Advertisement

ಏಪ್ರಿಲ್‌ ನಲ್ಲಿ ಜಿ.ಪಂ., ತಾ.ಪಂ.ಚುನಾವಣೆ ಮಾಡಿ ಮುಗಿಸಲಿದ್ದೇವೆ : ಈಶ್ವರಪ್ಪ

04:14 PM Jan 30, 2022 | Team Udayavani |

ಶಿವಮೊಗ್ಗ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಮಾಡಿ ಮುಗಿಸುತ್ತೇವೆ ಎಂದು ಭಾನುವಾರ ಗ್ರಾಮೀಣಾಭಿವೃದ್ಧಿ ಇಲಾಖೆ‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಚುನಾವಣೆ ನಡೆಸಲು ತೀರ್ಮಾನಿಸಿದ್ದೆವು ಆದರೆ ಮೀಸಲಾತಿ ಸರಿಯಿಲ್ಲ ಹಾಗೂ ಕ್ಷೇತ್ರ ಪುನರ್ವಿಂಡಗಣೆ ಸರಿಯಿಲ್ಲ ಎಂದು 780 ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು‌. ಹೀಗಾಗಿ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಕ್ಷೇತ್ರಪುನರ್ ವಿಗಂಡಣಾ ಸಮಿತಿ ರಚನೆ ಮಾಡಲಾಗಿತ್ತು.ಇನ್ನೇನು ಲಕ್ಷ್ಮೀನಾರಾಯಣ್ ಅವರು ವರದಿ ನೀಡಲಿದ್ದು ವರದಿ ಬಂದಾಕ್ಷಣ ಚುನಾವಣೆ ನಡೆಸುತ್ತೇವೆ.ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ‌. ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ ನಲ್ಲಿ ಚುನಾವಣೆ ಮಾಡಿ ಮುಗಿಸಲಿದ್ದೇವೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಹೆಚ್ಚಿನ ಕೆಲಸಗಳು ಆಗಿವೆ.ಜಲಾಮೃತ ಯೋಜನೆ ಅನುಷ್ಟಾನದಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ ಓನ್ ಸ್ಥಾನದಲ್ಲಿದೆ.ಮನೆಮನೆಗೆ ಗಂಗೆ ಯೋಜನೆಯಡಿ ಸಾಕಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ‌ ನೀಡಿದ್ದೇವೆ.
ಈ ಯೋಜನೆ ಅನುಷ್ಠಾನದಲ್ಲಿ‌ ಕರ್ನಾಟಕ ದೇಶದಲ್ಲಿ 14 ನೇ ಸ್ಥಾನದಲ್ಲಿದೆ.ಪಿಎಂಜಿಎಸ್ ವೈ ಯೋಜನೆಯಡಿ ಕರ್ನಾಟಕಕ್ಕೆ ಐದು ಸಾವಿರ ಕಿಲೋಮೀಟರ್ ರಸ್ತೆ ಮಂಜೂರಾಗಿತ್ತು.ಈ ಯೋಜನೆಯಡಿ ರಾಜ್ಯದ ಗ್ರಾಮೀಣ ಭಾಗದ ಸಾಕಷ್ಟು ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದರು.

ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಚಿವ ಸುನೀಲ್ ಕುಮಾರ್ ಗೆ ಮಾಹಿತಿ ನೀಡಿದ್ದೆ.ಇದೀಗ ಸುನೀಲ್ ಕುಮಾರ್ ಈ ಯೋಜನೆ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next