Advertisement

ಕಾರವಾರ : ಬಲೆಗೆ ಬೃಹತ್ ಗಾತ್ರದ ಮೀನು ಸಿಕ್ಕಿತೆಂದು ದಡಕ್ಕೆ ತಂದು ನೋಡಿದರೆ ಸಿಕ್ಕಿದು ಆಮೆ

07:14 PM Jul 11, 2022 | Team Udayavani |

ಕಾರವಾರ : ಕಾರವಾರ ಸಮೀಪದ ದೇವಭಾಗ ಕಡಲ ತೀರದಲ್ಲಿ ಸೋಮವಾರ ಮಧ್ಯಾಹ್ನ ಸಂಪ್ರದಾಯಿಕ ಮೀನುಗಾರರ ಬಲೆಗೆ ಎರಡು ಆಲೀವ್ ರಿಡ್ಲೆ ಪ್ರಭೇದದ ಆಮೆಗಳನ್ನು ಬಲೆಯಿಂದ ರಕ್ಷಿಸಿ , ಪುನಃ ಅವುಗಳನ್ನು ಕಡಲಿಗೆ ಬಿಡಲಾಯಿತು.

Advertisement

ಈ ಆಮೆಗಳು ಆಕಸ್ಮಿಕವಾಗಿ ದಡದ‌ ಮೀನುಗಾರರ ಬಲೆಗೆ ಸಿಕ್ಕಿದ್ದವು. ಭಾರದ ಲೆಕ್ಕ ಹಾಕಿದ ಮೀನುಗಾರರು ದಡಕ್ಕೆ ತಂದಾಗ ಅವು ಬೃಹತ್ ಮೀನುಗಳಾಗದೆ, ಆಮೆಗಳಾಗಿದ್ದವು‌ . ತಕ್ಷಣ ಮೀನುಗಾರರು ಆಮೆಗಳನ್ನು ಬಲೆಯಿಂದ ರಕ್ಷಿಸಿ , ಕಡಲಿಗೆ ಬಿಟ್ಟರು.

ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆಗೆ ದೇವಭಾಗ, ಮಾಜಾಳಿಯಲ್ಲಿ ಜಾಗೃತಿ ಮೂಡಿಸಿತ್ತು. ಅಲ್ಲದೆ ಈ ವರ್ಷ ನೂರಾರು ಆಲಿವ್ ಕಡಲಾಮೆ ಮೊಟ್ಟೆಗಳನ್ನು ದೇವಭಾಗ ದಲ್ಲಿ ಸಂರಕ್ಷಿಸಿ, ಅವು ಮರಿಗಳಾದ ನಂತರ ಕಡಲಿಗೆ ಬಿಟ್ಟಿದ್ದನ್ನು ಆರ್ ಎಫ್ ಒ ಪ್ರಮೋದ್ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಇದನ್ನೂ ಓದಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ-ವಿಜ್ಞಾನಕ್ಕೆ ಮರು ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next