Advertisement

ಕೋಟೆನಾಡಲ್ಲಿ ಹೆಚ್ಚಾಯ್ತು ನೇತ್ರದಾನ ಜಾಗೃತಿ

02:47 PM Nov 08, 2021 | Team Udayavani |

ಚಿತ್ರದುರ್ಗ: ಇಡೀ ಜಗತ್ತಿನಲ್ಲಿ ನೇತ್ರದಾನಕ್ಕೆಎಲ್ಲಿಲ್ಲದ ಮಹತ್ವ ಇದೆ. ನೇತ್ರದಾನವೇ ಅತ್ಯಂತಶ್ರೇಷ್ಠ ದಾನ ಎಂಬ ಮಾತಿದೆ. ಈ ನಿಟ್ಟಿನಲ್ಲಿದೊಡ್ಡವರು ತೆಗೆದುಕೊಳ್ಳುವ ಸಮಯೋಚಿತಹಾಗೂ ಅರ್ಥಪೂರ್ಣ ನಿರ್ಧಾರಗಳುಮತ್ತೂಬ್ಬರ ಬಾಳನ್ನು ಬೆಳಗಿಸುತ್ತವೆ. ಈ ಮಾತುಡಾ| ರಾಜ್‌ಕುಮಾರ್‌ ಹಾಗೂ ಪುನೀತ್‌ರಾಜ್‌ಕುಮಾರ್‌ ವಿಷಯದಲ್ಲಿ ಅಕ್ಷರಶಃಸತ್ಯವಾಗಿದೆ.

Advertisement

ಅಂದು ಡಾ| ರಾಜ್‌ಕುಮಾರ್‌ನೇತ್ರದಾನ ಮಾಡಿದ ಪರಿಣಾಮ ಅವರಅಭಿಮಾನಿಗಳು ಪ್ರೇರಣೆ ಪಡೆದು ನೇತ್ರದಾನಮಾಡುತ್ತಲೇ ಇದ್ದಾರೆ. ಈಗ ಡಾ| ರಾಜ್‌ ಪುತ್ರಪುನೀತ್‌ ರಾಜ್‌ಕುಮಾರ್‌ ಕೂಡ ಅಂಥದ್ದೇನಿರ್ಧಾರ ತೆಗೆದುಕೊಂಡು ತಮ್ಮ ಕಣ್ಣುಗಳನ್ನುದಾನ ಮಾಡಿದ್ದು ನೇತ್ರದಾನಕ್ಕೆ ಮಹತ್ವತಂದುಕೊಟ್ಟಿದೆ.ಅಪ್ಪು ದಾನ ಮಾಡಿದ ಕಣ್ಣುಗಳಿಂದ ನಾಲ್ವರು ಅಂಧರ ಬಾಳು ಬೆಳಕಾಗಿದೆ ಎಂಬ ಸುದ್ದಿಮಿಂಚಿನಂತೆ ಹರಿದಾಡುತ್ತಿದೆ.

ಇದಾದ ನಂತರಜಿಲ್ಲಾ ಕೇಂದ್ರಗಳಲ್ಲಿರುವ ಐ ಬ್ಯಾಂಕುಗಳಿಗೆಕಣ್ಣು ದಾನ ಮಾಡುವ ಒಪ್ಪಂದಕ್ಕೆ ಸಹಿಹಾಕಲು ನಿತ್ಯವೂ ಹತ್ತಾರು ಕರೆಗಳು ಬರುತ್ತಿವೆ.ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ನೇತ್ರದಾನಚಟುವಟಿಕೆಗಳು ಒಮ್ಮೆಲೆ ಗರಿಗೆದರಿವೆ.

