ನವದೆಹಲಿ: ಭಾರತ-ಆಸ್ಟ್ರೇಲಿಯ ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಮುಗ್ಗರಿಸಿದೆ. ಆದರೆ ಇಂದೋರ್ ಪಿಚ್‌ನ ಸ್ಪಿನ್ ಮೋಡಿ ಇತ್ತಂಡಗಳ ಆಟಗಾರರನ್ನೂ ಬಾಧಿಸಿತ್ತು. ಈದೀಗ ಮೂರೇ ದಿನದಲ್ಲಿ ಪಂದ್ಯ ಮುಗಿದಿದ್ದರೂ ನೆಟ್ಟಿಗರು ಈ ಪಿಚ್ ಬಗೆಗಿನ ಚರ್ಚೆಯನ್ನು ಇನ್ನೂ ಬಿಟ್ಟಂತಿಲ್ಲ.
ಇಂದೋರ್ ಪಿಚ್ ಬಗ್ಗೆ ಕ್ರಿಕೆಟ್ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗಳನ್ನು ನಡೆಸುತ್ತಿರುವ ಮಧ್ಯೆಯೇ ಪ್ರಖ್ಯಾತ ಆಹಾರ ಡೆಲಿವರಿ ಕಂಪೆನಿ ಝೋಮ್ಯಾಟೋ ಎಂದಿನಂತೆ ತನ್ನ ಫನ್ನಿ ಕಾಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದಿದೆ.
ಇಂದೋರ್‌ನ ಡ್ರೈ ಪಿಚ್‌ನಿಂದಾಗಿ ಪಂದ್ಯ ಅನಿರೀಕ್ಷಿತ ತಿರುವು ಪಡೆದುಕೊಂಡು ಭಾರತದ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿತ್ತು.
ಆದರೆ ಈ ನಡುವೆಯೂ ಟ್ವಿಟರ್‌ನಲ್ಲಿ ಪಿಚ್ ಬಗ್ಗೆ ಆಹಾರ ಸಂಬಂಧಿ ಟ್ವೀಟ್ ಮಾಡಿರುವ ಝೊಮ್ಯಾಟೋ ಇಂದೋರ್ ಪಿಚ್‌ನ್ನು ಭಾರತದ ಪ್ರಸಿದ್ಧ ಸಿಹಿ ತಿಂಡಿ ಜಿಲೇಬಿಗೆ ಹೋಲಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ.
Related Articles
ಝೋಮ್ಯಾಟೋ ಮಾಡಿರುವ ವೈರಲ್ ಟ್ವೀಟ್‌ನಲ್ಲಿ ʻಈ ಪಿಚ್‌ನಲ್ಲಿ ಜಿಲೇಬಿಯಲ್ಲಿರುವುದಕ್ಕಿಂತಲೂ ಹೆಚ್ಚು ಸುತ್ತುಗಳಿದ್ದವುʼ ಎಂದು ಹೇಳಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದ್ದು ಸುಮಾರು 30.3 ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿದೆ. ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಟಾಟಾ ಪ್ಲೇ ಬಿಂಗ್, ʻಆದರೂ ಸಾಲು ಸಾಲು ವಿಕೆಟ್ ಬೀಳುತ್ತಿದ್ದದ್ದು ಅಷ್ಟು ಸಿಹಿಯಾಗಿರಲಿಲ್ಲʼ ಎಂದಿದೆ.
ಇದನ್ನೂ ಓದಿ : ಇಂದೋರ್ ಟೆಸ್ಟ್ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಆಸೀಸ್