Advertisement

ಜಿಪಂ-ತಾಪಂ ಮೀಸಲಾತಿ ಪ್ರಕಟ

06:40 PM Jul 02, 2021 | Team Udayavani |

ಧಾರವಾಡ: ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯರ ಅಧಿಕಾರಾವಧಿ  ಪೂರ್ಣಗೊಂಡಿದ್ದು, ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯ್ತಿಗೆ ಮೀಸಲಾತಿಯನ್ನು ಪ್ರಕಟ ಮಾಡಿದೆ. ಅಲ್ಲದೆ ಜಿಲ್ಲೆಯಲ್ಲಿನ ತಾಪಂಗಳ ಮೀಸಲಾತಿಯನ್ನೂ ಪ್ರಕಟಿಸಲಾಗಿದೆ.

Advertisement

ಗರಗ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಸಾಮಾನ್ಯ ಸ್ಥಾನ, ನರೇಂದ್ರಕ್ಕೆ ಹಿಂದುಳಿದ ಅ ವರ್ಗ (ಮಹಿಳೆ), ಉಪ್ಪಿನ ಬೆಟಗೇರಿಗೆ ಸಾಮಾನ್ಯ (ಮಹಿಳೆ), ಅಮ್ಮಿನಭಾವಿಗೆ ಹಿಂದುಳಿದ ವರ್ಗ “ಅ’, ಹೆಬ್ಬಳ್ಳಿಗೆ ಸಾಮಾನ್ಯ (ಮಹಿಳೆ), ಮುಗದಕ್ಕೆ ಹಿಂದುಳಿದ ವರ್ಗ “ಅ’, ಮನಗುಂಡಿಗೆ ಸಾಮಾನ್ಯ (ಮಹಿಳೆ), ಬ್ಯಾಹಟ್ಟಿಗೆ ಹಿಂದುಳಿದ ವರ್ಗ ‘ಬ’ (ಮಹಿಳೆ), ಕೋಳಿವಾಡಕ್ಕೆ ಸಾಮಾನ್ಯ, ಅದರಗುಂಚಿಗೆ ಹಿಂದುಳಿದ ವರ್ಗ ಅ (ಮಹಿಳೆ), ಛಬ್ಬಿಗೆ ಅನುಸೂಚಿತ ಜಾತಿ, ಅಂಚಟಗೇರಿಗೆ ಅನುಸೂಚಿತ ಪಂಗಡ (ಮಹಿಳೆ), ಮೊರಬಕ್ಕೆ ಸಾಮಾನ್ಯ, ತಿರ್ಲಾಪುರಕ್ಕೆ ಅನುಸೂಚಿತ ಜಾತಿ (ಮಹಿಳೆ), ಅಳಗವಾಡಿಗೆ ಹಿಂದುಳಿದ ವರ್ಗ ಅ (ಮಹಿಳೆ), ಗಳಗಿಗೆ ಸಾಮಾನ್ಯ (ಮಹಿಳೆ), ಮಿಶ್ರಿಕೋಟಿಗೆ ಹಿಂದುಳಿದ ವರ್ಗ ಅ, ದೇವಿಕೊಪ್ಪಕ್ಕೆ ಹಿಂದುಳಿದ ವರ್ಗ ಬ, ತಬಕದಹೊನ್ನಳ್ಳಿಗೆ ಅನುಸೂಚಿತ ಪಂಗಡ, ಯರಗುಪ್ಪಿಗೆ ಹಿಂದುಳಿದ ವರ್ಗ ಅ (ಮಹಿಳೆ), ಸಂಶಿಗೆ ಸಾಮಾನ್ಯ (ಮಹಿಳೆ), ಗುಡಗೇರಿಗೆ ಸಾಮಾನ್ಯ, ಕಮಡೊಳ್ಳಿಗೆ ಸಾಮಾನ್ಯ (ಮಹಿಳೆ), ಯಲಿವಾಳಕ್ಕೆ ಸಾಮಾನ್ಯ (ಮಹಿಳೆ), ಹೊನ್ನಾಪುರಕ್ಕೆ ಸಾಮಾನ್ಯ, ಶಲವಡಿಗೆ ಸಾಮಾನ್ಯ, ನಲವಡಿಗೆ ಸಾಮಾನ್ಯ ಮೀಸಲಾತಿ ಪ್ರಕಟ ಮಾಡಲಾಗಿದೆ.

ಕಳೆದ ಜಿಲ್ಲಾ ಪಂಚಾಯತಿಯಲ್ಲಿ 22 ಕ್ಷೇತ್ರಗಳಿದ್ದವು. ಇದೀಗ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಮತ್ತೆ 5 ಹೊಸ ಕ್ಷೇತ್ರಗಳು ಉದಯವಾಗಿದ್ದು, ಒಟ್ಟು 27 ಕ್ಷೇತ್ರಗಳಾಗಿದ್ದು ಕೆಲವೊಂದು ಹಳೆ ಕ್ಷೆತ್ರಗಳೇ ಮಾಯವಾಗಿ ಬೇರೆ ಊರಿನ ಹೆಸರಿನ ಮೇಲೆ ನವೀನ ಕ್ಷೇತ್ರಗಳು ಉದಯವಾಗಿವೆ. ಈ ವರೆಗೂ ಬಿಜೆಪಿ ಭದ್ರಕೋಟೆಯಾಗಿದ್ದ ಧಾರವಾಡ ಜಿಪಂನಲ್ಲಿ ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್‌ ಅ ಧಿಕಾರದಲ್ಲಿತ್ತು. ಇದೀಗ ಮತ್ತೆ ಹೊಸ ಕ್ಷೇತ್ರಗಳು ಬಂದಿದ್ದು ಜಿಲ್ಲೆಯಲ್ಲಿ ಯಾರ ಕೈ ಮೇಲಾಗುವುದು ಎಂಬುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next