Advertisement
ಆಂತರಿಕ ಒಪ್ಪಂದ: ಶುಕ್ರವಾರ ಬೆಳಗ್ಗೆ 11ಗಂಟೆಗೆ ಅಧ್ಯಕ್ಷೆ ನಯಿಮಾ ಸುಲ್ತಾನ ಸಾಮಾನ್ಯ ಸಭೆ ಕರೆದಿದ್ದರು. ಆದರೆ, ಸಭೆ ನಡೆಸಲು ಸಭಾಂಗಣಕ್ಕೆ ತೆರಳು ಅವಕಾಶ ಕೊಡದ ಸ್ವಪಕ್ಷೀಯ ಜೆಡಿಎಸ್ ಸದಸ್ಯರು, ಕಿರು ಸಭಾಂಗಣದಲ್ಲಿ ಸೇರಿ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಡ ಹೇರಿದ್ದರಿಂದ ನಯಿಮಾಸುಲ್ತಾನ ಅನಿವಾರ್ಯವಾಗಿ ರಾಜೀನಾಮೆ ಕೊಡಲು ಒಪ್ಪಿ, ರಾಜೀನಾಮೆ ಘೋಷಣೆ ಮಾಡಿದರು. ಈ ವೇಳೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಜಿ.ನಟರಾಜ್ ರಾಜೀನಾಮೆ ಸಲ್ಲಿಸಿದರು.
Related Articles
Advertisement
ಕಾಂಗ್ರೆಸ್‌ನ ಡಾ.ಪುಷ್ಪ ಅಮರನಾಥ್, ನಮ್ಮ ನಿರೀಕ್ಷೆಯನ್ನು ಹುಸಿ ಮಾಡದೆ ಸಭೆಗೆ ಬಂದಿದ್ದಕ್ಕೆ ಧನ್ಯವಾದಗಳು ಅಧ್ಯಕ್ಷರೇ ಎಂದು ನಯಿಮಾ ಸುಲ್ತಾನ ಅವರ ಕಾಲೆಳೆದರು. ಬಿಜೆಪಿಯ ವೆಂಕಟಸ್ವಾಮಿ ಮಾತನಾಡಿ, ನೀವು ಅವರನ್ನು (ಜೆಡಿಎಸ್ ಸದಸ್ಯರು) ಕಾಯ್ತಿದ್ದೀರಿ, ಅವರು ನೀವು ಹೊರಗೆ ಬರುವುದನ್ನು ಕಾಯುತ್ತಿದ್ದಾರೆ. ಕೋರಂ ಆಗಲ್ಲ, ಇದನ್ನು ಅರ್ಥ ಮಾಡಿಕೊಂಡು ಸಭೆಯನ್ನು ಮುಂದೂಡಿ ಎಂದು ಸಲಹೆ ನೀಡಿದರು.
ಆದರೆ, ಪುಷ್ಪ ಅಮರನಾಥ್, ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೊತ್ತು ತಂದಿದ್ದೇವೆ, ಸಭೆ ಮಾಡಿ ಎಂದರು. ಅದಕ್ಕೆ ಉತ್ತರಿಸಿದ ನಯಿಮಾ ಸುಲ್ತಾನ, ಹತ್ತು ನಿಮಿಷ ಟೈಂ ಕೊಡಿ ಸಭೆ ಮುಂದೂಡಲ್ಲ, ನಡೆಸುತ್ತೇನೆ ಎಂದು ಹೇಳಿದರು. ಅದಕ್ಕೆ ಒಪ್ಪಿದ ವಿಕಪ್ಷ ನಾಯಕ ಡಿ.ರವಿಶಂಕರ್, ಹತ್ತು ನಿಮಿಷ ಕಾಲಾವಕಾಶ ಕೇಳಿದ್ದೀರಿ, ನಾವು ಕಾಯೆ¤àವೆ ಸಭೆ ಮಾಡಿ ಎಂದರು.
ಮತ್ತೆ ಕಿರು ಸಭಾಂಗಣಕ್ಕೆ ತೆರಳಿದ ನಯಿಮಾಸುಲ್ತಾನ, ತಮ್ಮ ಪಕ್ಷದ ಸದಸ್ಯರ ಮನವೊಲಿಸಲು ಯತ್ನಿಸಿದರಾದರು ಮೊದಲು ನಿಮ್ಮ ರಾಜೀನಾಮೆ ಅಂಗೀಕಾರವಾಗಲಿ, ಆ ನಂತರ ಸಭೆ ನಡೆಸೋಣ ಎಂದಿದ್ದರಿಂದ ಮಧ್ಯಾಹ್ನ 12.35ಕ್ಕೆ ಮತ್ತೆ ಸಭಾಂಗಣಕ್ಕೆ ಮತ್ತೆ ಬಂದ ನಯಿಮಾ ಸುಲ್ತಾನ, ಕೋರಂ ಅಭಾವದಿಂದ ಇಂದಿನ ಸಭೆ ಮುಂದೂಡಿರುವುದಾಗಿ ಪ್ರಕಟಿಸಿ ಹೊರ ನಡೆದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು ಎಂದು ಡಾ.ಪುಷ್ಪ ಅಮರನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಯಡವಟ್ಟಿಗೆ ಕ್ಷಮೆ ಕೋರಿದ ಸಿಇಒ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಯಿಮಾ ಸುಲ್ತಾನ ಒಪ್ಪಿಗೆ ಸೂಚಿಸುತ್ತಿದ್ದಂತೆ ಸಭಾಂಗಣಕ್ಕೆ ಆತುರಾತುರವಾಗಿ ಬಂದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್, ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಬಿಟ್ಟರು. ಆದರೆ, ಸಭೆ ನಡೆಸಲು ಕೋರಂ ಇರಲಿಲ್ಲ. ಜಿಪಂ ಸಿಇಒ ಅಲ್ಲೇ ಇದ್ದರಾದರು ತಡೆಯುವ ಪ್ರಯತ್ನ ಮಾಡಲಿಲ್ಲ.
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆ ಅಂಗೀಕಾರವಾಗದೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು, ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಲು ಬರುವುದಿಲ್ಲ. ಅಧ್ಯಕ್ಷರು ರಾಜೀನಾಮೆ ನೀಡುವ ಮುನ್ನವೇ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಂಪರ್ಕ ಕೊರತೆಯಿಂದ ಈ ಸಮಸ್ಯೆಯಾಯಿತು ಎಂದು ಸಿಇಒ ಕೆ.ಜ್ಯೋತಿ ಅವರು ಸದಸ್ಯರ ಕ್ಷಮೆ ಕೋರಿದರು.