ಮುಂಬಯಿ: ಆನ್ ಲೈನ್ ಆಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಝೊಮ್ಯಾಟೊ, ಸ್ವಿಗ್ಗಿ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಲಿದ್ದು, ಮುಂಬರುವ ದಿನಗಳಲ್ಲಿ ತನ್ನ ಆಹಾರೋತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಆನ್‌ಲೈನ್ ಆರ್ಡ್‌ರ್ ಫುಡ್ ಪ್ರಿಯರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ಝೊಮ್ಯಾಟೊ ಮತ್ತು ಸ್ವಿಗ್ಗಿ ರಿಯಾಯಿತಿ ಸೌಲಭ್ಯವನ್ನು ನಿಲ್ಲಿಸಿದ್ದು, ಕಂಪನಿಯ ಆದಾಯದಲ್ಲಿ ಇಳಿಕೆಯಾಗುತ್ತಿರುವುದೇ ಈ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕಳೆದ ಹದಿನೆಂಟು ತಿಂಗಳಿನಿಂದ ಕಂಪನಿಗಳ ಆದಾಯ ಮಟ್ಟ ತಟ್ಟಸ್ಥವಾಗಿದ್ದು, ಬೆಳವಣಿಗೆ ದರ ಕುಂಠಿತವಾಗಿದೆ. ಜತೆಗೆ ಆನ್‌ಲೈನ್ ಅಲ್ಲಿ ಫುಡ್ ಖರೀದಿಸುವ ಗ್ರಾಹಕರ ಪ್ರಮಾಣದಲ್ಲಿಯೂ ಇಳಿಕೆಯಾಗಿದ್ದು, ಕಂಪನಿಗಳಿಗೆ ಹಿಂಜರಿತದ ಬಿಸಿ ತಟ್ಟಿದೆ.
ಕಳೆದ ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಆರ್ಡರ್‌ಗಳ ಪ್ರಮಾಣದಲ್ಲಿ ಶೇ.2 ಇಳಿಕೆಯಾಗಿದ್ದು, ಆಫರ್ ನೀಡಿದ ಸಂದರ್ಭದಲ್ಲಿ ಮಾತ್ರ ಗ್ರಾಹಕರು ಫುಡ್ ಖರೀದಿಸುತ್ತಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಹಬ್ಬಆಚರಣೆಗಳು ಇದ್ದ ಕಾರಣದಿಂದಾಗಿ ವ್ಯಾಪಾರ ವಹಿವಾಟು ನಡೆದಿದ್ದು, ಆರ್ಥಿಕ ಕ್ಷೇತ್ರದಲ್ಲಿ ಆಗುತ್ತಿರುವ ಏರಳಿತಗಳೇ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಜತೆಗೆ ಅದರ ಬಿಸಿ ಈ ಆನ್‌ಲೈನ್ ಫುಡ್ ಉತ್ಪನ್ನಗಳಿಗೂ ತಟ್ಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.