Advertisement
ಅಷ್ಟು ಗರಿಷ್ಠ ಪ್ರಮಾಣದಲ್ಲಿ ಭಾರತ ಎಂಜಿನಿಯರ್‌ಗಳನ್ನು ಸೃಷ್ಟಿಸುತ್ತದೆ.
Related Articles
Advertisement
ಇದಕ್ಕೆ ಸ್ಪಷ್ಟ ಮತ್ತು ಮಾದರಿ ಉದಾಹರಣೆ ಎಂದರೆ ತಮಿಳುನಾಡಿನ ತಿರುಪುರ ಯುವಕ ಜುಬೈರ್ ರೆಹಮಾನ್.
ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಈತ ಸ್ವಾವಲಂಬಿ ಜೀವನಕ್ಕೆ ಸ್ವಂತ ಇ-ಕಾಮರ್ಸ್ ಉದ್ಯಮ ತೆರೆದು ಇಂದು ಕೋಟ್ಯಧಿಪಧಿಯಾಗಿದ್ದಾನೆ. ಈತ ತನ್ನ ಈ ಉದ್ಯಮದ ಆರಂಭಕ್ಕೆ ಹೂಡಿದ ಬಂಡವಾಳ ಕೇವಲ 10 ಸಾವಿರ ರೂ. ಮಾತ್ರ.10 ಸಾವಿರ ಬಂಡವಾಳದಲ್ಲಿ ಕಂಪೆನಿ ಆರಂಭಿಸಿದ ಈತ ಇಂದು ಕೋಟ್ಯಂತರ ರೂ. ವ್ಯವಹಾರ ಮಾಡುವ ಕಂಪೆನಿಯನ್ನು ಕಟ್ಟಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾನೆ. ಎಲ್ಲಿ ಸತತ ಪ್ರಯತ್ನ ಮತ್ತು ಪರಿಶ್ರಮ ಇರುತ್ತೋ ಅಲ್ಲಿ ಯಶಸ್ಸು ಇರುತ್ತೆ ಎಂಬುದಕ್ಕೆ ಈತ ಮಾದರಿಯಾಗಿದ್ದಾನೆ. ಸಿಸಿಟಿವಿ ಆಪರೇಟರ್ ಆಗಿದ್ದ ಜುಬೈರ್
ತಿರುಪುರ ಯುವಕ ಜುಬೈರ್ ರೆಹಮಾನ್ ತನ್ನ ಎಂಜಿನಿಯರಿಂಗ್ ಪದವಿ ಮುಗಿದ ಬಳಿಕ ಈತ ಖಾಸಗಿ ಕಂಪೆನಿಯೊಂದರಲ್ಲಿ ಸಿಸಿಟಿವಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಅದೊಂದು ಸಾರಿ ತಮಿಳುನಾಡಿನ ದೊಡ್ಡ ಕಂಪೆನಿಯೊಂದಕ್ಕೆ ಸಿಸಿಟಿವಿ ಅಳವಡಿಸಲು ಹೋಗಿದ್ದ ಈತ ಅಲ್ಲಿನ ಕಾರ್ಯನಿರ್ವಾಹಕರೊಬ್ಬರು ತನ್ನ ಕಂಪೆನಿಯ ಸರಕು ಸಾಗಾಟ, ಮಾರಾಟದ ಬಗ್ಗೆ ಒಂದಿಷ್ಟು ಅನುಭವವನ್ನು ಹಂಚಿಕೊಳ್ಳುತ್ತಾನೆ. ಈ ಅನುಭವದ ಮಾತು ಜುಬೈರ್ ಅವರನ್ನು ಕಣ್ಣು ತೆರೆಸುತ್ತದೆ. ಇದರಿಂದ ಸ್ಫೂರ್ತಿಗೊಂಡು ಇ-ಕಾಮರ್ಸ್ ಕಂಪೆನಿ ಆರಂಭಿಸಲು ಮುಂದಾಗುತ್ತಾನೆ.
