ರಾಜ್ಯ ಸರ್ಕಾರವು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆಗಳನ್ನು ನಿರ್ವಹಣೆ ಮಾಡಲು 2021-22ನೇ ಸಾಲಿಗೆ 309.35 ಲಕ್ಷ ರೂ.ಅನುದಾನ ನಿಗದಿಪಡಿಸಿದ್ದು, ಪ್ರಸ್ತುತ ಯೋಜನೆಯಲ್ಲಿ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಪಡಿಸುವ 197 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 205.69 ಕಿ.ಮೀ. ಡಾಂಬರ್ ರಸ್ತೆ, 71.65 ಕಿ.ಮೀ. ಜಲ್ಲಿ ರಸ್ತೆ, 28.47 ಕಿ.ಮೀ. ಮಣ್ಣಿನ ರಸ್ತೆಗಳನ್ನು ನಿಗ ಪಡಿಸಲಾಗಿದೆ. ಎಲ್ಲ ರಸ್ತೆಗಳನ್ನು ಪೂರ್ಣಗೊಳಿಸಲಾಗಿದೆ.
Advertisement
ಜಿಲ್ಲಾ ಪಂಚಾಯಿತಿ ಶಾಸನಬದ್ಧ ಯೋಜನೆ (2515):2021-22 ನೇ ಸಾಲಿನ ಜಿಲ್ಲಾ ಪಂಚಾಯಿತಿಯ ಶಾಸನಬದ್ಧ(ಅಭಿವೃದ್ಧಿ) ಯೋಜನೆಯಡಿ 565.00 ಲಕ್ಷ ರೂ. ಅನುದಾನ ನಿಗದಿಪಡಿಸಿದ್ದು, ಪ್ರಸ್ತುತ ಯೋಜನೆಯಲ್ಲಿ ರಸ್ತೆ, ಸೋಲಾರ್ ದೀಪ, ಹೈಮಾಸ್ಟ್, ಕಟ್ಟಡ ದುರಸ್ತಿ, ಪಕ್ಕಾ ಗಟಾರ ನಿರ್ಮಾಣ ಒಟ್ಟಾರೆಯಾಗಿ 428 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಸದರಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
2021-22 ನೇ ಸಾಲಿಗೆ 16 ಪ್ರಾಥಮಿಕ ಶಾಲಾ ಕಟ್ಟಡ ಹಾಗೂ 4 ಪ್ರೌಢಶಾಲಾ ಕಟ್ಟಡ ನಿರ್ಮಿಸಲು 402.08 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಅಂಗನವಾಡಿ ಕಟ್ಟಡ ಕಾಮಗಾರಿಗಳು
ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲು 360.00 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಸದರಿ ಅನುದಾನದಲ್ಲಿ 20 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ 15 ಕಟ್ಟಡಗಳು ಪೂರ್ಣಗೊಂಡಿದ್ದು, 5 ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
Related Articles
ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಣೆಗಾಗಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು 275.05 ಲಕ್ಷ ರೂ.ಗಳ ಅನುದಾನ ಒದಗಿಸಿದ್ದು, 28 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಇದುವರೆಗೂ 25 ಘನತ್ಯಾಜ್ಯ ಘಟಕಗಳನ್ನು ಪೂರ್ಣಗೊಳಿಸಲಾಗಿದೆ. 3 ಕಾಮಗಾರಿಗಳು ಪ್ರಗತಿಯಲ್ಲಿವೆ.
Advertisement
ಪ್ರಾಥಮಿಕ-ಮಾಧ್ಯಮಿಕ ಶಾಲಾ ಕಟ್ಟಡಗಳು :ಸದರಿ ಯೋಜನೆಯಡಿಯಲ್ಲಿ ಒಟ್ಟು 2 ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, 1)ಹಾವೇರಿ ತಾಲೂಕಿನ ಗುತ್ತಲ ಗ್ರಾಮ 12855641.00 2ರೂ.) ಸವಣೂರ ತಾಲೂಕು ಚಿಲ್ಲೂರ ಬಡ್ನಿ ಗ್ರಾಮ 13169261.00 ರೂ.ಗಳಿಗೆ ಪ್ರೌಢಶಾಲಾ ಕಟ್ಟಡಗಳನ್ನು ನಿರ್ಮಿಸಲು ಮಂಜೂರು ಮಾಡಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಸಣ್ಣ ನೀರಾವರಿ ಕೆರೆಗಳ ಯೋಜನೆ: (ಲೆಕ್ಕಶೀರ್ಷಿಕೆ : 2702)
2021-22 ನೇ ಸಾಲಿಗೆ ಸಣ್ಣ ನೀರಾವರಿ ಕೆರೆ ಯೋಜನೆಯಡಿ ಸದರಿ ಸಾಲಿನಲ್ಲಿ 60.31 ಲಕ್ಷ ರೂ. ಅನುದಾನ ನಿಗದಿಪಡಿಸಿದ್ದು, 25 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.