Advertisement

ಗೈರಾದವರಿಗೆ ನೋಟಿಸ್‌ ನೀಡಿ

01:39 PM Feb 11, 2021 | Team Udayavani |

 

Advertisement

 

ಲಕ್ಷ್ಮೇಶ್ವರ: ತಾಪಂ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ ಸೂಚಿಸಿದರು.

ತಾಲೂಕು ಹಿರಿಯ ಆರೋಗ್ಯ ಮೇಲ್ವಿಚಾರಕ ಬಿ.ಎಸ್‌. ಹಿರೇಮಠ ತಾಲೂಕಿನಲ್ಲಿ ಹೊಸದಾಗಿ 3  ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಗುಣಮುಖರಾಗಿದ್ದಾರೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಪಾಲಿಸಬೇಕು. ಪ್ರಥಮ ಹಂತದಲ್ಲಿ ಆರೋಗ್ಯ, ಪೌರಕಾರ್ಮಿಕರು, ನೌಕರ ವರ್ಗದವರಿ ಸೇರಿ 270 ಜನರಿಗೆ ವ್ಯಾಕ್ಸಿನ್‌ ಹಾಕಲಾಗಿದೆ. ಪಲ್ಸ್‌ ಪೋಲಿಯೋ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಇತ್ತೀಚಿನ ಸಮೀಕ್ಷೆಯಲ್ಲಿ ತಾಲೂಕಿನಲ್ಲಿ 7 ಕುಷ್ಠ ರೋಗಿಗಳು ಪತ್ತೆಯಾಗಿದ್ದು, ಅವರುಗೆ ಅಗತ್ಯ  ಔಷಧೋಪಚಾರ ನೀಡಲಾಗುತ್ತಿದೆ. ಕುಷ್ಠರೋಗ ನಿರ್ಮೂಲನೆಗೆ ಸಾಮಾಜಿಕ ಜಾಗೃತಿ ಕಾರ್ಯ ಮಾಡಲಾಗುತ್ತಿದ್ದು, ಸಮಾಜದ ಸಹಕಾರವೂ ಮುಖ್ಯ ಎಂದು ತಿಳಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.

Advertisement

ಸಭೆಯಲ್ಲಿ ಕೃಷಿ ಇಲಾಖೆ ಅ ಧಿಕಾರಿಗಳು ತಮ್ಮ ಪ್ರಗತಿ ವರದಿ ಸಲ್ಲಿಸಿದ ವೇಳೆ ಮುಂಗಾರು ಹಂಗಾಮಿನ  ಅತವೃಷ್ಟಿ ಬೆಳೆ ಪರಿಹಾರ ಬಹುತೇಕ ರೈತರಿಗೆ ಬಂದಿಲ್ಲ. ಈ ಬಗ್ಗೆ ಕಂದಾಯ ಮತ್ತು ಕೃಷಿ  ಇಲಾಖೆಯವರು ರೈತರಿಗೆ ಸಮಂಜಸ ಉತ್ತರ ನೀಡುತ್ತಿಲ್ಲ. ಎರಡೂ ಇಲಾಖೆಯವರು  ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸರ್ಕಾರ ಸಹಾಯಧನ ರೈತರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದರು.

ಬೇಸಿಗೆ ಪ್ರಾರಂಭವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿಕುಡಿವ ನೀರಿನ ತೊಂದರೆಯಾಗದಂತೆ ಕ್ರಮ  ಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಿ. ಮಲ್ಲಿಕಾರ್ಜುನ ಅವರಿಗೆ ತಾಪಂ ಇಒ ಆರ್‌.ವೈ. ಗುರಿಕಾರ ಸೂಚಿಸಿದರು.

ಬಿಇಒ ಆರ್‌.ಎಸ್‌. ಬುರಡಿ ಶಾಲಾಭಿವೃದ್ಧಿ ಕಾರ್ಯ, ವಿದ್ಯಾಗಮ, ಪೂರ್ಣ ಪ್ರಮಾಣದ ಶಾಲಾವಧಿ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಎಇಇ ಶ್ರೀಧರ ತಳವಾರ, ಅಕ್ಷರ ದಾಸೋಹ ಅಧಿ  ಕಾರಿ ನದಾಫ್‌, ಭೂಸೇನಾ ಇಲಾಖೆ ಸೆಕ್ಷನ್‌ ಇಂಜಿನಿಯರ್‌ ಜಮೀಲ್‌ ಮತ್ತು ಇತರೆ ಇಲಾಖೆ ಅಧಿ ಕಾರಿಗಳು ತಮ್ಮ ಇಲಾಖೆ ಪ್ರಗತಿ ಕುರಿತು ವರದಿ ನೀಡಿದರು.

ಇದನ್ನೂ ಓದಿ : ಹಳ್ಳಿಗಳಲ್ಲಿ ಶ್ರಮದಾನ : ಸ್ವಚ್ಛತೆಯ ಅಭಿಯಾನ

ಅಧ್ಯಕ್ಷ ಪರಶುರಾಮ ಇಮ್ಮಡಿಮಾತನಾಡಿ, ಎಲ್ಲ ಇಲಾಖೆ ಅಧಿ ಕಾರಿಗಳು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಗೆ ಸಂಬಂಧಪಟ್ಟ ಮಾಹಿತಿ ಪ್ರತ್ಯೇಕಿಸಿ ವರದಿ ನೀಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿ ಸರ್ಕಾರದ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಈ ವೇಳೆ ತಾಪಂ ಉಪಾಧ್ಯಕ್ಷೆ ಜನ್ನತಬೀ ಅತ್ತಿಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗಿರಿಜವ್ವ ಲಮಾಣಿ,  ಶೀಲವ್ವ ಲಮಾಣಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next