Advertisement

ಕೋಟೆನಾಡಲ್ಲಿ  ಖರೀದಿ ಭರಾಟೆ ಜೋರು

01:53 PM Nov 05, 2021 | Team Udayavani |

ಚಿತ್ರದುರ್ಗ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕೋಟೆನಾಡುಚಿತ್ರದುರ್ಗ ಜಿಲ್ಲೆಯಲ್ಲಿ ಜೋರಾಗಿದೆ. ನಗರದಲ್ಲಿ ಹಬ್ಬದ ಖರೀಭರಾಟೆ ಹೆಚ್ಚಾಗಿತ್ತು.ನಗರದ ಗಾಂ ಧಿ ವೃತ್ತದಲ್ಲಿ ಬಾಳೆ ಕಂದು, ಹಣ್ಣು, ಹೂವುಖರೀ ದಿಗೆ ಜನ ಮುಗಿಬಿದ್ದಿದ್ದರು.

Advertisement

ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆಅಂಗಡಿಗಳಲ್ಲೂ ಜನ ತುಂಬಿದ್ದರು. ಗ್ರಾಮೀಣ ಭಾಗದ ಕೆಲಹಳ್ಳಿಗಳಲ್ಲಿ ಕಿರು ದೀವಿಗೆ ಅಥವಾ ಮುಂದಿನ ವಾರಗಳಲ್ಲಿದೀಪಾವಳಿ ಆಚರಣೆ ಮಾಡಲಾಗುತ್ತದೆ. ಉಳಿದಂತೆ ನಗರ ಹಾಗೂಅಲ್ಲಲ್ಲಿ ಮೂರು ದಿನಗಳ ಹಬ್ಬದ ಸಂಭ್ರಮ ಮನೆ ಮಾಡಿದೆ.ಶುಕ್ರವಾರ ಮಧ್ಯಾಹ್ನದವರೆಗೂ ಹಬ್ಬದ ವ್ಯಾಪಾರ ಚಟುವಟಿಕೆಮುಂದುವರೆಯಲಿದೆ.

ಹಬ್ಬದ ಅಂಗವಾಗಿ ಪಟಾಕಿ ವ್ಯಾಪಾರಕ್ಕೆ ಚಿತ್ರದುರ್ಗದ ಹಳೇಮಾಧ್ಯಮಿಕ ಶಾಲಾ ಮೈದಾನ, ಸಂತೆಹೊಂಡ ಮತ್ತು ಗಾಂ ವೃತ್ತದಸಮೀಪದಲ್ಲಿ ದೀಪಗಳು, ಹಣ್ಣು, ಬಾಳೆ ಎಲೆ, ಮಾವಿನ ಎಲೆ, ಬಾಳೆದಿಂಡು, ಹೊಂಬಾಳೆ, ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ಬಿಲ್ವಪತ್ರೆ, ತಂಗಟೆಹೂವು ಸೇರಿದಂತೆ ಇತರೆ ಪೂಜಾ ಸಾಮಗ್ರಿ ಖರೀದಿಗೆ ನಗರಸಭೆ ಅವಕಾಶ ಕಲ್ಪಿಸಿತ್ತು.

ವಿವಿಧ ವಿನ್ಯಾಸದ 20 ರಿಂದ 300 ರವರೆಗಿನಮಣ್ಣಿನ ದೀಪಗಳನ್ನು ವ್ಯಾಪಾರಸ್ಥರು ಗಾಂ ಧಿ ವೃತ್ತದ ಸಮೀಪಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಹಳೇ ಮಾಧ್ಯಮಿಕ ಶಾಲಾಆವರಣದಲ್ಲಿ ಪಟಾಕಿ ಮಾರಾಟ ಜೋರಾಗಿ ನಡೆಯುತ್ತಿದೆ.ಖಾಸಗಿ ಬಸ್‌ ನಿಲ್ದಾಣ ಸಮೀಪದ ಮಾರುಕಟ್ಟೆ, ಗಾಂಧಿವೃತ್ತ, ಆನೆಬಾಗಿಲು ರಸ್ತೆ, ಮೆದೇಹಳ್ಳಿ ಮಾರ್ಗದಲ್ಲೂ ಪೂಜಾಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅಲ್ಲಿಯೂ ವ್ಯಾಪಾರದ ಭರಾಟೆಜೋರಾಗಿತ್ತು. ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಾಹನ ದಟ್ಟಣೆಎಂದಿಗಿಂತಲೂ ಹೆಚ್ಚಾಗಿ ಕಂಡು ಬಂತು

Advertisement

Udayavani is now on Telegram. Click here to join our channel and stay updated with the latest news.

Next