Advertisement

ಜಿಂಬಾಬ್ವೆ: ಕೋವಿಡ್ 19 ವೈರಸ್ ನಡುವೆ ಮಲೇರಿಯಾದ ಚಿಂತೆ

01:02 AM Apr 23, 2020 | Team Udayavani |

ಮಣಿಪಾಲ: ಕೋವಿಡ್ 19 ವೈರಸ್ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿಡಿದು ಕುಣಿಸುತ್ತಿದ್ದರೆ ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳ ಹಿಂಡೇ ದಾಳಿ ಇಟ್ಟಿದೆ. ಇದೀಗ ಕೋವಿಡ್ 19 ವೈರಸ್ ಅಪ್ಪಳಿಸಿದ ಕಾರಣ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಈ ಮಧ್ಯೆ ಜಿಂಬಾಬ್ವೆಯಲ್ಲಿ ಕೋವಿಡ್ 19 ವೈರಸ್ ಮಧ್ಯೆ ಕನಿಷ್ಠ 131 ಜನರು ಮಲೇರಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ಆಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಕೋವಿಡ್‌ -19ರೊಂದಿಗೆ ಹೋರಾಡಲು ಹೆಣಗಾಡುತ್ತಿರುವ ದೇಶಕ್ಕೆ ಇನ್ನಷ್ಟು ಒತ್ತಡ ಹೆಚ್ಚಾಗಿದೆ. ದೇಶಾದ್ಯಂತ ಕೋವಿಡ್ 19 ವೈರಸ್ ಸೋಂಕಿನ ಪರಿಣಾಮ 201 ಸಾವು ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ 19 ವೈರಸ್‌ ಹರಡುವುದನ್ನು ತಡೆಯಲು ಜಿಂಬಾಬ್ವೆಯಲ್ಲಿ ಲಾಕ್‌ಡೌನ್‌ ಅನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ. ಹೆಚ್ಚಾಗಿ ಮಾನಿಕಾಲ್ಯಾಂಡ್‌, ಮಾಸ್ವಿಂಗೊ ಮತ್ತು ಮಶೋನಾಲ್ಯಾಂಡ್‌ನ‌ ಪೂರ್ವ ಭಾಗದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಿವೆ. ಆಲ್ಲಿನ ರಾಷ್ಟ್ರಗಳಲ್ಲಿ ಮಲೇರಿಯಾ ಸಾಮಾನ್ಯ ಕಾಯಿಲೆಗಳಾಗಿದ್ದು, ಜನರು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ.

ಎಲ್ಲಾ ವಯೋಮಾನದವರಲ್ಲಿ ಕಾಯಿಲೆ ಮತ್ತು ಸಾವಿಗೆ ಇದು ಕಾರಣವಾಗಿದೆ. ಜಿಂಬಾಬ್ವೆಯಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಬೆಚ್ಚಗಿನ ಮತ್ತು ಆರ್ದ್ರತೆಯ ಹವಾಮಾನದಲ್ಲಿ ಕಂಡುಬರುತ್ತದೆ. ಫೆಬ್ರವರಿ, ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಸಾಮಾನ್ಯ.

ಆಸ್ಪತ್ರೆಗಳ ಕೊರತೆ ಮತ್ತು ಗುಣಮಟ್ಟದ ವೈದ್ಯಕೀಯ ಸೌಲಭ್ಯ ಕೊರತೆ ಇದೆ. ಬಹಳಷ್ಟು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾವು ಸಂಭವಿಸದಿದ್ದರೆ ಅಂಕಿ ಅಂಶಗಳೇ ದಾಖಲೆಯಾಗದು. ಜಿಂಬಾಬ್ವೆಯಲ್ಲಿ ಮಲೇರಿಯಾ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದ್ದವು. ಆದರೀಗ ಏಕಾಏಕಿ ಹೆಚ್ಚಾಗಿದೆ.

Advertisement

ಕೋವಿಡ್‌ -19 ವಿರುದ್ಧ ಹೋರಾಡುವಾಗ ಮಲೇರಿಯಾ ಮೊದಲಾದ ಕಾಯಿಲೆಯತ್ತಲೂ ಸರಕಾರ ಗಮನಹರಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಿಂಬಾಬ್ವೆಯನ್ನು ಎಚ್ಚರಿಸಿದೆ. ಕೋವಿಡ್‌ – 19 ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳು ಮತ್ತು ವೈದ್ಯಕೀಯ ಸಿಬಂದಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು.

ಮಲೇರಿಯಾಕ್ಕೆ ಕಾರಣವಾಗಬಹುದಾದ ಅಥವ ಮಲೇರಿಯಾ ರೋಗಿಗಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಮೊದಲಾದವುಗಳನ್ನು ನಿಯಂತ್ರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಿಂಬಾಬ್ವೆಯ ಆರೋಗ್ಯ ಕ್ಷೇತ್ರವು ದುರ್ಬಲವಾಗಿದ್ದು, ವೈದ್ಯಕೀಯ ಸರಬರಾಜು ಕೊರತೆ ಸಾಕಷ್ಟಿದೆ. ಎರಡು ವಾರಗಳ ಹಿಂದೆ ಕೋವಿಡ್‌ -19 ವಿರುದ್ಧ ಕಾರ್ಯಾಚರಿಸುತ್ತಿರುವ ವೈದ್ಯರಿಗೆ ಪಿಪಿಇ ಒದಗಿಸದ ಹಿನ್ನೆಲೆಯಲ್ಲಿ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next