ವಾಷಿಂಗ್ಟನ್: ಮಾರ್ಷಲ್ ಆರ್ಟ್ಸ್ ತರಬೇತಿ ವೇಳೆ ಉಂಟಾದ ಪೆಟ್ಟಿನಿಂದಾಗಿ ಮೆಟಾ ಸಂಸ್ಥಾಪಕ, ಸಿಇಒ ಮಾರ್ಕ್‌ಝುಕರ್‌ಬರ್ಗ್ ಮೊಣಕಾಲು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ಸ್ವತಃ ಮಾರ್ಕ್ ಜುಗರ್‌ಬರ್ಗ್ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, “ಮಾರ್ಷಲ್ ಆರ್ಟ್ಸ್ ಕಲಿಕೆ ಸಂದರ್ಭದಲ್ಲಿ ಮೊಣಕಾಲಿಗೆ ಪೆಟ್ಟಾಯಿತು. ಹಾಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಅವರ ಮೊಣಕಾಲಿಗೆ ಬ್ಯಾಂಡೇಜ್ ಹಾಕಲಾಗಿದೆ.
“ಓನ್ಲಿಫ್ಯಾನ್ಸ್” ರೀತಿ:
ಈ ನಡುವೆ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಮಾರ್ಕ್ ಝುಕರ್‌ಬರ್ಗ್ ನಡುವೆ ವಾಗ್ಯುದ್ಧ ಮುಂದುವರಿದಿದೆ. ಟ್ವಿಟರ್(ಎಕ್ಸ್)ನಲ್ಲಿ ಡಾಗಿಡಿಸೈನರ್ ಎಂಬ ಖಾತೆಯಲ್ಲಿ “ಇನ್ಸ್‌ಸ್ಟಾಗ್ರಾಮ್ ಮತ್ತು ಓನ್ಲಿಫ್ಯಾನ್ಸ್ ನಡುವೆ ಏನು ವ್ಯತ್ಯಾಸ” ಎಂದು ಪ್ರಶ್ನಿಸಿದ್ದಕ್ಕೆ ಮಸ್ಕ್, “ಬಹುಮಟ್ಟಿಗೆ ಎರಡೂ ಒಂದೇ” ಎಂದು ವ್ಯಂಗ್ಯವಾಡಿದ್ದಾರೆ.