Advertisement

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

01:34 PM Jun 24, 2024 | Team Udayavani |

ಮುಂಬೈ: ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜಿಂಬಾಬ್ವೆ ವಿರುದ್ದ ಭಾರತವು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ಸೋಮವಾರ ಅಥವಾ ಮಂಗಳವಾರ ತಂಡ ಪ್ರಕಟಿಸುವ ಸಾಧ್ಯತೆಯಿದೆ.

Advertisement

ಪಂದ್ಯಾವಳಿಯು ಜುಲೈ 06 ರಂದು ಪ್ರಾರಂಭವಾಗಲಿದ್ದು, ಭಾರತದ ಮುಂದಿನ ಯುವ ಕ್ರಿಕೆಟ್ ತಾರೆಯರು ಜಿಂಬಾಬ್ವೆಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಅನುಭವಿಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹವರು ಸಹ ತಂಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸುವ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ರೋಹಿತ್, ಹಾರ್ದಿಕ್ ಮತ್ತು ಸೂರ್ಯಕುಮಾರ್ ಅನುಸ್ಥಿತಿಯ ಕಾರಣದಿಂದ ಶುಭಮನ್ ಗಿಲ್ ಅವರು ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.

ವರದಿಯ ಪ್ರಕಾರ ತಂಡದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ತಾರೆಯರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ತುಷಾರ್ ದೇಶಪಾಂಡೆ ಮತ್ತು ಹರ್ಷಿತ್ ರಾಣಾ ಅವರನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡದೊಂದಿಗೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರೂ ಸೇರ್ಪಡೆಯಾಗಲಿದ್ದಾರೆ.

Advertisement

ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಅಂತ್ಯವಾದ ಕಾರಣ ಜಿಂಬಾಬ್ವೆ ಸರಣಿಗೆ ಹೊಸ ಕೋಚ್ ಬರಲಿದ್ದಾರೆ. ಆದರೆ ಕೋಚ್ ಆಯ್ಕೆ ನಿರ್ಧಾರ ಇನ್ನೂ ಪ್ರಕಟವಾಗದ ಕಾರಣದಿಂದ ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಅವರ ತಂಡ ಕೋಚಿಂಗ್ ಸಿಬ್ಬಂದಿಗಳಾಗಿ ಪ್ರಯಾಣ ಬೆಳೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next