯ ಮಹಿಳಾ ಪದಾಧಿಕಾರಿಗಳು ಈ ಪ್ರಕರಣದಲ್ಲಿ ಮೌನವಾಗಿದ್ದಾರೆ. ಸ್ಥಳೀಯ ಶಾಸಕರಾದ ರಾಮದಾಸ್
ಗೆಹೆಣ್ಣುಮಕ್ಕಳೆಂದರೆ ಏನೋಭಯ? ನಾಗೇಂದ್ರಅವರು ಮಾತನ್ನೇಆಡಲ್ಲ.ಮಹೇಶ್‌ಅವರಿಗೆ ಪುರುಷೊತ್ತಿಲ್ಲ