Advertisement

ಒತ್ತಡ ನಿವಾರಣೆಗೆ ಜುಂಬಾ ಡ್ಯಾನ್ಸ್‌!

10:47 AM Feb 21, 2020 | Suhan S |

ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ “ಜುಂಬಾ’ ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್‌ ಮಾರ್ಗದರ್ಶನದಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ನ ಮ್ಯಾನ್‌ಪೋ ಕನ್ವೆಷನ್‌ ಹಾಲ್‌ನಲ್ಲಿ ಮೂರು ದಿನಗಳ ಕಾಲ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 800 ಮಂದಿಗೆ ಜುಂಬಾ ತರಬೇತಿ ನೀಡಲಾಗಿದೆ. ಹಲವು ತಂಡಗಳಾಗಿ ತರಬೇತಿ ನೀಡಿದ್ದು ನೃತ್ಯದಲ್ಲಿ ಪಾಲ್ಗೊಂಡಿದ್ದ ಮಹಿಳಾ ಅಧಿಕಾರಿಗಳು ಸಿಬ್ಬಂದಿ ಸೇರಿ ಎಲ್ಲ ಪೊಲೀಸರು ಕೂಡ ಉತ್ಸಾಹದಿಂದ ಕುಣಿದಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗಿದ್ದು. ಸದಾ ಒತ್ತಡದಲ್ಲಿಯೇ ಕೆಲಸ ಮಾಡುವ ಸಿಬ್ಬಂದಿ ಮನಸು ಹಗುರವಾಗಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದ “ಜುಂಬಾ’ ನೃತ್ಯದ ವಿಡಿಯೋ ವೀಕ್ಷಿಸಿದ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಒತ್ತಡ ನಿವಾರಣೆಗೆ ಇಂತಹ ಕಾರ್ಯಕ್ರಮಗಳು ಆಗಾಗ್ಗೆ ಅಗತ್ಯ ಎಂದಿದ್ದಾರೆ. ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂರು ದಿನಗಳ ಕಾಲ ಉತ್ಸುಕತೆಯಿಂದ “ಜುಂಬಾ’ನೃತ್ಯದಲ್ಲಿ ಪಾಲ್ಗೊಂಡಿದ್ದು, ಅವರು ಸಂತೋಷಗೊಂಡಿದ್ದಾರೆ. ಬಿಗಿ ಕೆಲಸದ ಒತ್ತಡದ ನಡುವೆ ಅವರ ವಿಶ್ರಾಂತಿಗಾಗಿ ಇದೊಂದು ಪ್ರಯತ್ನವಷ್ಟೇ ಎಂದು ಡಿಸಿಪಿ ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next