Advertisement

ಝೊಮ್ಯಾಟೋ ಡೆಲಿವರಿ ಬಾಯ್‌ಗೆ ಬೈಕ್‌ ಗಿಫ್ಟ್

09:01 PM Apr 12, 2022 | Team Udayavani |

ಜೈಪುರ: ಝೊಮ್ಯಾಟೋದಲ್ಲಿ ಊಟ ಬರುವುದು ತಡವಾದರೆ ಡೆಲಿವರಿ ಬಾಯ್‌ಗೆ ಬೈದು, ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸುವವರನ್ನು ನೋಡಿರುತ್ತೀರಿ. ಆದರೆ ರಾಜಸ್ಥಾನದಲ್ಲಿ ಡೆಲಿವರಿ ಬಾಯ್‌ ಒಬ್ಬ ಸರಿಯಾದ ಸಮಯಕ್ಕೆ ಡೆಲಿವರಿ ಮಾಡಿದ ಎನ್ನುವ ಖುಷಿಯಲ್ಲಿ ವ್ಯಕ್ತಿಯೊಬ್ಬ ಆತನಿಗೆ ಹೊಸ ಬೈಕ್‌ ಅನ್ನೇ ಕೊಡಿಸಿದ್ದಾನೆ!

Advertisement

ಬಿ.ಕಾಮ್‌ ಪದವೀಧರ ದುರ್ಗಾ ಮೀನ(31) ಕೊರೊನಾಗೂ ಮೊದಲು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರಂತೆ. ಆದರೆ, ನಂತರ ನಿರುದ್ಯೋಗಿಯಾದ ಅವರು ತಮ್ಮಲ್ಲಿದ್ದ ಸೈಕಲ್‌ ಬಳಸಿಕೊಂಡು ಝೊಮ್ಯಾಟೋ ಡೆಲಿವರಿ ಬಾಯ್‌ ಆಗಿದ್ದಾರೆ.

ಇದನ್ನೂ ಓದಿ:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು : ಕಟೀಲ್ ವಿಶ್ವಾಸ

ಇತ್ತೀಚೆಗೆ ಆದಿತ್ಯಾ ಶರ್ಮಾ ಹೆಸರಿನ ವ್ಯಕ್ತಿ ಝೊಮ್ಯಾಟೋದಲ್ಲಿ ಆರ್ಡರ್‌ ಮಾಡಿದಾಗ, ದುರ್ಗಾ ಮೀನ ಸರಿಯಾದ ಸಮಯಕ್ಕೆ ಊಟ ತಂದುಕೊಟ್ಟಿದ್ದಾರೆ. 42 ಡಿ.ಸೆ. ತಾಪಮಾನವಿದ್ದರೂ, ಚೂರೂ ತಡ ಮಾಡದೆ ಡೆಲಿವರಿ ಮಾಡಿದ ಅವರಿಗೆ ಸಹಾಯ ಮಾಡಬೇಕೆಂದುಕೊಂಡ ಆದಿತ್ಯಾ, ಟ್ವಿಟರ್‌ ಮೂಲಕ ಹಣ ಸಂಗ್ರಹಕ್ಕೆ ಕರೆ ಕೊಟ್ಟಿದ್ದಾರೆ. ಕೇವಲ ನಾಲ್ಕೇ ಗಂಟೆಗಳಲ್ಲಿ 75 ಸಾವಿರ ರೂ. ಸಂಗ್ರಹವಾಗಿದ್ದು, ಅದರಿಂದ ದುರ್ಗಾಗೆ ಹೊಸ ಬೈಕ್‌ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next