Advertisement

ಕಟ್ಟಿಗೆಯ ಹೊರೆ ಹೊತ್ತು ಮಹಿಳೆಯರ ಮೆರವಣಿಗೆ

12:58 PM Feb 11, 2021 | Team Udayavani |

ಧಾರವಾಡ: ಪೆಟ್ರೋಲ್‌, ಡಿಸೇಲ್‌ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಇಳಿಸುವಂತೆ ಆಗ್ರಹಿಸಿ ಹು-ಧಾ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ ರಾಣಿ ಚನ್ನಮ್ಮ ಬ್ಲಾಕ್‌ ವತಿಯಿಂದ ನಗರದಲ್ಲಿ  ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಲಾಭವನದಿಂದ ವಿವೇಕಾನಂದ ವೃತ್ತದವರೆಗೆ ಗೌರಮ್ಮಾ ಬಲೋಗಿ (ನಾಡಗೌಡ್ರ) ನೇತೃತ್ವದಲ್ಲಿ  ಮಹಿಳೆಯರು ತಲೆ ಮೇಲೆ ಕಟ್ಟಿಗೆ ಹೊರೆ ಹೊತ್ತು ಮೆರವಣಿಕೆ ಕೈಗೊಂಡು, ಬೆಲೆ ಏರಿಕೆಯ ಕೇಂದ್ರ  ಸರಕಾರದ ಕ್ರಮ ಖಂಡಿಸಿದರು.

ಇದನ್ನೂ ಓದಿ :ದೆಹಲಿಯ ರೈತ ಹೋರಾಟಕ್ಕೆ ಬೆಂಬಲ  

ವಿವೇಕಾನಂದ ವೃತ್ತದಲ್ಲಿ ಕಟ್ಟಿ ಹೊರೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಜನಸಾಮಾನ್ಯರ ಹಿತದೃಷ್ಟಿಯಿಂದ ಬೆಲೆಇಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಲಾಯಿತು. ಬಸವರಾಜ ಮಲಕಾರಿ, ಬಸವರಾಜ ಜಾಧವ, ಸುಜನ್‌ ಕಾಕಿ, ಸುಮಿತ್ರಾ ಕೊಟೇಕರ್‌, ಚಾಂದಿº ಅತ್ತಾರ, ಕುಸುಮ ಜೈನ್‌, ವಿಜಯಲಕ್ಷ್ಮೀ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next