ವ್ಯಾಪಾರ ಮಾರ್ಗ ಅರಿತ ಜುಬೈರ್
ತಾನು ವಾಸಿಸುವ ತಿರುಪುರದಲ್ಲಿ ಯಾವ ಉತ್ಪನ್ನದ ಉದ್ಯಮ ಆರಂಭಿಸಿದರೆ ಒಳಿತು ಎಂಬ ಯೋಚನೆಯನ್ನು ಸತತ ಎರಡು ತಿಂಗಳು ಮಾಡಿದ ಜುಬೈರ್ ಕೊನೆಗೆ ಜವುಳಿ ಉದ್ಯಮದ ಮೇಲೆ ಇ-ಕಾಮರ್ಸ್ ಆರಂಭಿಸಿದರೆ ಯಶಸ್ವಿಯಾಗುವುದು ಖಚಿತ ಎಂದು ಅರಿತನು. ಇದಕ್ಕೆ ಪೂರಕ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ತಿರುಪುರ ಭಾರತದ ಮಟ್ಟಿಗೆ ಉತ್ತಮ ಜವುಳಿ ಉದ್ಯಮ ಹೊಂದಿರುವ ಪ್ರದೇಶವಾಗಿದೆ. ಜವುಳಿ ರಾಜಧಾನಿ ಎಂದೇ ಪ್ರಸಿದ್ಧವಾಗಿದೆ. ಇದಕ್ಕಾಗಿ ಆತ ನಗರದ ಪ್ರಮುಖ ಜವುಳಿ ಉದ್ಯಮಿಗಳೊಂದಿಗೆ ಚರ್ಚಿಸಿದನು. ಕೊನೆಗೆ ಈ ಉದ್ಯಮವನ್ನೇ ಇ-ಕಾಮರ್ಸ್ ರೂಪದಲ್ಲಿ ಆರಂಭಿಸಲು ಮುಂದಾದನು. ಆಗ ರೂಪುಗೊಂಡಿದ್ದೇ ದಿ ಪ್ಯಾಶನ್. ಆರಂಭದಲ್ಲಿ ಕೈ ಹಿಡಿದ ಉದ್ಯಮ
ತನ್ನ ಮೊದಲಿನ ಕೆಲಸವನ್ನು ಬಿಟ್ಟ ಜುಬೈರ್ ಅವರು 10 ಸಾವಿರ ರೂ. ಬಂಡವಾಳದಲ್ಲಿ 2015ರಲ್ಲಿ ದಿ ಪ್ಯಾಶನ್ ಎಂಬ ಇ-ಕಾಮರ್ಸ್ ಉದ್ಯಮವನ್ನು ಆರಂಭಿಸಿದನು. ಕಂಪೆನಿ ಆರಂಭದ ಮೊದಲಿಗೆ ಈತ ಫ್ಲಿಪ್‌ಕಾರ್ಟ್, ಅಮೆಜಾನ್ ಮೂಲಕ ದಿನಕ್ಕೆ ಒಂದು, ಎರಡು ಸರಕುಗಳನ್ನು ತರಿಸಿಕೊಳ್ಳುತ್ತಿದ್ದರು. ಬಳಿಕ ಇದು ಹೆಚ್ಚಾಯಿತು. ಮುಂದೆ ಇವರೇ ತಮ್ಮ ಘಟಕವನ್ನು ಆರಂಭಿಸಿದರು. ಮಕ್ಕಳು, ಯುವಕರು, ಹೆಂಗಸರು ಮತ್ತು ಗಂಡಸರ ಅಭಿರುಚಿಗೆ ತಕ್ಕಂತೆ ಬೇಕಾದ ಬಟ್ಟೆಗಳನ್ನು ತಯಾರಿಸಲು ಆರಂಭಿಸಿದರು. ಹೆಚ್ಚಿನ ಗ್ರಾಹಕರನ್ನು ಸೆಳೆದಂತೆ ಉದ್ಯವವು ಗಟ್ಟಿಗೊಂಡಿತು. ಯಶಸ್ವಿಯತ್ತ ಉದ್ಯಮ
ಆರಂಭದಲ್ಲಿ ಕಡಿಮೆ ಬೇಡಿಕೆಯಿದ್ದ ಕಂಪೆನಿಗೆ ಸದ್ಯ ಸುಮಾರು ದಿನಕ್ಕೆ 250-300 ಆರ್ಡರ್‌ಗಳು ಬರುತ್ತವೆ. ಇದರಿಂದ ಉದ್ಯಮವೂ ಕೂಡ ಗಟ್ಟಿಯಾಗಿದೆ. ಏನಿಲ್ಲವೆಂದರೂ ತಿಂಗಳಿಗೆ ಸುಮಾರು 50 ಲಕ್ಷ ರೂ. ಆದಾಯವನ್ನು ಗಳಿಸಲು ಶಕ್ತವಾಗಿದೆ. ಈ ಉದ್ಯಮ ಯಶಸ್ವಿಯಾಗಲು ಜುಬೈರ್ ರೆಹಮಾನ್ ಅವರ ಅಪ್ರತಿಮ ಪರಿಶ್ರಮ, ವ್ಯಾಪಾರ ಕೌಶಲತೆಯೇ ಕಾರಣ. ಹೀಗಾಗಿ ನಮಗೆ ಇವರು ಸ್ಫೂರ್ತಿಯಾಗುತ್ತಾರೆ. ಶಿವಮಲ್ಲಯ್ಯ ಸಿಂಧನೂರು