ಬಸವೇಶ್ವರ ಪುನರ್‌ಜ್ಯೋತಿ ಬ್ಯಾಂಕ್‌ ಸಾರ್ಥಕ ಸೇವೆ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿಗಾಯತ್ರಿ ಶಿವರಾಂ ಸ್ಥಾಪಿಸಿರುವ ಬಸವೇಶ್ವರಪುನರ್‌ಜ್ಯೋತಿ ಐ ಬ್ಯಾಂಕ್‌ ಸಾರ್ಥಕ ಸೇವೆನೀಡುತ್ತಿದೆ. ಜಿಲ್ಲೆಯಲ್ಲಿ ಕಣ್ಣು ಕಸಿಗೆ ಯಾವುದೇಆಸ್ಪತ್ರೆ ಇಲ್ಲ. ಆದರೆ ಐ ಬ್ಯಾಂಕ್‌ ಕಣ್ಣುಗಳನ್ನುಸಂಗ್ರಹಿಸಿ ಬೆಂಗಳೂರಿನ ಮಿಂಟೋ ಹಾಗೂನೇತ್ರಧಾಮ ಆಸ್ಪತ್ರೆಗಳಿಗೆ ರವಾನಿಸುವಕೆಲಸವನ್ನು ಕಳೆದ ಒಂದು ದಶಕಕ್ಕಿಂತ ಹೆಚ್ಚುಕಾಲದಿಂದ ಮಾಡಿಕೊಂಡು ಬರುತ್ತಿದೆ.

ಈವರೆಗೆ1500 ಕಣ್ಣುಗಳನ್ನು ದಾನವಾಗಿ ಪಡೆದುಅಗತ್ಯ ಇರುವವರಿಗೆ ಅಳವಡಿಸುವ ಕೆಲಸಮಾಡಲಾಗಿದೆ. ನೇತ್ರದಾನದ ವಿಚಾರದಲ್ಲಿಬಸವೇಶ್ವರ ಐ ಬ್ಯಾಂಕ್‌ ರಾಜ್ಯದಲ್ಲಿ ಮೂರನೇಸ್ಥಾನದಲ್ಲಿದೆ. ಸದ್ಯ ಬಸವೇಶ್ವರ ಐ ಬ್ಯಾಂಕಿನ ಬಳಿಕಣ್ಣು ಕಸಿಗಾಗಿ ಬಂದಿರುವ ಅರ್ಜಿಗಳು 300ರಷ್ಟಿವೆ ಎಂದು ಐ ಬ್ಯಾಂಕ್‌ ನಿರ್ದೇಶಕ ಎಸ್‌.ವೀರೇಶ್‌ ಮಾಹಿತಿ ನೀಡಿದ್ದಾರೆ.

Advertisement

ಕಣ್ಣಿನ ಅಗತ್ಯತೆ ಎಷ್ಟಿದೆ ಗೊತ್ತಾ?: ಜಗತ್ತಿನಾದ್ಯಂತ3.9 ಕೋಟಿ ಅಂಧರಿದ್ದಾರೆ. ಭಾರತದಲ್ಲಿ ಈಸಂಖ್ಯೆ 68 ಲಕ್ಷದಷ್ಟಿದೆ. 10.60 ಲಕ್ಷದಷ್ಟು ಜನರಿಗೆಕರಿಗುಡ್ಡೆ ಸಮಸ್ಯೆ ಬಾ ಧಿಸುತ್ತಿದೆ. ಈ ಸಂಖ್ಯೆಪ್ರತಿ ವರ್ಷ 30 ಸಾವಿರದಷ್ಟು ಹೆಚ್ಚಾಗುತ್ತಿದೆ.ಸದ್ಯ 15 ಲಕ್ಷಕ್ಕೂ ಹೆಚ್ಚು ಜನ ಕಣ್ಣುಗಳಿಗಾಗಿಕಾಯುತ್ತಿದ್ದಾರೆ. ಆದರೆ ದೇಶದಲ್ಲಿ ಪ್ರತಿ ವರ್ಷ35 ಸಾವಿರದಷ್ಟು ಮಾತ್ರ ಕಣ್ಣು ಕಸಿ ಶಸ್ತ್ರಚಿಕಿತ್ಸೆನಡೆಯುತ್ತಿದೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next