Advertisement
ಕೆಲ ದಿನಗಳ ಹಿಂದೆ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಬಳಿಕ ಮಾಜಿ ಜಿಂಬಾಬ್ವೆ ಆಟಗಾರ ಹೆನ್ರಿ ಒಲಾಂಗ ಅವರು ಸ್ಪಷ್ಟನೆ ನೀಡಿ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಸ್ಟ್ರೀಕ್ ನಿಧನದ ಸುದ್ದಿಯನ್ನು ಅವರ ಪತ್ನಿಯೇ ಖಚಿತಪಡಿಸಿದ್ದಾರೆ.
Related Articles
Advertisement
ಸ್ಟ್ರೀಕ್ ಜಿಂಬಾಬ್ವೆ ಅವರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. 65 ಟೆಸ್ಟ್‌ಗಳು ಮತ್ತು 189 ಏಕದಿನ ಪಂದ್ಯಗಳಲ್ಲಿ, ಸ್ಟ್ರೀಕ್ 455 ವಿಕೆಟ್ ಗಳನ್ನು ಪಡೆದಿದ್ದಾರೆ. 23 ಬಾರಿ ನಾಲ್ಕು-ವಿಕೆಟ್ ಗಳ ಮತ್ತು ಎಂಟು ಐದು-ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಅವರದ್ದು.
ಬ್ಯಾಟಿಂಗ್ ನಲ್ಲೂ ಪ್ರದರ್ಶನ ತೋರಿದ್ದ ಸ್ಟ್ರೀಕ್ ಟೆಸ್ಟ್ ಮತ್ತು ಏಕದಿನಗಳಲ್ಲಿ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದರು. ಅವರು ಒಂದು ಶತಕ ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
1993 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಸ್ಟ್ರೀಕ್ ಅವರು 2005 ರವರೆಗೆ ಆಡಿದರು. ಜಿಂಬಾಬ್ವೆಗಾಗಿ ಅವರ ಕೊನೆಯ ಮತ್ತು ಅಂತಿಮ ಅಂತಾರಾಷ್ಟ್ರೀಯ ಪ್ರದರ್ಶನವು ಸೆಪ್ಟೆಂಬರ್ 2005 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದಿತ್ತು.