Advertisement

ಗುರುಪೀಠದಿಂದ ಧಾರ್ಮಿಕ ಸಂಸ್ಕಾರ

12:51 PM Nov 05, 2021 | Team Udayavani |

ಮಲೇಬೆನ್ನೂರು: ನಿಜವಾದ ಧಾರ್ಮಿಕಸಂಸ್ಕಾರ ನಾಡಿನ ಗುರುಪೀಠಗಳಿಂದದೊರಕುತ್ತಿದೆ ಎಂದು ಬಾಳೆಹೊನ್ನೂರುರಂಭಾಪುರಿ ಜಗದ್ಗುರು ಡಾ|ಪ್ರಸನ್ನರೇಣುಕ ವೀರಸೋಮೇಶ್ವರಶಿವಾಚಾರ್ಯ ಭಗವತ್ಪಾದರು ಹೇಳಿದರು.ಪಟ್ಟಣದ ಗುರು ರೇಣುಕಾರೈಸ್‌ ಇಂಡಸ್ಟ್ರೀಸ್‌ನಲ್ಲಿ ದೀಪಾವಳಿ ಅಮವಾಸ್ಯೆಯಂದು ಇಷ್ಟಲಿಂಗಮಹಾಪೂಜೆ ನೆರವೇರಿಸಿ ಶ್ರೀಗಳುಆಶೀರ್ವಚನ ನೀಡಿದರು.

Advertisement

ವಿವಿಧಮಠಾಧಿಧೀಶರು ಧಾರ್ಮಿಕ ಪ್ರಜ್ಞೆ ಮತ್ತುಧರ್ಮ ನಿಷ್ಠೆ ಪ್ರಚುರಪಡಿಸುತ್ತಿದ್ದಾರೆ.ಆದರೂ ಜನರು ದಿಕ್ಕು ತಪ್ಪಿ ಅಜ್ಞಾನದಕವಲುದಾರಿಯಲ್ಲಿ ನಡೆಯುತ್ತಿರುವುದುವಿಷಾದನೀಯ ಎಂದರು.ಮನುಷ್ಯ ನಿರಂತರವಾಗಿಕ್ರಿಯಾಶೀಲತೆ, ಕಾಯಕ ನಿಷ್ಠೆಯನ್ನುಜೀವನದಲ್ಲಿ ರೂಢಿಸಿಕೊಂಡಾಗಉನ್ನತಿ ಕಾಣಲು ಸಾಧ್ಯ. ಭೌತಿಕಸಂಪತ್ತು ಇದ್ದರೂ ಧರ್ಮಾಚರಣೆಯಕೊರತೆಯಿಂದ ಮನುಷ್ಯನಿಗೆ ಮಾನಸಿಕಶಾಂತಿ ಇಲ್ಲದಂತಾಗಿದೆ.

ಹೊರಗಿನಕತ್ತಲು ಕಳೆಯಲು ಭೌತಿಕ ದೀಪ,ಒಳಗಿನ ಕತ್ತಲು ಕಳೆಯಲು ಗುರುಗಳಮಾರ್ಗದರ್ಶನದ ಜ್ಞಾನದ ಬೆಳಕಿನಿಂದಸಾಧ್ಯ ಎಂದು ಅಭಿಪ್ರಾಯಪಟ್ಟರು.ಬಾಳೆಹೊನ್ನೂರು ಧರ್ಮಪೀಠದಲ್ಲಿ12 ಕೋಟಿ ರೂ. ವೆಚ್ಚದ 51ಅಡಿವುಳ್ಳ ರೇಣುಕಾಚಾರ್ಯರ ಶಿಲಾಮಂಗಲ ವಿಗ್ರಹ ಸ್ಥಾಪನಾ ಕಾರ್ಯಆರಂಭವಾಗಿದೆ. ಮಾಜಿ ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ ಅವಧಿಯಲ್ಲಿ 5 ಕೋಟಿ ರೂ. ಅನುದಾನನೀಡಿದ್ದು, ಸಿಸಿ ರಸ್ತೆಗೆ 3 ಕೋಟಿ ರೂ.ಬಿಡುಗಡೆಯಾಗಿದೆ ಎಂದರು.

ಜಿಲ್ಲಾ ಧಿಕಾರಿ ಮಹಾಂತೇಶಬೀಳಗಿ ಹಾಗೂ ವರ್ತಕ ಬಿ.ಎಂ.ನಂಜಯ್ಯನವರ ಕುಟುಂಬದವರಧಾರ್ಮಿಕ ಶ್ರದ್ಧೆಯನ್ನು ರಂಭಾಪುರಿಜಗದ್ಗುರುಗಳು ಶ್ಲಾಘಿಸಿದರು.ಗುತ್ತಿಹಿರೇಮಠದ ಡಾ| ಕೊಟ್ಟೂರುಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಸಂದೇಶ ನೀಡಿದರು. ಸಂಸದ ಡಾ|ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌, ವಿಧಾನ ಪರಿಷತ್‌ಮಾಜಿ ಸದಸ್ಯ ಡಾ| ಶಿವಯೋಗಿಸ್ವಾಮಿ,ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ,ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆಶಿವಕುಮಾರ್‌, ಅಜೇಯ್‌ಕುಮಾರ್‌,ಹನಗವಾಡಿ ವೀರೇಶ್‌ ಮತ್ತಿತರರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next