Advertisement
ಭಾರತ ತಂಡ ಶ್ರೀಲಂಕಾ ಪ್ರವಾಸ ಮುಗಿಸಿ ಆಗಸ್ಟ್‌ನಲ್ಲಿ ಜಿಂಬಾಬ್ವೆಗೆ ಕಿರು ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿತ್ತು. ಆ. 22ರಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬಾರದ ಕಾರಣ ಈ ಎರಡೂ ಪ್ರವಾಸ ಗಳನ್ನು ರದ್ದುಗೊಳಿಸಲಾಗಿದೆ ಎಂದು ಶಾ ಹೇಳಿದರು. ಶ್ರೀಲಂಕಾದಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿತ್ತು.
“ವಿದೇಶ ಪ್ರವಾಸಕ್ಕೂ ಮೊದಲು ಕ್ರಿಕೆಟಿಗರಿಗೆ ಸೂಕ್ತ ಅಭ್ಯಾಸ ಅಗತ್ಯವಿದೆ. ಈಗಿನ ಸ್ಥಿತಿಯಲ್ಲಿ ಕನಿಷ್ಠ ಆರು ವಾರಗಳ ಸಿದ್ಧತೆ ಬೇಕಿದೆ. ಆದರೆ ಕೋವಿಡ್-19ದಿಂದಾಗಿ ಬಹುತೇಕ ಆಟಗಾರರು ಮನೆಯೊಳಗೇ ಉಳಿದಿದ್ದಾರೆ. ಜುಲೈ ಒಳಗೆ ಅಭ್ಯಾಸ ಆರಂಭಗೊಳ್ಳುವ ಯಾವುದೇ ಸಾಧ್ಯತೆ ಇಲ್ಲ. ಹೀಗಾಗಿ ಪ್ರವಾಸವನ್ನು ರದ್ದುಗೊಳಿ ಸುವುದೊಂದೇ ನಮ್ಮ ಮುಂದಿರುವ ಮಾರ್ಗ’ ಎಂಬುದಾಗಿ ಜಯ್ ಶಾ ಹೇಳಿದರು. “ಸಂಪೂರ್ಣ ಸುರಕ್ಷಿತ’ ವಾತಾ ವರಣ ನಿರ್ಮಾಣಗೊಂಡ ಬಳಿಕವಷ್ಟೇ ಕ್ರಿಕೆಟಿಗರ ಅಭ್ಯಾಸ ಶಿಬಿರವನ್ನು ಆಯೋ ಜಿಸಲಾಗುವುದು ಎಂದೂ ತಿಳಿಸಿದರು. “ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಪುನರಾರಂಭಕ್ಕೆ ಮುಂದಡಿ ಇಡುತ್ತಲೇ ಇದೆ. ಆದರೆ ಗಡಿಬಿಡಿ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸರಕಾರ ಹಾಗೂ ಆರೋಗ್ಯ ಇಲಾಖೆಯ ಸೂಚನೆಯನ್ನು ಮೀರುವುದಿಲ್ಲ’ ಎಂದು ಶಾ ಸ್ಪಷ್ಟಪಡಿಸಿದರು.