Advertisement
ತ್ಯಾಜ್ಯ ಸಂಗ್ರಹಕಂದಾವರದಲ್ಲಿ 15 ಎಕರೆ ಜಾಗ ದಲ್ಲಿ ಕುಂದಾಪುರ ಪುರಸಭೆಯ ತ್ಯಾಜ್ಯ ಘಟಕ ಇದೆ. ಬಹುತೇಕ ಘಟಕಗಳಂತೆ ಇಲ್ಲಿ ತ್ಯಾಜ್ಯರಾಶಿ ಹಾಕುವುದಲ್ಲ. ಬದಲಿಗೆ ಸೂಕ್ತ ವಿಲೇವಾರಿ ಮಾಡಲಾಗುತ್ತದೆ. ಪ್ರತಿದಿನ ಸುಮಾರು 1,500 ಕಡೆಗಳಿಂದ ಒಟ್ಟು 12ರಿಂದ15 ಟನ್ ಕಸ ಸಂಗ್ರಹಿಸಲಾಗುತ್ತದೆ. ಇದರಲ್ಲಿ 9 ಟನ್ ಒಣಕಸವಾದರೆ 3 ಟನ್‌ನಷ್ಟು ತರಕಾರಿ ತ್ಯಾಜ್ಯ, ಹೋಟೆಲ್ ಇತ್ಯಾದಿಗಳ ಹಸಿಕಸವಿರುತ್ತದೆ. ಇದನ್ನೆಲ್ಲ ಕೊಂಡೊಯ್ದು ಕಂದಾವರದಲ್ಲಿ ಗುಡ್ಡೆ ಹಾಕಲಾಗುತ್ತದೆ ಎನ್ನುತ್ತಾರೆ ಪುರಸಭೆಯ ವಿಶ್ವನಾಥ ಅವರು.
ತೇವಾಂಶಭರಿತ ಕಸವನ್ನು 45 ದಿನಗಳ ಕಾಲ ಒಂದೆಡೆ ಹಾಕಲಾಗುತ್ತದೆ. ಎರಡು ದಿನಕ್ಕೊಮ್ಮೆ ಇದನ್ನು ಮಿಶ್ರ ಮಾಡಲಾಗುತ್ತದೆ. ಆಗ ಅದರಲ್ಲಿನ ತೇವದ ಅಂಶ ಹರಿದು ಹೋಗುತ್ತದೆ. ಹೀಗೆ ಹರಿದುಹೋದ ವಿಷಯುಕ್ತ ನೀರನ್ನು ಕಾಂಕ್ರಿಟ್ ಕಾಲುವೆ ಮೂಲಕ ಕಾಂಕ್ರಿಟ್ ತೊಟ್ಟಿಗೆ ಹರಿಸಿ ರಾಸಾಯನಿಕ ಬಳಸಿ ಆವಿ ಮಾಡಲಾಗುತ್ತದೆ. 45 ದಿನಗಳ ಬಳಿಕ ಒಣಗಿದ ಕಸವನ್ನು ಯಂತ್ರದ ಮೂಲಕ ಹುಡಿ ಮಾಡಿ ಜರಡಿಯಾದರೆ ಗೊಬ್ಬರ ಸಿದ್ಧವಾಗುತ್ತದೆ. ಹೀಗೆ ಸಿದ್ಧವಾದ ಗೊಬ್ಬರ ಪ್ರಯೋಗಾಲಯದಿಂದ ಪ್ರಮಾಣಪತ್ರ ಪಡೆದಿದ್ದು ಕೆಜಿಗೆ 3.5 ರೂ., 2.5 ರೂ. ದರದಂತೆ ಮಾರಾಟ ಮಾಡಲಾಗುತ್ತದೆ. ತಿಂಗಳಿಗೆ 20ಟನ್‌ನಷ್ಟು ಇಂತಹ ಗೊಬ್ಬರ ಈವರೆಗೆ ತಯಾರಾಗುತ್ತಿತ್ತು. ಬೆಲ್ಲ ಇತ್ಯಾದಿ ಹಾಕಿ ಅದನ್ನು ಕಸದ ರಾಶಿಯ ಮಧ್ಯೆ ಇಟ್ಟು ಜೀವದ್ರವ್ಯ ತಯಾರಿಸಲಾಗುತ್ತಿದೆ. ಇದಕ್ಕೆ 1:40 ಪ್ರಮಾಣದಲ್ಲಿ ನೀರು ಸೇರಿಸಿ ಹೂವಿನ ಗಿಡ, ತರಕಾರಿ ಗಿಡ, ಅಡಿಕೆ ತೋಟಕ್ಕೆ ಜೀವದ್ರವ್ಯವಾಗಿ ಬಳಸಬಹುದಾಗಿದೆ. ಅಂತೆಯೇ ಎರೆಗೊಬ್ಬರ ಕೂಡಾ ತಯಾರಿಸಲಾಗುತ್ತಿದೆ ಎಂದು ವಿವರಿಸುತ್ತಾರೆ ಆರೋಗ್ಯ ನಿರೀಕ್ಷಕ ರಾಘವೇಂದ್ರ.
