Advertisement
ರಾಜ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು ಸರಕಾರಿ ಮತ್ತು ಖಾಸಗಿ ಸಾರಿಗೆ ಸಹಿತ ಪೂರ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆ ಆರಂಭಿಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಹೊಸ ಜೀವನಶೈಲಿ ಅಳವಡಿಸಿ ಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಮನವೊಲಿಸುವಂತೆ ಪ್ರಧಾನಿ ಮೋದಿ ಸಿಎಂಗೆ ಸಲಹೆ ನೀಡಿದ್ದಾರೆ.
Related Articles
Advertisement
ರಾಜ್ಯದ ಪ್ರಸ್ತಾವನೆಗಳು-ಜಿಲ್ಲಾವಾರು ಮಟ್ಟದಲ್ಲಿ ಬಣ್ಣವಾರು ವಲಯ ಬೇಡ
-ಕಂಟೈನ್‌ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ
-ಇತರೆಡೆ ವಾಣಿಜ್ಯ ಚಟುವಟಿಕೆ, ಸಾರ್ವಜನಿಕ ಸಾರಿಗೆಗೆ ಅನುಮತಿ
-ಮೇ ಅಂತ್ಯದ ವರೆಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಯಾಣ ಬೇಡ
-ಅಂತಾರಾಷ್ಟ್ರೀಯ, ಅಂತಾರಾಜ್ಯ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್
-ಖಾಸಗಿ ಆಸ್ಪತ್ರೆ, ಚಿಕಿತ್ಸಾಲಯಗಳು ಕೋವಿಡ್-19ಚಿಕಿತ್ಸೆಗೆ ಆದೇಶ
-ಕೋವಿಡ್-19 ಪರೀಕ್ಷೆಗಳಿಗಾಗಿ ಸಮಗ್ರ ಮಾರ್ಗಸೂಚಿ
-ಕೋವಿಡ್-19 ಸೋಂಕು ಚಿಕಿತ್ಸೆಗೆ ಟೆಲಿ ಮೆಡಿಸಿನ್ ಮಾನವ ಸಹಜ ಗುಣ
ಸಾಂಕ್ರಾಮಿಕ ಸೋಂಕು ದೇಶವನ್ನೇ ವ್ಯಾಪಿಸಿರುವ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತನ್ನ ಊರು, ಮನೆಗೆ ಹೋಗಬೇಕು ಎಂದು ಅನಿಸುವುದು ಮನುಷ್ಯ ಸಹಜ ಗುಣ. ಆದರೆ ಸಾರ್ವಜನಿಕರು, ವಲಸಿಗರು ಈಗ ಎಲ್ಲೆಲ್ಲಿ ಇದ್ದಾರೋ ಅಲ್ಲೇ ಇರುವಂತೆ ನೋಡಿಕೊಳ್ಳಲು ಸಿಎಂಗಳಿಗೆ ಪ್ರಧಾನಿ ಸಲಹೆ ನೀಡಿದರು. ಸಭೆಯ ವೈಶಿಷ್ಟ್ಯಗಳು
ಪ್ರಧಾನಿ ನಡೆಸಿದ ಐದನೇ ಸಭೆ ಬರೋಬ್ಬರಿ ಆರು ತಾಸುಗಳ ಕಾಲ ಜರಗಿತು. ನಡುವೆ ಸಂಜೆ 6 ಗಂಟೆಗೆ 30 ನಿಮಿಷಗಳ ವಿರಾಮ ತೆಗೆದುಕೊಳ್ಳಲಾಗಿತ್ತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಸಲಹೆ ನೀಡಲು ಅವಕಾಶ ಸಿಕ್ಕಿದ್ದು ಸೋಮವಾರದ ವೀಡಿಯೋ ಸಭೆಯ ವಿಶೇಷ. ಕೆಲವು ವಿನಾಯಿತಿ ಮಾತ್ರ
ಲಾಕ್‌ಡೌನ್ ಸಡಿಲಿಕೆಗೆ ಒಪ್ಪದ ಮೋದಿ