Related Articles
ಈವರೆಗೆ ಕಾರ್ಯಾಚರಿಸುತ್ತಿದ್ದ ಹಳೆಯಂತ್ರದ ಬದಲಿಗೆ ಈಗ ಬೆಂಗಳೂರಿನ ಸಾಧನಾ ಎನ್ವರೋ ಎಂಜಿನಿಯರಿಂಗ್ ಸರ್ವಿಸಸ್ ಸಂಸ್ಥೆಗೆ ಆದ ಟೆಂಡರ್‌ನಂತೆ 60 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಟ್ರಾ ಮಿಲ್ ಯಂತ್ರ ಅಳವಡಿಸಲಾಗಿದೆ. ಸುಧಾರಿತ ಗೊಬ್ಬರ ತಯಾರಿಕೆಗೆ ಪುರಸಭೆಯ ಪರಿಸರ ಎಂಜಿನಿಯರ್ ಮಂಜುನಾಥ ಶೆಟ್ಟಿ ಅವರು ಮಾರ್ಗದರ್ಶನ ಮಾಡಿದ್ದು ಕಡಿಮೆ ಮಾನವ ಶ್ರಮದಲ್ಲಿ ಯಂತ್ರಗಳ ಮೂಲಕವೇ ಸಿದ್ಧಪಡಿಸಲಾಗುತ್ತಿದೆ. ವಿಶಾಲವಾದ ಈ ಜಾಗದಲ್ಲಿ 350ರಷ್ಟು ಗಿಡಗಳನ್ನು ಬೆಳೆಸಲಾಗಿದೆ.
Advertisement
ಆದಾಯಕಸಸಂಗ್ರಹದಿಂದ ಪುರಸಭೆಗೆ ವಾರ್ಷಿಕ 40 ಲಕ್ಷ ರೂ. ಆದಾಯವಿದೆ, 1.2ಕೋ.ರೂ. ಖರ್ಚಾಗುತ್ತದೆ. ಇನ್ನು ಸುಮಾರು 10 ಲಕ್ಷ ರೂ. ಗೊಬ್ಬರ ಮಾರಾಟದಿಂದ ನಿರೀಕ್ಷಿಸಲಾಗಿದೆ.
ಜೀವದ್ರವ್ಯ ಕೋಳಿತ್ಯಾಜ್ಯವನ್ನು ಕ್ಯಾನ್‌ನಲ್ಲಿ ಸಂಗ್ರಹಿಸಿ ಮರುಗೊಬ್ಬರ
10 ವರ್ಷಗಳಷ್ಟು ಹಿಂದಿನ ಕಸದ ಸಂಗ್ರಹ ಇಲ್ಲಿದ್ದು ಅವುಗಳಲ್ಲಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಬೇರ್ಪಡಿಸಿ ಸಾಧ್ಯವಾದಷ್ಟು ಗೊಬ್ಬರ ತಯಾರಿ ಮಾಡಬೇಕಿದೆ. ಪರಿಸರಕ್ಕೆ ಹಾನಿಯಾಗದಂತೆ, ಪರಿಸರದ ಜನತೆಗೆ ಎಲ್ಲೂ ದುರ್ಗಂಧ ಪಸರಿಸದಂತೆ ತ್ಯಾಜ್ಯ ವಿಲೇ ಘಟಕದ ಕಾರ್ಯಾಚರಣೆಯಿದೆ.
-ಶರತ್, ಆರೋಗ್ಯ ನಿರೀಕ್ಷಕ, ಪುರಸಭೆ ಪಂಚಾಯತ್‌ಗಳ ಕಸವೂ ಗೊಬ್ಬರ
ಈಗಾಗಲೇ ಪುರಸಭೆಗೆ ಬರುವ ನೀರನ್ನು 5 ಪಂಚಾಯತ್‌ಗಳಿಗೆ ನೀಡಲಾಗುತ್ತಿದೆ. ಅಂತೆಯೇ ತ್ಯಾಜ್ಯ ವಿಲೇಗೆ ಜಾಗದ ಸಮಸ್ಯೆ ಇರುವ ಪಂಚಾಯತ್‌ಗಳು ಇಲ್ಲಿಗೆ ಹಸಿಕಸ ಕೊಟ್ಟರೆ ಅದನ್ನು ಗೊಬ್ಬರವಾಗಿಸಲಾಗುವುದು. ಹೊಸಯಂತ್ರದಲ್ಲಿ ದಿನಕ್ಕೆ 20 ಟನ್ ಗೊಬ್ಬರ ತಯಾರಿಸಬಹುದು. ಇದಕ್ಕೂ ಆಡಳಿತ ಮಂಡಳಿ ಅಂದೇ ಸಹಮತ ಸೂಚಿಸಿ ಯಂತ್ರಸ್ಥಾಪನೆಗೆ ಮುಂದಡಿಯಿಟ್ಟದ್ದು.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