ಹೊಸದಿಲ್ಲಿ: ಲಾಕ್‌ಡೌನ್ ಮೇ 17ರ ಅನಂತರವೂ ಮುಂದುವರಿಯುವುದು ಖಚಿತವಾಗಿದ್ದು, ಹೆಚ್ಚಿನ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಲಾಕ್‌ಡೌನ್ ಸಂಪೂರ್ಣ ನಿವಾರಿಸುವ ವಿವಿಧ ಸಿಎಂಗಳ ಸಲಹೆಗೆ ಪ್ರಧಾನಿ ಮೋದಿ ಒಪ್ಪಿಗೆ ನೀಡಿಲ್ಲ. ಒಂದೇ ಬಾರಿಗೆ ಲಾಕ್‌ಡೌನ್ ನಿವಾರಣೆ ಅಸಾಧ್ಯ. ಆರ್ಥಿಕ ಚಟುವಟಿಕೆ ಸ್ಥಗಿತವೂ ಸಾಧ್ಯವಿಲ್ಲ. ಹೀಗಾಗಿ ಮೇ 17ರ ಅನಂತರ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ಸಲಹೆ ನೀಡುವಂತೆ ಮೋದಿ ರಾಜ್ಯಗಳಿಗೆ ಮನವಿ ಮಾಡಿದ್ದು, ಮೇ 15ರ ಒಳಗೆ ಕಳುಹಿಸುವಂತೆ ಸೂಚಿಸಿದ್ದಾರೆ. ಸಿಎಂಗಳ ಜತೆ ನಡೆದ ವೀಡಿಯೋ ಸಂವಾದದ ಬಳಿಕ ಮಾತನಾಡಿದ ಪ್ರಧಾನಿ, ಕೋವಿಡ್-19ನಿಯಂತ್ರಣದಲ್ಲಿ ರಾಜ್ಯಗಳ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಕೋವಿಡ್-19 ಬಂದ ಬಳಿಕ ದೇಶದ ಜನರ ಜೀವನ ವಿಧಾನ ಬದಲಾಗಿದೆ. ಈಗ ನಾವು ಹೊಸ ಮಾದರಿಯ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ. ಲಾಕ್‌ಡೌನ್ ತೆರವು ಅಥವಾ ಹೆಚ್ಚಿನ ನಿರ್ಬಂಧ ಮುಂದುವರಿಕೆ ವಿಚಾರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಬೇಕು ಎಂಬ ಬಗ್ಗೆ ಹಲವಾರು ಸಿಎಂಗಳು ಬೇಡಿಕೆ ಇರಿಸಿದ್ದಾರೆ. ಕೇಂದ್ರ ಸರಕಾರ ಈ ಬೇಡಿಕೆಗೆ ಅಸ್ತು ಅನ್ನುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸಮತೋಲನ ತಂತ್ರ
ಮುಂದಿನ ದಿನಗಳಲ್ಲಿ ಕೋವಿಡ್-19 ವಿರುದ್ಧ ಹೋರಾಡಲು “ಸಮತೋಲನ ತಂತ್ರ’ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಸಲಹೆ ಮೇರೆಗೆ ಒಂದು ಸಾಮಾನ್ಯ ತಂತ್ರವನ್ನು ದೇಶದೆಲ್ಲೆಡೆ ಅನುಸರಿಸುವ ಅಗತ್ಯವಿದೆ ಎಂದಿದ್ದಾರೆ. ಗ್ರಾಮ ಸುರಕ್ಷಿತವಾಗಿಸಿ
ಗ್ರಾಮಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟುವುದೇ ಅತೀ ದೊಡ್ಡ ಸವಾಲು ಎಂದು ಹೇಳಿದ ಪ್ರಧಾನಿ, ಸರಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕೋವಿಡ್-19 ಗ್ರಾಮಗಳಿಗೆ ಮುತ್ತಿಗೆ ಹಾಕದಂತೆ ತಡೆಯಲು ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯಗಳ ಸಿಎಂಗಳಿಗೆ ತಿಳಿಸಿದರು.